ಪಾಕಿಸ್ತಾನಿ ಪತ್ರಕರ್ತರು, ರಾಜತಾಂತ್ರಿಕರ ಟ್ವಿಟರ್ ಖಾತೆ ನಿಷೇಧಿಸಿದ ಭಾರತ

Twitter Image
  • ನಿಷೇಧಿತರಲ್ಲಿ ವಿಶ್ವಸಂಸ್ಥೆ, ಟರ್ಕಿನಲ್ಲಿರುವ ಪಾಕಿಸ್ತಾನಿ ರಾಯಭಾರಿ ಕಚೇರಿ ಖಾತೆ ಸೇರಿವೆ
  • ರಾಜತಾಂತ್ರಿಕರ ಟ್ವಿಟರ್ ಖಾತೆ ನಿಷೇಧ ಹಿಂಪಡೆಯುವಂತೆ ಒತ್ತಾಯಿಸಿದ ಪಾಕಿಸ್ತಾನ ಸರ್ಕಾರ

ಮಾಹಿತಿ ತಂತ್ರಜ್ಞಾನ ಕಾಯ್ದೆ 2000ರ ಅಡಿಯಲ್ಲಿ ಹಲವಾರು ಪಾಕಿಸ್ತಾನಿ ರಾಜತಾಂತ್ರಿಕ ನಿಯೋಗಗಳು, ಪತ್ರಕರ್ತರು, ರಾಜತಾಂತ್ರಿಕರು ಹಾಗೂ ಕೆಲವು ಪ್ರಮುಖ ವ್ಯಕ್ತಿಗಳ ಅಧಿಕೃತ ಟ್ವಿಟರ್ ಖಾತೆಗಳನ್ನು ಭಾರತ ನಿಷೇಧಿಸಿದೆ ಎಂದು ಇಸ್ಲಾಮಾಬಾದ್‌ನ ವಿದೇಶಾಂಗ ಸಚಿವಾಲಯ ಹೇಳಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.

“ನಿಷೇಧಿತ ಖಾತೆಗಳಲ್ಲಿ ವಿಶ್ವಸಂಸ್ಥೆ, ಟರ್ಕಿ, ಇರಾನ್ ಹಾಗೂ ಈಜಿಪ್ಟ್‌ನಲ್ಲಿರುವ ಪಾಕಿಸ್ತಾನಿ ರಾಯಭಾರಿ ಕಚೇರಿಯ ಖಾತೆಗಳು ಸೇರಿವೆ. ಭಾರತದಲ್ಲಿ ಬಹುತ್ವದ ವಾಕ್‌ಸ್ವಾತಂತ್ರ್ಯ ಕಡಿಮೆಯಾಗುತ್ತಿರುವುದು ಮತ್ತು ಮಾಹಿತಿ ಪಡೆಯುವ ಅವಕಾಶವನ್ನು ತಡೆಯುತ್ತಿರುವುದು ಅತ್ಯಂತ ಆತಂಕಕಾರಿ” ಎಂದು ಪಾಕಿಸ್ತಾನದ ವಿದೇಶಾಂಗ ಖಾತೆ ಟ್ವೀಟ್ ಮಾಡಿದೆ.

ಸಾಮಾಜಿಕ ಮಾಧ್ಯಮ ವೇದಿಕೆಗಳಿಗೆ ಅನ್ವಯವಾಗುವ ಅಂತಾರಾಷ್ಟ್ರೀಯ ಮಾನದಂಡಗಳಿಗೆ ಬದ್ಧವಾಗಿರಬೇಕು ಎಂದು ಪಾಕಿಸ್ತಾನದ ವಿದೇಶಾಂಗ ಸಚಿವಾಲಯ ಟ್ವಿಟರ್‌ಗೆ ಕರೆ ನೀಡಿದೆ.

ನಿರ್ಬಂಧಿತ ಖಾತೆಗಳಿಗೆ ಪ್ರವೇಶವನ್ನು ತಕ್ಷಣವೇ ಮರುಸ್ಥಾಪಿಸಬೇಕು. ವಾಕ್ ಮತ್ತು ಅಭಿವ್ಯಕ್ತಿಯ ಪ್ರಜಾಸತ್ತಾತ್ಮಕ ಸ್ವಾತಂತ್ರ್ಯಗಳಿಗೆ ಬದ್ಧವಾಗಿರುವುದನ್ನು ಖಚಿತಪಡಿಸಿಕೊಳ್ಳಲು ಪಾಕಿಸ್ತಾನದ ಸರ್ಕಾರವು ಟ್ವಿಟರ್ ಕಂಪನಿಯ ಬಳಿ ಖಾತೆಗಳನ್ನು ಮುರುಪಡೆಯಲು ಒತ್ತಾಯಿಸುತ್ತಿದೆ.

ಕ್ರಮವಾಗಿ ಲಂಡನ್‌ಲ್ಲಿರುವ 'ದಿ ನ್ಯೂಸ್' ಮತ್ತು 'ಜಿಯೋ ನ್ಯೂಸ್' ವರದಿಗಾರರಾದ ಮುರ್ತಾಜಾ ಅಲಿ ಶಾ ಮತ್ತು ಸಿಜೆ ವೆರ್ಲೆಮನ್ ಸೇರಿದಂತೆ ಹಲವು ಪತ್ರಕರ್ತರ ಟ್ವಿಟರ್ ಖಾತೆಗಳನ್ನು ಭಾರತದ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಅಡಿಯಲ್ಲಿ ತಡೆಹಿಡಿಯಲಾಗಿದೆ ಎಂದು ಪಾಕಿಸ್ತಾನದ 'ಜಿಯೋ ನ್ಯೂಸ್' ವರದಿ ಮಾಡಿದೆ.

ನಿಮಗೆ ಏನು ಅನ್ನಿಸ್ತು?
1 ವೋಟ್