ದೃಶ್ಯರೂಪದ ವಸ್ತುಗಳನ್ನು ಕಣ್ಮುಂದೆ ತರುವ ಮೆಟಾವರ್ಸ್ ತಂತ್ರಜ್ಞಾನ; ಎಐ ತಂತ್ರಜ್ಞರಿಗೆ ವಿಫುಲ ಉದ್ಯೋಗವಕಾಶ ಸಾಧ್ಯತೆ

ಮೆಟಾವರ್ಸ್ ಎನ್ನುವುದು ವರ್ಚುವಲ್ ರಿಯಾಲಿಟಿ ವಿಶ್ವವಾಗಿದ್ದು, ಕೃತಕ ಬುದ್ಧಿಮತ್ತೆ, ಆಗ್ಮೆಂಟೆಡ್ ರಿಯಾಲಿಟಿ, ವರ್ಚುವಲ್ ರಿಯಾಲಿಟಿ ಮುಂತಾದ ವಿವಿಧ ತಂತ್ರಜ್ಞಾನ ಬಳಸಿ ಬಳಕೆದಾರರ ಸಂವಹನ ಸಕ್ರಿಯಗೊಳಿಸುತ್ತದೆ.
Meta Image

ಕೃತಕ ಬುದ್ಧಿಮತ್ತೆ ಮತ್ತು ಮೆಟಾವರ್ಸ್ ಸೇರಿ ವರ್ಚುವಲ್ ರೂಪಾಂತರ ತಂತ್ರಜ್ಞಾನವೊಂದು ನಿಧಾನವಾಗಿ ಬೆಳೆಯುತ್ತಿದೆ. ಇದಲ್ಲದೆ, ಮೆಟಾವರ್ಸ್‌ನ ಮುಂದಿನ ಭವಿಷ್ಯವು ಉಜ್ವಲವಾಗಿರುವುದರಿಂದ ಎಐ ತಂತ್ರಜ್ಞಾನ ತಜ್ಞರಿಗೆ ಅತೀವ ಬೇಡಿಕೆ ಬರಲಿದೆ. 

ಮೆಟಾವರ್ಸ್ ಎನ್ನುವುದು ವರ್ಚುವಲ್ ರಿಯಾಲಿಟಿ ಯೂನಿವರ್ಸ್ ಆಗಿದ್ದು, ಇದು ಕೃತಕ ಬುದ್ಧಿಮತ್ತೆ, ಆಗ್ಮೆಂಟೆಡ್ ರಿಯಾಲಿಟಿ, ವರ್ಚುವಲ್ ರಿಯಾಲಿಟಿ ಮುಂತಾದ ವಿವಿಧ ತಂತ್ರಜ್ಞಾನಗಳನ್ನು ಬಳಸಿಕೊಂಡು ಬಳಕೆದಾರರ ಸಂವಹನಗಳನ್ನು ಸಕ್ರಿಯಗೊಳಿಸುತ್ತದೆ.

ಇದಲ್ಲದೆ, ಬಳಕೆದಾರರಿಗೆ ವಿವಿಧ ರೀತಿಯ ತಂತ್ರಜ್ಞಾನಗಳನ್ನು ಬಳಸಿ 3ಡಿ ಡಿಜಿಟಲ್ ಉಪಕರಣಗಳು ಮತ್ತು ವರ್ಚುವಲ್ ಅವತಾರ್‌ಗಳೊಂದಿಗೆ ತೊಡಗಿಸಿಕೊಳ್ಳಲು ಸಹಾಯ ಮಾಡುತ್ತದೆ. ಹೀಗೆ ಇನ್ನೂ ಅನೇಕ ವರ್ಚುವಲ್ ರಿಯಾಲಿಟಿ ಬಳಸಿ, ದೃಶ್ಯರೂಪದಲ್ಲಿರುವ ವಸ್ತುಗಳು ಕಣ್ಮುಂದೆ ಬರುವ ಹಾಗೆ ತರಲು ಬೆಳವಣಿಗೆಗಳನ್ನು ಪರಿಚಯಿಸುವ ಮೂಲಕ ಕೃತಕ ಬುದ್ಧಿಮತ್ತೆ ಮತ್ತು ಮೆಟಾವರ್ಸ್ ಸಹಕರಿಸುತ್ತಿವೆ.

