ರೈಲಿನಲ್ಲಿ ದೂರದ ಪ್ರಯಾಣ ಮಾಡುವವರಿಗೆ ಸಿಹಿ ಸುದ್ದಿ

Indian Railway
  • ವೇಕಪ್ ಅಲಾರಾಂ ಪರಿಚಯಿಸಿದ ರೈಲ್ವೆ ಇಲಾಖೆ
  • ಮೂರು ರೂಪಾಯಿ ತೆತ್ತು ಅಲಾರಂ ಹೊಡೆಸಿಕೊಳ್ಳಿ

ರೈಲಿನಲ್ಲಿ ಪ್ರಯಾಣ ಮಾಡುವವರಿಗೆ ರೈಲ್ವೆ ಇಲಾಖೆ ‘ಡೆಸ್ಟಿನೇಶನ್ ಅಲರ್ಟ್ ವೇಕಪ್ ಅಲಾರಾಂ’ ಎಂಬ ಸೌಲಭ್ಯ ಪರಿಚಯಿಸಿದೆ.

ಪ್ರತಿದಿನ ರೈಲಿನಲ್ಲಿ ಪ್ರಯಾಣ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಅದರಲ್ಲೂ ದೂರದ ಊರಿಗೆ ಹೋಗುವವರು, ರಾತ್ರಿ ಹೊತ್ತು ನಿದ್ರಿಸಿ ಪ್ರಯಾಣ ಮಾಡಬೇಕಾಗುತ್ತದೆ ಅಂತಹ ಸಮಯದಲ್ಲಿ ಗಾಢ ನಿದ್ರೆಗೆ ಪ್ರಯಾಣಿಕರು ಜಾರಬಹುದು. ಇದರಿಂದ ಅವರು ತಲುಪುವ ನಿರ್ದಿಷ್ಟ ಸ್ಥಳ ಬಿಟ್ಟು ಮುಂದೆ ಸೇರಬಹುದು. ಇದನ್ನು ಅರಿತ ಭಾರತ ರೈಲ್ವೆ ಇಲಾಖೆ, ಪ್ರಯಾಣಿಕರಿಗೆ ಎಂದೇ ‘ಡೆಸ್ಟಿನೇಶನ್ ಅಲರ್ಟ್ ವೇಕಪ್ ಅಲಾರಾಂ’ ಎಂಬ ಸೌಲಭ್ಯ ಪರಿಚಯಿಸಿದೆ.

ರೈಲಿನಲ್ಲಿ ರಾತ್ರಿ ಹೊತ್ತು ಪ್ರಯಾಣಿಸುವವರನ್ನು ಗಮನದಲ್ಲಿಟ್ಟು ತಯಾರಾದ ಅಲರ್ಟ್ ಸೌಲಭ್ಯ ರಾತ್ರಿ 11ರಿಂದ ಬೆಳ್ಳಿಗೆ 7 ರವರೆಗೆ ಪಡೆಯಬಹುದು. ಅವರು ತಲುಪುವ ಸ್ಥಳಕ್ಕಿಂತ 20 ನಿಮಿಷಗಳ ಮೊದಲೇ ಪ್ರಯಾಣಿಕರನ್ನು ಅಲಾರಾಂ ಮೂಲಕ ಎಚ್ಚರಿಸಲಿದೆ. ಇದರಿಂದ ನಿದ್ದೆಯಲ್ಲಿದ್ದ ಪ್ರಯಾಣಿಕರು ಬೇಗನೇ ಎದ್ದು ತಮ್ಮ ನಿಲ್ದಾಣದಲ್ಲಿ ಇಳಿಯಲು ಅನುಕೂಲವಾಗಲಿದೆ.

ಈ ಸುದ್ದಿ ಓದಿದ್ದೀರಾ? ವಾರದ ಟೆಕ್ ನೋಟ | ಭಾರತದ ರೈಲ್ವೆ ನಿಲ್ದಾಣದಲ್ಲಿ ಇ-ಚಾರ್ಜಿಂಗ್ ವ್ಯವಸ್ಥೆ

ವೇಕಪ್ ಅಲಾರಾಂ ಅಲರ್ಟ್ ಮಾಡುವುದು ಹೇಗೆ?

ಈ ಸೌಲಭ್ಯವು ಧ್ವನಿ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ. ರೈಲಿನಲ್ಲಿ ನೀವು ರಾತ್ರಿ ಹೊತ್ತು ಪ್ರಯಾಣಿಸುವಾಗ ನಿದ್ರಿಸುವ ಮೊದಲು 139 ಸಂಖ್ಯೆಗೆ ಕರೆ ಮಾಡಿ ಅಥವಾ ಅಲರ್ಟ್ ಮೀ ಜೊತೆಗೆ ಪ್ರಯಾಣಿಕರ 10 ಸಂಖ್ಯೆಯ ಪಿಎನ್ಆರ್‌ ಬರೆದು ಆ ನಂಬರ್‌ಗೆ ಸಂದೇಶ ಕಳುಹಿಸಿ. ನಂತರ ಕರೆ ಮಾಡಿದಲ್ಲಿ ದೃಢೀಕರಣಕ್ಕಾಗಿ ಒಂದನ್ನು ಒತ್ತಿ. ಬಳಿಕ ನಿಮ್ಮ ಮೊಬೈಲ್‌ಗೆ ಸಂದೇಶ ರವಾನೆಯಾಗುತ್ತದೆ. ಹೀಗೆ ಪ್ರತಿ ಎಚ್ಚರಿಕೆಗೆ ತಲಾ ಮೂರು ರೂಪಾಯಿಯಂತೆ ಸಂದೇಶದ ಶುಲ್ಕ ಕಡಿತವಾಗುತ್ತದೆ. 

ಹೀಗೆ ಮಾಡುವುದರಿಂದ ಪ್ರಯಾಣಿಕರು ಸರಿಯಾದ ಸಮಯಕ್ಕೆ ಅವರ ಊರು ತಲುಪಬಹುದು. ಕೆಲವೊಮ್ಮೆ ಇದರ ಬದಲಿಗೆ ನಿಮ್ಮ ಮೊಬೈಲ್‌ನಲ್ಲಿ ಅಲಾರಾಂ ಕೂಡ ಇಟ್ಟುಕೊಂಡು ನಿದ್ರಿಸಬಹುದು. ಮೊಬೈಲ್ ಇದ್ದವರಿಗೆ ಮಾತ್ರ ಈ ಸಹಾಯಕವಾಣಿ ಲಭ್ಯ.

ನಿಮಗೆ ಏನು ಅನ್ನಿಸ್ತು?
6 ವೋಟ್