
- ಆ್ಯಪ್ ಸ್ಟೋರ್ನಲ್ಲಿ ಬರೋಬರಿ 97 ಬಾರಿ ಹಿಂದೆ ಸರಿದ ಫೇಸ್ಬುಕ್
- ಅಮೆರಿಕದಲ್ಲಿ ಬಿ ರಿಯಲ್ ಆ್ಯಪ್ ಮೊದಲ ಸ್ಥಾನ ಪಡೆದುಕೊಂಡಿದೆ
ಮೆಟಾ ಕಂಪನಿ ಒಡೆತನದ ಫೇಸ್ಬುಕ್ ಇದೀಗ ಕ್ರಮೇಣ ಅಮೆರಿಕದಲ್ಲಿ ಹಿಂದೆ ಸರಿಯುತ್ತಿದೆ. ಇದಕ್ಕೆ ಕಾರಣ 'ಬಿ ರಿಯಲ್' ಅಪ್ಲಿಕೇಶನ್ ಎಂದು ಇತ್ತೀಚೆಗೆ ಮಾಡಿದ ಸಮೀಕ್ಷೆ ವರದಿ ತಿಳಿಸಿದೆ. ಚೀನಾ ಮೂಲದ ಕಂಪನಿ ಇದಾಗಿದ್ದು, ಫೇಸ್ಬುಕ್ನ ಅರ್ಧದಷ್ಟು ಬಳಕೆದಾರರು ಇದರ ಕಡೆಗೆ ತೆರಳುತ್ತಿದ್ದಾರೆ ಎಂದು ವರದಿಯಾಗಿದೆ.
ಅಷ್ಟೇ ಅಲ್ಲದೆ, ಗೂಗಲ್ ಪ್ಲೇಸ್ಟೋರ್ ಮತ್ತು ಐಪೋನ್ ಆ್ಯಪ್ ಸ್ಟೋರ್ನ ಇತ್ತೀಚಿನ ಡಾಟಾಗಳ ಪ್ರಕಾರ ಅಮೆರಿಕದ 10 ಜನಪ್ರಿಯ ಆ್ಯಪ್ಗಳಲ್ಲಿ ಫೇಸ್ಬುಕ್ ಹಿಂದಕ್ಕೆ ಸರಿದಿದೆ ಎಂದು ತಂತ್ರಜ್ಞಾನ ಸುದ್ದಿ ಪ್ರಕಟಿಸುವ ವೆಬ್ಸೈಟ್ ಟೆಕ್ಕ್ರಂಚ್ ವರದಿ ಮಾಡಿದೆ.
ಐಫೋನ್ ನೀಡಿದ ವರದಿಯ ಪ್ರಕಾರ ಕಳೆದ ವರ್ಷ ಆ್ಯಪ್ ಸ್ಟೋರ್ನಲ್ಲಿ ಫೇಸ್ಬುಕ್ ಏಳು ಬಾರಿ ಹಿಂದೆ ಸರೆದಿತ್ತು. ಆದರೆ ಈ ವರ್ಷ ಬರೋಬರಿ 97 ಬಾರಿ ಹಿಂದೆ ಸರಿದಿದೆ.
ಆ್ಯಪಲ್ ಆ್ಯಪ್ ಸ್ಟೋರ್ ಹೊರತುಪಡಿಸಿ ಫೇಸ್ಬುಕ್ ಕಳೆದ ವರ್ಷ 7 ಸಾರಿ ಪ್ರಥಮ ಸ್ಥಾನದ ಪಟ್ಟಿಯಿಂದ ಹಿಂದೆ ಬಿದ್ದಿದ್ದರೆ, 2022ರಲ್ಲಿ 59 ಸಾರಿ ಹಿಂದೆ ಬಿದ್ದಿದೆ. ಎಲ್ಲ ದೇಶಗಳಲ್ಲಿಯೂ ಈಗ ಬಿ ರಿಯಲ್ ಐದನೇ ಸ್ಥಾನ ಪಡೆದರೆ, ಅಮೆರಿಕದಲ್ಲಿ ಗೇಮಿಂಗ್ ಅಪ್ಲಿಕೇಶನ್ ಹೊರತುಪಡಿಸಿದ ವರ್ಗದಲ್ಲಿ ಮೊದಲ ಸ್ಥಾನಕ್ಕೆ ಲಗ್ಗೆ ಇಟ್ಟಿದೆ ಎಂದು ಮಾಹಿತಿಗಳಿಂದ ತಿಳಿದುಬಂದಿದೆ.
ಮುಂದಿನ ದಿನಗಳಲ್ಲಿ ಈ ಅಪ್ಲಿಕೇಶನ್ ಎಲ್ಲ ದೇಶಗಳಲ್ಲೂ ಕಾರ್ಯನಿರ್ವಹಿಸಲು ಆರಂಭಿಸಲಿದೆ. ಜತೆಗೆ ಫೇಸ್ಬುಕ್ ಮತ್ತು ಟಿಕ್ಟಾಕ್ ಅಪ್ಲಿಕೇಶನ್ಗಳನ್ನು ಹಿಂದಿಕ್ಕಲಿದೆ ಎಂದು ಸಮೀಕ್ಷಾ ವರದಿ ಹೇಳಿದೆ.
ಈ ಅಪ್ಲಿಕೇಶನ್ 2020ರಲ್ಲಿ ಬಿಡುಗಡೆಯಾಗಿದ್ದು, ಕಾರ್ಯನಿರ್ವಹಿಸಲು ಪ್ರಾರಂಭಿಸಿದ ಕೆಲವೇ ವರ್ಷಗಳಲ್ಲಿ ಪ್ರಥಮ ಸ್ಥಾನ ಪಡೆದಿರುವುದು ಅಚ್ಚರಿಯ ವಿಷಯ ಎಂದು ಟೆಕ್ ಕ್ರಂಚ್ ವೆಬ್ಸೈಟ್ ತಿಳಿಸಿದೆ.