ಏನಿದು ಮೆಟಾವರ್ಸ್ ಇದು ಹೇಗೆ ಕಾರ್ಯನಿರ್ವಹಿಸುತ್ತದೆ?

ಮೆಟಾವರ್ಸ್ ಎನ್ನುವುದು ವರ್ಚುವಲ್ ರಿಯಾಲಿಟಿ (ವಿಆರ್), ಹೆಡ್ಸೆಟ್ ಮೂಲಕ ನೋಡಬಹುದಾದ 3ಡಿ ವರ್ಚುವಲ್ ಪ್ರಪಂಚ ಇದಾಗಿದೆ. ಬಳಕೆದಾರರು ತಮ್ಮ ಕಣ್ಣಿನ ಚಲನೆಗಳು, ಧ್ವನಿ ಆಜ್ಞೆಗಳು ಮತ್ತು ಪ್ರತಿಕ್ರಿಯೆ ನಿಯಂತ್ರಕಗಳ ಮೂಲಕ ಈ ಪ್ರಪಂಚವನ್ನು ಕಾಣಬಹುದು. ಹೆಡ್ಸೆಟ್‌ನೊಂದಿಗೆ, ಬಳಕೆದಾರರು ತಲ್ಲೀನಗೊಳಿಸುವ ಜಗತ್ತನ್ನು ಅನುಭವಿಸಬಹುದು ಮತ್ತು ಮೆಟಾವರ್ಸ್‌ ಅನ್ನು ಜನರು ಅವತಾರ್‌ಗಳ ಮೂಲಕ ಪರಸ್ಪರ ಸಂವಹನ ನಡೆಸುತ್ತಾರೆ. ಗೇಮಿಂಗ್, ಶಾಪಿಂಗ್ ಇನ್ನೂ ಹೆಚ್ಚಿನ ಚಟುವಟಿಕೆಗಳಲ್ಲಿ ಭಾಗವಹಿಸುವ ಮೂಲಕ ಬಳಕೆದಾರರು ಅನುಭವಿಸುತ್ತಾರೆ. 

ಎಮರ್ಜೆನ್ ರಿಸರ್ಚ್ ವರದಿಯ ಪ್ರಕಾರ, ಮೆಟಾವರ್ಸ್ ಮಾರುಕಟ್ಟೆಯು 2028ರ ವೇಳೆಗೆ 800 ಡಾಲರ್ ಶತಕೋಟಿಯಷ್ಟು ತಲುಪಲಿದೆ. ಮೆಟಾವರ್ಸ್ ತಂತ್ರಜ್ಞಾನವು ಗೇಮಿಂಗ್, ಶಿಕ್ಷಣ, ವಾಣಿಜ್ಯ, ಸರ್ಕಾರಿ ಸೇವೆಗಳು, ಸಾಮಾಜಕೀಕರಣ ಸೇರಿದಂತೆ ಬಹಳ ಆಳವಾಗಿದೆ.

ಕೃತಕ ಬುದ್ಧಿಮತ್ತೆ ಎಂದರೇನು?

ಕೃತಕ ಬುದ್ಧಿಮತ್ತೆ ಎನ್ನುವುದು ಕಂಪ್ಯೂಟರ್ ವಿಜ್ಞಾನದ ಒಂದು ಶಾಖೆ, ಮಾನವನ ಬುದ್ಧಿಮತ್ತೆ ಅನುಕರಿಸುವ ಸಾಮರ್ಥ್ಯವನ್ನು ಹೊಂದಿರುವ ಸ್ಮಾರ್ಟ್ ಯಂತ್ರಗಳನ್ನು ನಿರ್ಮಿಸುವುದರ ಮೇಲೆ ಕೇಂದ್ರೀಕರಿಸಿದೆ. ಕೃತಕ ಬುದ್ಧಿಮತ್ತೆ ಅಲ್ಗಾರಿದಮ್‌ಗಳು ಪರಸ್ಪರ ಸಂಬಂಧಗಳು ಮತ್ತು ಡೇಟಾವನ್ನು ಬೃಹತ್ ಪ್ರಮಾಣದಲ್ಲಿ ವಿಶ್ಲೇಷಿಸುತ್ತವೆ.

