ಆಂಡ್ರಾಯ್ಡ್‌ನಲ್ಲಿ ಕ್ಯಾಷೆ ಮತ್ತು ಕುಕೀಸ್ ಡಿಲೀಟ್ ಮಾಡುವುದು ಹೇಗೆ?

  • ಸ್ಮಾರ್ಟ್ ಪೋನ್ ನಿಧಾನವಾಗಿ ಕೆಲಸ ಮಾಡಲು ಕುಕೀಸ್ ಕಾರಣ
  • ಬ್ರೌಸರ್‌ನಲ್ಲಿ ಕ್ಯಾಷೆ ಡಿಲೀಟ್ ಮಾಡಿದರೆ ಮೊಬೈಲ್‌ಗೆ ಸಿಗಲಿದೆ ವೇಗ

ಪೋನ್ ಆಗಾಗ ನಿಧಾನವಾಗಿ ಕೆಲಸಮಾಡುತ್ತಿದೆ ಎಂದು ನಿಮಗೆ ಅನಿಸುತ್ತಿದೆಯೇ? ಮೊಬೈಲ್ ಕಾರ್ಯಸಾಮರ್ಥ್ಯ ಮಿತಿ ಮೀರಿದ್ದಲ್ಲಿ ಹೀಗೆ ಆಗುವುದು ಸಹಜ. ನಿಮ್ಮ ಮೊಬೈಲ್‌ನಲ್ಲಿರುವ ಗೂಗಲ್ ಕ್ರೋಮ್, ಫೈರ್‌ಫಾಕ್ಸ್‌ ಮತ್ತು ಸ್ಯಾಮ್‌ಸಂಗ್ ಇಂಟರ್ನೆಟ್ ಸೇರಿದಂತೆ ಯಾವುದೇ ಮೊಬೈಲ್‌ನಲ್ಲಿ ವೆಬ್ ಬ್ರೌಸರ್‌ನಲ್ಲಿ ಸಂಗ್ರಹವಾಗಿರುವ ಕುಕೀಸ್‌ಗಳನ್ನು ಅಳಿಸುವುದರಿಂದ ಮೊಬೈಲ್ ವೇಗ ಹೆಚ್ಚಾಗುತ್ತದೆ.

ನೀವು ಬಳಸುವ ಸ್ಯಾಮ್‌ಸಂಗ್, ಗೊಗಲ್ ಪಿಕ್ಸಲ್‌ನಂತಹ ಯಾವುದೇ ಸ್ಮಾರ್ಟ್ ಪೋನ್‌ಗಳಲ್ಲಿ  ಆಗಾಗ ವೆಬ್ ಬ್ರೌಸರ್‌ನಲ್ಲಿರುವ ʻಕುಕೀಸ್ ಮತ್ತು ಕ್ಯಾಷೆʻ ಅಳಿಸುವುದರಿಂದ ನಿಮ್ಮ ಮೊಬೈಲ್ ಉತ್ತಮ ಸ್ಥಿತಿಯಲ್ಲಿರಲು ಮತ್ತು ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ. 

ಏನಿದು ಕ್ಯಾಷೆ? ಕುಕೀಸ್?

