ಭಾರತದಲ್ಲಿ ಎರಡು ಲಕ್ಷಕ್ಕಿಂತ ಅಧಿಕ ವಾಟ್ಸ್ಆ್ಯಪ್ ಖಾತೆ ನಿರ್ಬಂಧಿಸಿದ ಕೇಂದ್ರ ಸರ್ಕಾರ

Whatsapp Account Banned Image
  • ವಾಟ್ಸ್ಆ್ಯಪ್‌ಗೆ ಒಂದೇ ತಿಂಗಳಲ್ಲಿ ಸುಮಾರು 632 ಖಾತೆಗಳ ಮೇಲೆ ದೂರು
  • ಈಗಾಗಲೇ 426 ಖಾತೆ ನಿರ್ಬಂಧಿಸಲಾಗಿದೆ ಮತ್ತು 64 ಖಾತೆಗಳ ಮೇಲೆ ಕ್ರಮ 

ಜೂನ್ ತಿಂಗಳಲ್ಲಿ ತಂತ್ರಜ್ಞಾನ ಸಚಿವಾಲಯದ ಅಡಿ ಕೇಂದ್ರ ಸರ್ಕಾರ ಸುಮಾರು ಎರಡು ಲಕ್ಷಕ್ಕಿಂತ ಹೆಚ್ಚು ವಾಟ್ಸ್ಆ್ಯಪ್ ಖಾತೆಗಳನ್ನು ನಿರ್ಬಂಧಿಸಿದೆ ಎಂದು 'ಸಾಮಾಜಿಕ ಸಂದೇಶ ರವಾನೆ ವೇದಿಕೆ'ಯ 'ಬಳಕೆದಾರರ ಸುರಕ್ಷತೆ' ಬಗೆಗಿನ ಮಾಸಿಕ ವರದಿಯಿಂದ ತಿಳಿದು ಬಂದಿದೆ.

ಲೈಂಗಿಕ ಚಟುವಟಿಕೆಗಳಿಗೆ ಸಂಬಂಧಿಸಿ ಫೇಸ್‌ಬುಕ್‌ 2.5 ಲಕ್ಷ ಮಾಹಿತಿಗಳ ಮೇಲೆ (ಪೋಸ್ಟ್‌ಗಳು, ಫೋಟೋಗಳು, ವಿಡಿಯೊಗಳು, ಕಮೆಂಟ್‌ಗಳು) ಕ್ರಮ ಕೈಗೊಂಡಿದೆ. ಆಷ್ಟೇ ಅಲ್ಲದೆ, ಫೋಟೋ ಮತ್ತು ವಿಡಿಯೋ ಹಂಚಿಕೆ ಸೈಟ್‌ಗಳಾದ ಇನ್‌ಸ್ಟಾಗ್ರಾಮ್‌ನಲ್ಲಿ ಕೂಡ ಅದೇ ತಿಂಗಳಲ್ಲಿ 619,500 ಮಾಹಿತಿಗಳನ್ನು ಅಳಿಸಿ ಹಾಕಿದೆ ಮತ್ತು ಈ ಎಲ್ಲ ಕ್ರಮಗಳನ್ನು ಮಾಹಿತಿ ತಂತ್ರಜ್ಞಾನ ಇಲಾಖೆಯ ನಿಯಮ 2021ರ ಅನುಸಾರ ಕೈಗೊಳ್ಳಲಾಗಿದೆ.

ಒಂದೇ ತಿಂಗಳಲ್ಲಿ ವಾಟ್ಸ್ಆ್ಯಪ್‌ಗೆ ಸಂಬಂಧಿಸಿದ ಸುಮಾರು 632 ಖಾತೆಗಳ ಮೇಲೆ ದೂರು ಬಂದಿದೆ. ಅದರಲ್ಲಿ ಈಗಾಗಲೇ 426 ಖಾತೆಗಳನ್ನು ನಿರ್ಬಂಧಿಸಲಾಗಿದೆ ಮತ್ತು ಉಳಿದ 64 ಖಾತೆಗಳ ಮೇಲೆ ಕಠಿಣ ಕ್ರಮಕೈಗೊಳ್ಳಲಾಗಿದೆ. ಇದರ ಜೊತೆಗೆ ನಿಯಮ ಉಲ್ಲಂಘಿಸಿದ ಕಾರಣದಿಂದಾಗಿ ಎರಡು ಲಕ್ಷಕ್ಕಿಂತ ಅಧಿಕ ಖಾತೆಗಳನ್ನು ನಿಷೇಧಿಸಲಾಗಿದೆ ಎಂದು ಐಟಿ ಸಚಿವಾಲಯ ವರದಿ ಮಾಡಿದೆ.