Image
AI image

ಕೃತಕ ಬುದ್ಧಿಮತ್ತೆ ವ್ಯವಸ್ಥೆಗಳು ಮಾನವರಿಗಿಂತ ಹೆಚ್ಚು ವೇಗ ಮತ್ತು ನಿಖರವಾಗಿ ಡೇಟಾವನ್ನು ಪ್ರಕ್ರಿಯೆಗೊಳಿಸುವ ಸಾಮರ್ಥ್ಯ ಹೊಂದಿವೆ. ಉದಾಹರಣೆಗೆ ಅಲೆಕ್ಸಾ, ಸ್ವಯಂ-ಚಾಲನಾ ಕಾರುಗಳು, ಸಂಭಾಷಣೆಯ ಬಾಟ್‌ಗಳು, ರೋಬೋ ಸಲಹೆಗಾರರು, ಇಮೇಲ್ ಸ್ಪ್ಯಾಮ್ ಫಿಲ್ಟರ್‌ಗಳು ಇತ್ಯಾದಿ. 

ಬ್ಲಾಕ್‌ಚೈನ್‌, ಕೃತಕ ಬುದ್ಧಿಮತ್ತೆ ಮತ್ತು ವಿಸ್ತೃತ ರಿಯಾಲಿಟಿ ಒಟ್ಟಿಗೆ ಹೇಗೆ ಕೆಲಸ ಮಾಡುತ್ತದೆ?

ವಿಸ್ತೃತ ರಿಯಾಲಿಟಿ ಹಿಂದೆಂದೂ ಅಸ್ತಿತ್ವದಲ್ಲಿರದ ವರ್ಚುವಲ್ ಪ್ರಪಂಚವನ್ನು ಸೃಷ್ಟಿಸಲಿದೆ. ಬ್ಲಾಕ್‌ಚೈನ್‌ ವಿಕೇಂದ್ರೀಕರಣವನ್ನು ತಂದಿದೆ, ಇದರ ಪರಿಣಾಮವಾಗಿ ಕೇಂದ್ರೀಕೃತ ಆಡಳಿತ ಪ್ರಾಧಿಕಾರ ಸ್ಥಾಪಿಸುವ ಮೂಲಕ ಇವುಗಳು ಕಾರ್ಯನಿರ್ವಹಿಸಲಿವೆ. 

ಮೆಟಾವರ್ಸ್‌ನ ಪ್ರಮುಖ ಅಂಶವೇ ನಾನ್‌ಫಂಗಬಲ್‌ ಟೋಕನ್‌ (ಎನ್ಎಫ್‌ಟಿಗಳು). ಇದು ಬ್ಲಾಕ್‌ಚೈನ್‌ ಉತ್ಪನ್ನವಾಗಿದೆ. ಮೆಟಾವರ್ಸ್‌ನಲ್ಲಿರುವ ಎಲ್ಲಾ ವಸ್ತುಗಳು, ಭೂಮಿ, ವಾಹನ, ಹಡಗುಗಳು, ಉಡುಗೊರೆಗಳು ಇವೆಲ್ಲವೂ ಸಹ ಮೂಲಭೂತವಾಗಿ ಎನ್ಎಫ್‌ಟಿಗಳಾಗಿವೆ. ನಾನ್‌ಫಂಗಬಲ್‌ ಟೋಕನ್‌ಗಳು ಮೆಟಾವರ್ಸ್‌ನ ಬೆನ್ನೆಲುಬಾಗಿ ಕಾರ್ಯನಿರ್ವಹಿಸಲಿದೆ. 