ಉದಾಹರಣೆಗೆ, ನೀವು ಬ್ರೌಸರ್‌ನಲ್ಲಿ ಬಟ್ಟೆ ಖರೀದಿಸಲೆಂದು ಸರ್ಚ್ ಮಾಡಿದ್ದರೆ ನೀವು ಸರ್ಚ್ ಮಾಡಿದ ಪ್ರತಿ ಚಟುವಟಿಕೆಯ ಮಾಹಿತಿಯನ್ನು ಕ್ಯಾಷೆ ಸಂಗ್ರಹಿಸಿಡುತ್ತದೆ. ಹಾಗಾಗಿ ಯಾವುದೇ ವೆಬ್ ಸೈಟ್‌ಗೆ ಪ್ರವೇಶಿಸಿದರೂ ಅಲ್ಲಿ ಈ ಮೊದಲು ಸರ್ಚ್ ಮಾಡಿದ ಬಟ್ಟೆಯ ಜಾಹಿರಾತುಗಳೇ ಕಾಣಲು ಆರಂಭಿಸುತ್ತವೆ. ಈ ಕ್ರಿಯೆಗೆ ಸಹಾಯ ಮಾಡುವುದು ಕ್ಯಾಷೆ. ಕುಕೀಸ್ ಎಂದರೆ ಪ್ರತಿ ಬಾರಿ ನಾವು ಸರ್ಚ್ ಮಾಡಿದಾಗಲೂ ನಮ್ಮ ಪಾಸ್‌ವರ್ಡ್ ಬಳಕೆದಾರರ ಆಯ್ಕೆ ಹಾಗೂ ಪುಟಕ್ಕೆ ಭೇಟಿ ನೀಡಿದ ಸಮಯ ಇಂತಹ ಮಾಹಿತಿಗಳನ್ನು ಸಂಗ್ರಹಿಸಿ ಟ್ಯಾಗ್‌ಗಳ ರೀತಿ ಕಾರ್ಯನಿರ್ವಹಿಸುತ್ತದೆ. ಇದರಿಂದಾಗಿ ವೆಬ್ ಬ್ರೌಸರ್‌ನ  ಸಂಗ್ರಹ ಸಾಮರ್ಥ್ಯ ಮೀರಿ ಮೊಬೈಲ್ ಕಾರ್ಯಕ್ಷಮತೆ ಕಡಿಮೆಯಾಗುತ್ತದೆ. 

ಆದರೆ ಎಲ್ಲ ಸ್ಮಾರ್ಟ್ ಪೋನ್‌ನಲ್ಲಿ ಒಂದೇ ರೀತಿ ಕುಕೀಸ್ ಮತ್ತು ಕ್ಯಾಷೆಯನ್ನು ತೆಗೆದು ಹಾಕಲು ಸಾಧ್ಯವಿಲ್ಲ, ಗೂಗಲ್ ಪಿಕ್ಸಲ್‌ನಂತಹ ಮೊಬೈಲ್‌ನಲ್ಲಿ ಆಂಡ್ರಾಯ್ಡ್, ಸ್ಯಾಮ್‌ಸಂಗ್ ಇಂರ್ಟನೆಟ್‌ನಲ್ಲಿ ಗ್ಯಾಲಕ್ಸಿ ಸಿರೀಸ್ ಹಾಗೂ ಆಪಲ್‌ನಲ್ಲಿ ಐಪೋನ್ ವೆಬ್ ಬ್ರೌಸರ್‌ನಂತಹ ಡೀಫಾಲ್ಟ್ ಸೆಟ್ಟಿಂಗ್‌ನಲ್ಲಿ ಮಾತ್ರ ಕುಕೀಸ್ ತಗೆದುಹಾಕಬಹುದು. 

ಕುಕೀಸ್ ಹೇಗೆ ತೆಗೆದು ಹಾಕಬಹುದು?
ಗೂಗಲ್ ಕ್ರೋಮ್: ಆಂಡ್ರಾಯ್ಡ್ ಪೋನ್‌ನಲ್ಲಿರುವ ಗೂಗಲ್ ಕ್ರೋಮ್‌ಗೆ ಪ್ರವೇಶಿಸಿ ನಂತರ ಬ್ರೌಸರ್‌ನ ಬಲಗಡೆಯಲ್ಲಿ, ಮೋರ್ ಬಟನ್ ಮೇಲೆ ಕ್ಲಿಕ್ ಮಾಡಿ. ತಕ್ಷಣ ಬ್ರೌಸಿಂಗ್ ಡೇಟಾ ಕಾಣಿಸುತ್ತದೆ ಅದರ ಮೇಲೆ ಕ್ಲಿಕ್ ಮಾಡಿದಾಕ್ಷಣ ಕುಕೀಸ್ ಮತ್ತು ಕ್ಯಾಷೆ, ಛಾಯ ಚಿತ್ರ ಮತ್ತು ಫೈಲ್‌ಗಳನ್ನು ತೆಗೆದುಹಾಕಲು ಅನುಮತಿ ಕೇಳುತ್ತದೆ, ಅದಕ್ಕೆ ಒಪ್ಪಿ ಡೇಟಾ ಆಯ್ಕೆ ಮಾಡಿ ಕ್ಲಿಯರ್ ಡೇಟಾ ಕೊಟ್ಟರೆ ಕುಕೀಸ್ ಮತ್ತು ಕ್ಯಾಷೆ ಸೇರಿದಂತೆ ಎಲ್ಲ ಡೇಟಾ ಕ್ಲಿಯರ್ ಆಗುತ್ತದೆ.