ಕುಂದುಕೊರತೆ ವಾಹಿನಿಯ ಮೂಲಕ ಬಳಕೆದಾರರಿಗೆ ಪ್ರತಿಕ್ರಿಯೆ ನೀಡಿದ ಸಂಸ್ಥೆ, “ಈವರೆಗೂ ಸ್ವೀಕರಿಸಿದ ಎಲ್ಲ ಬಳಕೆದಾರರ ದೂರುಗಳನ್ನು ಪರಿಗಣಿಸಲಾಗುವುದು. ವಾಟ್ಸ್ಆ್ಯಪ್‌ನಲ್ಲಿ ಯಾವುದೇ ಹಾನಿಕಾರಕ ಮಾಹಿತಿ ಹರಡದ ಹಾಗೆ ತಡೆಯಲು ಕ್ರಮಕೈಗೊಳ್ಳಲಾಗುವುದು. ಹಾನಿ ಸಂಭವಿಸುವ ಮೊದಲೇ ಹಾನಿಯನ್ನು ತಡೆಯುವುದು ನಮ್ಮ ಉದ್ದೇಶ. ಅದಕ್ಕಾಗಿ ಕ್ರಮ ಕೈಗೊಳ್ಳುತ್ತಿದ್ದೇವೆ” ಎಂದು ವಾಟ್ಸ್ಆ್ಯಪ್ ಸಂಸ್ಥೆ ವರದಿ ಮಾಡಿದೆ. 

ಯಾವ ಆಧಾರದ ಮೇಲೆ ಖಾತೆ ನಿರ್ಬಂಧಿಸಲಾಗುತ್ತದೆ?

ಮೂರು ರೀತಿಯಲ್ಲಿ ಖಾತೆ ನಿರ್ಬಂಧಿಸಲಾಗುತ್ತದೆ. ಮೊದಲಿಗೆ ಅಪ್ಲಿಕೇಶನ್ ಬಳಕೆದಾರರು ನೀಡುವ ತಿಂಗಳ ಪ್ರತಿಕ್ರಿಯೆಯಾಗಿರಬಹುದು ಮತ್ತು ಸಂದೇಶ ರವಾನಿಸುವ ಸಮಯದಲ್ಲಿ ಬಳಕೆದಾರರು ಯಾವುದೇ ಖಾತೆ ನಿರ್ಬಂಧಿಸಿದರೆ ನಿಷೇಧಕ್ಕೆ ಕಾರಣವಾಗುತ್ತದೆ. ಅಷ್ಟೇ ಅಲ್ಲದೆ, ಯಾವುದೇ ಖಾತೆ ನಿಯಮ ಉಲ್ಲಂಘಿಸಿದರೂ ಕ್ರಮಕೈಗೊಳ್ಳಲಾಗುವುದು. ಹೀಗೆ ಮೂರು ತರಹ ಖಾತೆಗಳನ್ನು ನಿಷೇಧಿಸಲಾಗುತ್ತದೆ ಎಂದು ಸಂಸ್ಥೆ ತಿಳಿಸಿದೆ.

ಜೂನ್ 1ರಿಂದ ಜೂನ್ 30ರವರೆಗೆ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ ಅಪ್ಲಿಕೇಶನ್‌ನಲ್ಲಿ ಈವರೆಗೂ ಸುಮಾರು 564 ಖಾತೆಗಳ ಮೇಲೆ ದೂರು ದಾಖಲಾಗಿದೆ. ಅದರಲ್ಲಿ ಬಹುತೇಕ ನಕಲಿ ಖಾತೆಗಳು ಎಂದು ಗುರುತಿಸಲಾಗಿದೆ. ಉಳಿದ ಖಾತೆಗಳಲ್ಲಿ ಲೈಂಗಿಕ ಚಟುವಟಿಕೆ ನಡೆಯುತ್ತಿದ್ದವು ಅಥವಾ ಹ್ಯಾಕರ್‌ಗಳು ಬಳಸುತ್ತಿರುವುದು ಪತ್ತೆಯಾಗಿ ಕ್ರಮ ಕೈಗೊಳ್ಳಲಾಗಿದೆ.

ಈ ಸುದ್ದಿ ಓದಿದ್ದೀರಾ? ವಾಟ್ಸ್ಆ್ಯಪ್‌ನಲ್ಲಿ ನೂತನ ಫೀಚರ್ ಲಭ್ಯ; ಗ್ರೂಪ್ ನಿರ್ವಾಹಕರಿಗೆ ಸಿಹಿ ಸುದ್ದಿ  

ಇದಕ್ಕೆ ಸಂಬಂಧಿಸಿ ಭಾರತ ಸರ್ಕಾರ ಐಟಿ ಸಚಿವಾಲಯದ ಅಡಿಯಲ್ಲಿ ಕೇಂದ್ರ ಕುಂದು ಕೊರತೆ ಮೇಲ್ಮನವಿ ಸಮಿತಿ ರಚನೆಯಾಗಲಿದೆ. ಇದರಲ್ಲಿ ಪ್ರತ್ಯೇಕವಾಗಿ ಸಾಮಾಜಿಕ ಜಾಲತಾಣದಲ್ಲಿ ನಡೆಯುವ ಕುಂದು ಕೊರತೆಯ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಮತ್ತು ಐದು ಲಕ್ಷಕ್ಕೂ ಹೆಚ್ಚು ಬಳಕೆದಾರರನ್ನು ಹೊಂದಿರುವ ಯಾವುದೇ ದೊಡ್ಡ ಡಿಜಿಟಲ್ ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಗಳು ಭಾರತದ ಐಟಿ ನಿಯಮಗಳಿಗೆ ಅನುಸಾರವಾಗಿ ಮಾಸಿಕ ಅನುಸರಣೆ ವರದಿಗಳನ್ನು ಒದಗಿಸಬೇಕು ಎಂದು ಸರ್ಕಾರ ತಿಳಿಸಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್