ಮೆಟಾವರ್ಸ್‌ನಲ್ಲಿ ಕೃತಕ ಬುದ್ಧಿಮತ್ತೆಯು ವಿಡಿಯೋ ಗುಣಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ಲೈವ್ ವರ್ಚುವಲ್ ಸಮ್ಮೇಳನಗಳಂತಹ ಹೊಸ ಉತ್ಪನ್ನಗಳನ್ನು ರಚಿಸಲು ಬಳಕೆದಾರರಿಗೆ ಅನುವು ಮಾಡಿಕೊಡುತ್ತದೆ. ಇದು ಮುಖ್ಯವಾಗಿ ಮೆಟಾವರ್ಸ್‌ನ ಇಂಟರ್ಫೇಸ್ ಸಾಮರ್ಥ್ಯ ತುಂಬಲಿದೆ. 

ಮೆಟಾವರ್ಸ್‌ನ ಸವಾಲುಗಳು ಏನು?

ತಂತ್ರಜ್ಞಾನವು ವರ್ಚುಲ್ ರಿಯಾಲಿಟಿಯ ಸುತ್ತಮುತ್ತಲಿನ ದೃಷ್ಟಿಯ ಕೊರತೆ ಮತ್ತು ಚಿತ್ರಾತ್ಮಕ ನಿರ್ಬಂಧಗಳಂತಹ ಮಿತಿಗಳನ್ನು ಹೊಂದಿದ್ದವು. ಆದರೆ ಮೆಟಾವರ್ಸ್‌ ಚಟುವಟಿಕೆಗಳು ನೈಜ ಜಗತ್ತಿನಲ್ಲಿ ಸಾಮಾನ್ಯವಾಗಿ ಆನ್‌ಲೈನ್‌ ಆಟಗಳಂತೆ ಕಾರ್ಯನಿರ್ವಹಿಸಲಿದೆ. 

ಡಿಸೆಂಟ್ರಾಲ್ಯಾಂಡ್‌ನಲ್ಲಿ, ಭಾಗವಹಿಸುವ ಮೂಲಕ ಬಳಕೆದಾರರು ಆಟಗಳನ್ನು ಆಡುವುದು ಮತ್ತು ವರ್ಚುವಲ್ ರಿಯಲ್ ಎಸ್ಟೇಟ್‌ ಖರೀದಿಸಿ ಮಾರಾಟ ಮಾಡಬಹುದು. 

Image
Decentraland

ಸ್ಯಾಂಡ್‌ಬಾಕ್ಸ್‌ ಗೇಮಿಂಗ್ ಪರಿಸರ ವ್ಯವಸ್ಥೆಯನ್ನು ನೀಡುತ್ತದೆ. ಅದು ಬಳಕೆದಾರರಿಗೆ ಗೇಮಿಂಗ್ ಸ್ವತ್ತುಗಳನ್ನು ರಚಿಸಲು, ಹಂಚಿಕೊಳ್ಳಲು ಮತ್ತು ಹಣಗಳಿಸಲು ಅನುವು ಮಾಡಿಕೊಡುತ್ತದೆ ಆದರೆ ಮೀಟ್‌ಕೈ ನೈಜ ಪ್ರಪಂಚಕ್ಕಿಂತ ಗುಣಾತ್ಮಕವಾಗಿ ಉತ್ತಮವಾದ ವಾಸ್ತವಿಕ ಮೆಟಾವರ್ಸ್‌ನನ್ನು ರಚಿಸುವ ಮೂಲಕ ಮೆಟಾವರ್ಸ್‌ಗೆ ಪೈಪೋಟಿ ನೀಡಲಿದೆ. 

ಸಂವಾದಾತ್ಮಕ ಕೃತಕ ಬುದ್ಧಿಮತ್ತೆ ಮೆಟಾವರ್ಸ್‌ ಅನ್ನು ಹೇಗೆ ರೂಪಿಸುತ್ತದೆ?