Image

ಸ್ಯಾಮ್ ಸಂಗ್ ಸಿರೀಸ್: ಪ್ರಮುಖವಾಗಿ ಎರಡು ರೀತಿಯಲ್ಲಿ ಡೇಟಾ ಕ್ಲಿಯರ್ ಮಾಡಬಹುದು. ಒಂದು ಮೊಬೈಲ್‌ನಲ್ಲಿ ಮತ್ತೊಂದು ಸ್ಯಾಮ್ ಸಂಗ್ ಕ್ರೋಮ್ ಸಿರೀಸ್‌ನಲ್ಲಿ. ಮೊಬೈಲ್‌ನಲ್ಲಿ ಸೆಟ್ಟಿಂಗ್ಸ್ ಅಪ್ಲಿಕೇಶನ್ ತೆರೆದು ಸ್ರ್ಕಾಲ್ ಮಾಡಿದರೆ ಸ್ಯಾಮ್ ಸಂಗ್ ಇಂಟರ್ನೆಟ್ ಬಟನ್ ಕಾಣಿಸುತ್ತದೆ. ಅದನ್ನು ಕ್ಲಿಕ್ ಮಾಡಿದ ಬಳಿಕ ಸ್ಟೋರೇಜ್ ಪ್ರವೇಶಿಸುತ್ತೇವೆ. ನಂತರ ಕುಕೀಸ್ ಮತ್ತು ಕ್ಯಾಷೆ, ಛಾಯಾ ಚಿತ್ರ ಮತ್ತು ಫೈಲ್‌ಗಳನ್ನು ತೆಗೆದುಹಾಕಲು ಅನುಮತಿ ಕೇಳುತ್ತದೆ. ಅದಕ್ಕೆ ಒಪ್ಪಿ ಡಿಲೀಟ್ ಬಟನ್ ಕ್ಲಿಕ್ ಮಾಡಿದರೆ ಎಲ್ಲ ಕ್ಯಾಷೆ ಕ್ಲಿಯರ್ ಆಗುತ್ತದೆ. 

Image

ಸ್ಯಾಮ್‌ಸಂಗ್ ಬ್ರೌಸರ್‌ಗೆ ಪ್ರವೇಶಿಸಿದರೆ ಅಲ್ಲಿ ಸೆಟ್ಟಿಂಗ್ಸ್ ಮೇಲೆ ಕ್ಲಿಕ್ ಮಾಡಿದ ನಂತರ ವ್ಯೆಯಕ್ತಿಕ ಮಾಹಿತಿ (Personel Data) ಕಾಲಂ ಕಾಣಿಸುತ್ತದೆ. ಅಲ್ಲಿ ಕ್ಲಿಕ್ ಮಾಡಿದರೆ ಕುಕೀಸ್ ಮತ್ತು ಕ್ಯಾಷೆ, ಛಾಯ ಚಿತ್ರ ಮತ್ತು ಫೈಲ್‌ಗಳನ್ನು ತೆಗೆದುಹಾಕಲು ಅನುಮತಿ ಕೇಳುತ್ತದೆ. ಅದಕ್ಕೆ ಒಪ್ಪಿದರೆ ಎರಡು ಬಾರಿ ಡಿಲೀಟ್ ಮಾಡುವ ಆಯ್ಕೆ ನೀಡುತ್ತದೆ. ಒಪ್ಪಿ 'ಓಕೆ' ಕ್ಲಿಕ್ ಮಾಡಿದರೆ ಎಲ್ಲ ಡೇಟಾ ಕ್ಲಿಯರ್ ಆಗುತ್ತದೆ.  

ನಿಮಗೆ ಏನು ಅನ್ನಿಸ್ತು?
1 ವೋಟ್