ಗುರುಗ್ರಾಮ | 20 ದಿನಗಳಲ್ಲಿ 60 ಸೈಬರ್ ಅಪರಾಧಗಳು ದಾಖಲು

  • ಯಾವುದೇ 'ಸ್ಕ್ರೀನ್‌ ಶೇರಿಂಗ್‌' ಆ್ಯಪ್‌ ಬಳಸದಂತೆ ಸಲಹೆ
  • ಜನರು ಕಷ್ಟಪಟ್ಟು ದುಡಿದ ದುಡ್ಡು ಕದಿಯುವ ಆನ್‌ಲೈನ್‌ ಕಳ್ಳರು

ಕೇವಲ 20 ದಿನಗಳ ಅವಧಿಯಲ್ಲಿ ಸುಮಾರು 60 ಸೈಬರ್ ದೂರುಗಳು ಹರಿಯಾಣದ ಗುರುಗ್ರಾಮದಲ್ಲಿ ದಾಖಲಾಗಿವೆ.

ಜನವರಿ ಮೊದಲ ವಾರದಿಂದ 20 ದಿನಗಳ ಅವಧಿಯಲ್ಲಿ ಗುರುಗ್ರಾಮ ಪೊಲೀಸರು 60 ಸೈಬರ್ ದೂರುಗಳನ್ನು ಸ್ವೀಕರಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.

ಇತರರ ಸೂಚನೆ ಮೇರೆಗೆ ತಮ್ಮ ಮೊಬೈಲ್‌ಗಳಲ್ಲಿ 'ಸ್ಕ್ರೀನ್ ಶೇರಿಂಗ್ ಆ್ಯಪ್‌'ಗಳನ್ನು 'ಡೌನ್‌ಲೋಡ್' ಮಾಡದಂತೆ ಪೊಲೀಸರು ನಗರದ ಸಾರ್ವಜನಿಕರಿಗೆ ಸಲಹೆ ನೀಡಿದ್ದಾರೆ.

ಮೊಬೈಲ್ ಹ್ಯಾಕ್ ಮಾಡಲು ಐಟಿ ಕಂಪನಿಗಳು 'ಎನಿ ಡೆಸ್ಕ್‌', 'ಟೀಮ್‌ ವ್ಯೂವರ್', 'ಟೆಕ್‌ ಸಪೋರ್ಟ್‌' ಮುಂತಾದ 'ಆ್ಯಪ್‌'ಗಳನ್ನು ಬಳಸುತ್ತಿವೆ. 

"ಜನರು ಕಷ್ಟಪಟ್ಟು ಸಂಪಾದಿಸಿರುವ ಹಣವನ್ನು ವಂಚಿಸಲು ಸೈಬರ್ ಅಪರಾಧಿಗಳು ಈ ಆ್ಯಪ್‌ಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ವರ್ಷದ ಆರಂಭದಿಂದಲೂ ಇಂತಹ 60 ಸೈಬರ್ ದೂರುಗಳನ್ನು ಸ್ವೀಕರಿಸಲಾಗಿದೆ. ಸೈಬರ್ ಅಪರಾಧಿಗಳು ಮೊದಲು ಲಿಂಕ್ಡ್‌ಇನ್ ಮತ್ತು ಫೇಸ್‌ಬುಕ್‌ನಂತಹ ಆ್ಯಪ್‌ಗಳ ಮೂಲಕ ಮಾಹಿತಿ ಸಂಗ್ರಹಿಸುತ್ತಾರೆ" ಎಂದು ಡಿಸಿಪಿ ತಿಳಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಬಾಹ್ಯಕಾಶ ವಿಸ್ಮಯ | ನೋಡ ಬನ್ನಿ ನಾಸಾ ಹಂಚಿಕೊಂಡ ಸೌರಮಂಡಲದ ಅಧಿಪತಿಯ ಅದ್ಭುತ ಚಿತ್ರ

"ಮಾಹಿತಿ ಕಲೆ ಹಾಕಿದ ಬಳಿಕ ಕೆವೈಸಿ ನವೀಕರಣ, ವಿದ್ಯುತ್ ಬಿಲ್ ನವೀಕರಣ, ಕ್ರೆಡಿಟ್‌ ಕಾರ್ಡ್‌, ಡೆಬಿಟ್‌ ಕಾರ್ಡ್‌ ನವೀಕರಣ ಹಾಗೂ ಆಧಾರ್ ಕಾರ್ಡ್‌ ನವೀಕರಣ ಸೇರಿದಂತೆ ಇತರೆ ವಿಷಯಗಳನ್ನು ಪ್ರಸ್ತಾಪಿಸಿ ಕರೆ ಮಾಡುತ್ತಾರೆ. ನವೀಕರಣಕ್ಕಾಗಿ ಫೋನ್‌ಗಳಲ್ಲಿ 'ಸ್ಕ್ರೀನ್‌ ಶೇರಿಂಗ್‌' ಆ್ಯಪ್‌ ಡೌನ್‌ಲೋಡ್‌ ಮಾಡುವಂತೆ ಹೇಳುತ್ತಾರೆ" ಎಂದು ತಿಳಿಸಿದ್ದಾರೆ.

"ಆ್ಯಪ್ ಡೌನ್ಲೋಡ್‌ ಮಾಡಿಕೊಂಡ ತಕ್ಷಣ ಸೈಬರ್ ಅಪರಾಧಿಗಳು ಸಂತ್ರಸ್ತರ ಮೊಬೈಲ್ ಹ್ಯಾಕ್‌ ಮಾಡುವ ಮೂಲಕ ಅವರ ವಾಲೆಟ್‌ಗಳು ಮತ್ತು ನೆಟ್ ಬ್ಯಾಂಕಿಂಗ್ ಅಪ್ಲಿಕೇಶನ್‌ಗಳಿಂದ ಹಣ ಕದಿಯುತ್ತಾರೆ" ಎಂದು ಉಪಾಸನ ಹೇಳಿದ್ದಾರೆ.

ಈ ಕುರಿತು ಗುರುಗ್ರಾಮ ಪೊಲೀಸರು ಕೆಲವು ಸಲಹೆಗಳನ್ನು ನೀಡಿದ್ದಾರೆ. ಅಪರಿಚಿತ ವ್ಯಕ್ತಿಯಿಂದ ಕರೆ ಬಂದಾಗ ಅವರು ಹೇಳಿದ ಆ್ಯಪ್‌ ಡೌನ್ಲೋಡ್‌ ಮಾಡಬೇಡಿ. ಸಂದೇಶದಲ್ಲಿ ನೀಲಿ ಪಠ್ಯದಲ್ಲಿ ಬಂದಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡಬೇಡಿ, ತಕ್ಷಣವೇ ಮೊಬೈಲ್‌ನಲ್ಲಿ ಏರೋಪ್ಲೇನ್ ಮೋಡ್ ಅನ್ನು ಒತ್ತಿ ನಂತರ ಸೈಬರ್ ವಂಚನೆಯನ್ನು ತಕ್ಷಣವೇ 1930 ಕರೆ ಮಾಡಿ ತಿಳಿಸಿ" ಎಂದು ಹೇಳಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app