ಅಗ್ನಿಪಥ್ ವಿವಾದ | 35 ವಾಟ್ಸ್ಆ್ಯಪ್ ಗ್ರೂಪ್‌ಗಳನ್ನು ನಿಷೇಧಿಸಿದ ಕೇಂದ್ರ ಸರ್ಕಾರ

Whatsapp Image
  • ದೇಶದಲ್ಲಿ 35 ವಾಟ್ಸ್ಆ್ಯಪ್ ಗ್ರೂಪ್‌ಗಳನ್ನು ಭಾನುವಾರ ಕೇಂದ್ರ ಸರ್ಕಾರ ನಿಷೇಧಿಸಿದೆ
  • ಗ್ರೂಪ್ ನಿರ್ವಾಹಕರ ವಿರುದ್ಧ ಸದ್ಯಕ್ಕೆ ಯಾವುದೇ ಕಾನೂನು ಕ್ರಮ ಕೈಗೊಂಡಿಲ್ಲ

ಅಗ್ನಿಪಥ್ ವಿಚಾರದ ಹಿನ್ನೆಲೆ ವಾಟ್ಸ್ಆ್ಯಪ್ ಗ್ರೂಪ್‌ಗಳಲ್ಲಿ ನಕಲಿ ಮಾಹಿತಿಗಳು ಹರಿದಾಡುತ್ತಿದೆ ಎನ್ನುವ ಆರೋಪದಲ್ಲಿ ಸುಮಾರು 35 ವಾಟ್ಸ್ಆ್ಯಪ್ ಗ್ರೂಪ್‌ಗಳನ್ನು ಕೇಂದ್ರ ಸರ್ಕಾರ ಭಾನುವಾರ ನಿಷೇಧಿಸಿದೆ.

ಆದರೆ ನಿರ್ವಾಹಕರ ವಿರುದ್ಧ ಸದ್ಯಕ್ಕೆ ಯಾವುದೇ ಕಾನೂನು ಕ್ರಮ ಕೈಗೊಂಡಿಲ್ಲ ಎಂದು ವರದಿಗಳಿಂದ ತಿಳಿದುಬಂದಿದೆ.

ಕಳೆದ ಹಲವು ದಿನಗಳಿಂದ ಅಗ್ನಿಪಥ್ ಯೋಜನೆಗೆ ರಾಷ್ಟ್ರಾದ್ಯಂತ ತೀವ್ರ ವಿರೋಧ ವ್ಯಕ್ತವಾಗಿದೆ. ಯುವಜನರು ಬೀದಿಯಲ್ಲಿ ಹಿಂಸಾಚಾರದ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಪ್ರತಿಭಟನೆಗಳಿಗೆ ಸಾಮಾಜಿಕ ಜಾಲತಾಣದಲ್ಲಿ ಒಂದಾದ ವಾಟ್ಸ್ಆ್ಯಪ್‌ನಲ್ಲಿ ಪ್ರಚೋದನೆ ಸಿಗುತ್ತಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಬಳಕೆದಾರರು ಹಲವು ಗ್ರೂಪ್‌ಗಳನ್ನು ತಯಾರಿಸಿ ಅದರಲ್ಲಿ ಅಗ್ನಿಪಥ್ ಸಂಬಂಧಿಸಿ ನಕಲಿ ಮಾಹಿತಿಗಳನ್ನು ಹರಡುವ ಜೊತೆಗೆ ವಿರೋಧ ಬೆಳೆಯಲು ಕಾರಣರಾಗುತ್ತಿದ್ದಾರೆ ಎಂದು ಸರ್ಕಾರ ಅಭಿಪ್ರಾಯಪಟ್ಟಿದೆ. ಹೀಗಾಗಿ ಇದನ್ನು ತಡೆಯಲು ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯ ದೇಶದಲ್ಲಿ 35 ವಾಟ್ಸ್ಆ್ಯಪ್ ಗ್ರೂಪ್‌ಗಳನ್ನು ಭಾನುವಾರ ನಿಷೇಧಿಸಿದೆ.

ಏನಿದು ಅಗ್ನಿಪಥ್ ಯೋಜನೆ?

ವಾರ್ಷಿಕ ರಕ್ಷಣಾ ಬಜೆಟ್‌ನ ಅರ್ಧದಷ್ಟಿರುವ ವಾರ್ಷಿಕ ವೇತನ ಮತ್ತು ಪಿಂಚಣಿಯ ಮೊತ್ತವನ್ನು ಗಣನೀಯವಾಗಿ ತಗ್ಗಿಸುವ ಉದ್ದೇಶದಿಂದ ಕೇಂದ್ರವು ‘ಅಗ್ನಿಪಥ್’ ಎಂಬ ಅಲ್ಪಾವಧಿ ನೇಮಕಾತಿ ಯೋಜನೆಯನ್ನು ಜೂನ್ 14ರಂದು ಘೋಷಿಸಿದೆ. 

ಈ ಸುದ್ದಿ ಓದಿದ್ದೀರಾ? ʼಅಗ್ನಿಪಥ್ʼ: ಏನಿದು ಯೋಜನೆ? ಯಾಕಿಷ್ಟು ವಿರೋಧ?

ಸರ್ಕಾರದ ಈ ಯೋಜನೆಯ ವಿರುದ್ಧ ದೇಶಾದ್ಯಂತ ವಿರೋಧ ವ್ಯಕ್ತವಾಗಿದ್ದು ಹಲವು ವಾಟ್ಸ್ಆ್ಯಪ್ ಗ್ರೂಪ್‌ನಲ್ಲಿ ವಿವಾದ ಶುರುವಾಗಿದೆ. ಹಾಗಾಗಿ ಸಾಮಾಜಿಕ ಮಾಧ್ಯಮದಲ್ಲಿ ಗಲಭೆ ತಡೆಯಲು ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯ ಕೆಲವು ವಾಟ್ಸ್ಆ್ಯಪ್ ಗ್ರೂಪ್‌ಗಳನ್ನು ನಿರ್ಬಂಧಿಸುವ ಮೂಲಕ ಈ ನಿರ್ಧಾರ ತೆಗೆದುಕೊಂಡಿದೆ. 

ವ್ಯಾಪಕ ಪ್ರತಿಭಟನೆಗಳ ನಡುವೆಯೂ 'ಅಗ್ನಿಪಥ್' ನೇಮಕಾತಿ ಯೋಜನೆಯನ್ನು ಹಿಂದಕ್ಕೆ ತಳ್ಳಿ, ಸೇನೆಯ ಮೂರು ಸೇವೆಗಳು ಭಾನುವಾರ ಹೊಸ ನೀತಿಯ ಅಡಿಯಲ್ಲಿ ದಾಖಲಾತಿಯ ವಿಶಾಲ ವೇಳಾಪಟ್ಟಿ ಹೊರತಂದಿವೆ ಮತ್ತು ಇದು ಸಶಸ್ತ್ರರ ವಯಸ್ಸಿನ ವಿವರವನ್ನು ತಗ್ಗಿಸುವ ಗುರಿಯನ್ನು ಹೊಂದಿದೆ ಎಂದು ಮಾಹಿತಿ ಮೂಲದಿಂದ ತಿಳಿದುಬಂದಿದೆ. 

ನಿಮಗೆ ಏನು ಅನ್ನಿಸ್ತು?
0 ವೋಟ್