ಮೆಟಾವರ್ಸ್‌ನಲ್ಲಿ ಕೃತಕ ಬುದ್ಧಿಮತ್ತೆ ಒಂದು ವ್ಯಕ್ತಿಗತ ಯಂತ್ರವಾಗಿದ್ದು, ಅದು ಅವತಾರ್‌ಗಳ ಆದ್ಯತೆಗಳ ಆಧಾರದ ಮೇಲೆ ವಿವಿಧ ಶಿಫಾರಸುಗಳನ್ನು ನೀಡುತ್ತದೆ. ಧ್ವನಿ ತಂತ್ರಜ್ಞಾನವು ಹೆಚ್ಚು ಸಂದರ್ಭೋಚಿತ ಮತ್ತು ವೈಯಕ್ತೀಕರಿಸಲ್ಪಟ್ಟಿದೆ. ಈ ಪ್ರಕ್ರಿಯೆಯಲ್ಲಿ ಮೆಟಾವರ್ಸ್ ಇಂಟರ್‌ಫೇಸ್‌ ಅನ್ನು ಚುರುಕಾಗಿ ತಯಾರಿಸಲಾಗಿದೆ. ಮೀಟ್‌ಕೈ ಕೃತಕ ಬುದ್ಧಿಮತ್ತೆಯ ಸಹಯೋಗದೊಂದಿಗೆ ಮಾತನಾಡುವಷ್ಟು ಸುಲಭವಾಗಿ ಧ್ವನಿ ಸಹಾಯವನ್ನು ಮಾಡಲಾಗಿದೆ. 

Image
MeetKai

ಉದಾಹರಣೆಗೆ, "ಹೇ ಕೈ, ನನಗೆ ಉತ್ತಮವಾದ ಪಾಕವಿಧಾನ ಹುಡುಕಬಹುದೇ?" ಎಂದು ಹೇಳುವ ಮೂಲಕ "ಸ್ವೀಟ್"ಗಾಗಿ ಪಾಕವಿಧಾನವನ್ನು ವಿನಂತಿಸಿದ ಸೆಕೆಂಡುಗಳಲ್ಲಿ ವಿಶ್ವದ ಅತ್ಯಂತ ರುಚಿಕರವಾದ "ಸ್ವೀಟ್" ಪಾಕವಿಧಾನವನ್ನು ಸ್ವೀಕರಿಸುತ್ತೀರಿ. ಹೀಗೆ ಇನ್ನೂ ಅನೇಕ ರೀತಿಯಲ್ಲಿ ಮೀಟ್‌ಕೈ ಕೃತಕ ಬುದ್ಧಿಮತ್ತೆಗೆ ಸಹಾಯ ಮಾಡಲಿದೆ.

ಮೆಟಾವರ್ಸ್‌ನಲ್ಲಿ ಕೃತಕ ಬುದ್ಧಿಮತ್ತೆಯ ಸವಾಲುಗಳು

  • ಮೊದಲಿಗೆ ಉದ್ಭವಿಸುವ ಸವಾಲು ಏನೆಂದರೆ ಮಾಲೀಕತ್ವ ಮತ್ತು ಹಕ್ಕುಸ್ವಾಮ್ಯ. ಎನ್ಎಫ್‌ಟಿಗಳನ್ನು ಯಾರು ರಚಿಸುತ್ತಾರೆ ಅವರು ಇದರ ಮಾಲೀಕತ್ವವನ್ನು ಯಾರು ಹೊಂದಿರುತ್ತಾರೆ ಎನ್ನುವ ಪ್ರಶ್ನೆಯಿದೆ.
  • ಮೆಟಾವರ್ಸ್‌ನಲ್ಲಿ ಕೃತಕ ಬುದ್ಧಿಮತ್ತೆಯ ತಂತ್ರಜ್ಞಾನಗಳಿಂದ ಕಾನೂನು ಮತ್ತು ನ್ಯಾಯಯುತ ಬಳಕೆಯಂತಹ ಸವಾಲುಗಳನ್ನು ಎದರಿಸಬೇಕಾಗುತ್ತದೆ. 
  • ಯಾವುದೇ ನಿಖರವಾದ ಮಾಹಿತಿಯು ಇರುವುದಿಲ್ಲ ಮತ್ತು ಇದರಿಂದ ವಂಚನೆಯ ಚಟುವಟಿಕೆಗಳು ಹೆಚ್ಚಾಗುವ ಸಾಧ್ಯತೆ ಇರಲಿದೆ.
ನಿಮಗೆ ಏನು ಅನ್ನಿಸ್ತು?
0 ವೋಟ್