ಐಟಿ ನಿಯಮಗಳನ್ನು ಬದಲಾಯಿಸಿ ಮರುಪ್ರಕಟಿಸಿದ ಮಾಹಿತಿ ಸಚಿವಾಲಯ

IT Ministry Image
  • 2021ರ ಐಟಿ ನಿಯಮಗಳನ್ನು ತಿದ್ದುಪಡಿ ಮಾಡಿ ಮರುಪ್ರಕಟಿಸಿದೆ
  • ಜೂನ್‌ನಲ್ಲಿ ಸಾರ್ವಜನಿಕ ಸಭೆ ಏರ್ಪಡಿಸಲಿರುವ ಸಚಿವಾಲಯ

ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ 2021ರ ಐಟಿ ನಿಯಮಗಳಿಗೆ ಸಂಬಂಧಿಸಿದಂತೆ ತಿದ್ದುಪಡಿ ಮಾಡಿ ಹೊಸ ಕರಡನ್ನು ಮರುಪ್ರಕಟಿಸಿದೆ. ಮುಂದಿನ 30 ದಿನಗಳಲ್ಲಿ ಈ ಬಗ್ಗೆ ಏನಾದರೂ ಆಕ್ಷೇಪಣೆಗಳಿದ್ದಲ್ಲಿ ಉತ್ತರಿಸುವಂತೆ ಸಾಮಾಜಿಕ ಜಾಲತಾಣಗಳ ಕಂಪನಿಗಳಿಗೆ ಸೂಚಿಸಿದೆ. ಕಳೆದ ವಾರ, ಕರಡು ತಿದ್ದುಪಡಿಗಳನ್ನು ಬಿಡುಗಡೆ ಮಾಡಿದ ಕೆಲವೇ ಗಂಟೆಗಳಲ್ಲಿ ಸಚಿವಾಲಯವು ಹಿಂತೆಗೆದುಕೊಂಡಿತ್ತು.

ಭಾರತ ಸಂವಿಧಾನದ ಅಡಿಯಲ್ಲಿ 'ಸೋಷಿಯಲ್ ಮೀಡಿಯಾ' ಕಂಪನಿಗಳು ಮತ್ತು ಬಳಕೆದಾರರಿಗೆ ಎಂದು ತಯಾರಾದ 2021ರ ಐಟಿ ನಿಯಮಗಳನ್ನು ಮೆಟಾ, ಟ್ವಿಟರ್‌ ಮತ್ತು ಯುಟ್ಯೂಬ್‌ನಂತಹ ದೊಡ್ಡ ಕಂಪನಿಗಳು ಗೌರವಿಸಬೇಕು ಎಂದು ಮಾಹಿತಿ ಸಚಿವಾಲಯ ತಿಳಿಸಿದೆ.

ಭಾರತದಲ್ಲಿ ಡಿಜಿಟಲ್ ವ್ಯವಸ್ಥೆ ಮತ್ತು ಸಂಪರ್ಕಿತ ಇಂಟರ್ನೆಟ್ ಬಳಕೆದಾರರ ಸಂಖ್ಯೆ ಹೆಚ್ಚಾದಂತೆ ಅವರು ಎದುರಿಸುತ್ತಿರುವ ಸವಾಲುಗಳು ಮತ್ತು ಸಮಸ್ಯೆಯನ್ನು ತಂತ್ರಜ್ಞಾನ ಕಂಪನಿಗಳು ಅರಿತು ಅದನ್ನು ಪರಿಹರಿಸಬೇಕು ಎಂದು ಸಚಿವಾಲಯ ತಮ್ಮ ಹೊಸ ನಿಯಮಗಳಲ್ಲಿ ಪ್ರಸ್ತಾಪಿಸಿದೆ.

ಈ ಸುದ್ದಿ ಓದಿದ್ದೀರಾ? ರೈಲಿನಲ್ಲಿ ದೂರದ ಪ್ರಯಾಣ ಮಾಡುವವರಿಗೆ ಸಿಹಿ ಸುದ್ದಿ

AV Eye Hospital ad

ಈ ಬಗ್ಗೆ ಜೂನ್ ಮಧ್ಯದಲ್ಲಿ ಸಾರ್ವಜನಿಕ ಸಮಾಲೋಚನಾ ಸಭೆಯನ್ನು ಸಚಿವಾಲಯ ಏರ್ಪಡಿಸುತ್ತಿದೆ. ಆದರೆ ಈ ನಿಯಮದ ತಿದ್ದುಪಡಿಗಳಿಂದ ಭಾರತೀಯ ಸ್ಟಾರ್ಟ್ಅಪ್‌ಗಳಿಗೆ ಹಾಗೂ ಕಂಪನಿಗಳ ಬೆಳವಣಿಗೆಗೆ ಯಾವುದೇ ತರಹದ ಪರಿಣಾಮ ಬೀರುವುದಿಲ್ಲ ಎಂದು ಐಟಿ ಸಚಿವಾಲಯ ತಿಳಿಸಿದೆ.

ಕೆಲವು ಮಧ್ಯವರ್ತಿ ಕಂಪನಿಗಳು ಈ ನಿಯಮಗಳನ್ನು ಖಾತರಿಪಡಿಸುವ ಮೂಲಕ ಅವುಗಳನ್ನು ಗೌರವಿಸಬೇಕು ಮತ್ತು ನಾಗರಿಕರ ಸಾಂವಿಧಾನಿಕ ಹಕ್ಕುಗಳನ್ನು ಉಲ್ಲಂಘಿಸಿದ ಕಾರಣದಿಂದಾಗಿ ತಿದ್ದುಪಡಿಗಳು ಅವಶ್ಯಕ ಎಂದು ಮಾಹಿತಿ ಸಚಿವಾಲಯ ಹೇಳಿದೆ.

ದೊಡ್ಡ ಕಂಪನಿಗಳು ಮಾಡುವ ಕುಂದುಕೊರತೆಗಳ ವಿರುದ್ಧ ಮೇಲ್ಮನವಿ ಸಲ್ಲಿಸುವ ಹಕ್ಕನ್ನು ಬಳಕೆದಾರರು ಹೊಂದಿರುತ್ತಾರೆ ಎಂದು ಸರ್ಕಾರ ರಚಿಸಿರುವ ಮೇಲ್ಮನವಿ ಸಮಿತಿ ಪ್ರಸ್ತಾವನೆಯಲ್ಲಿ ತಿಳಿಸಿದೆ. ಕೆಲವು ದೂರುಗಳು ಸೈಬರ್ ಕ್ರೈಂಗೆ ದಾಖಲಿಸಿದ ನಂತರ ಅದು ಸಮಾಜಿಕ ಮಾಧ್ಯಮದಲ್ಲಿ ಹರಡುವ ಮುಂಚೆಯೇ ಅವುಗಳನ್ನು 72 ಗಂಟೆಯೊಳಗೆ ಪರಿಹರಿಸಬೇಕು ಎಂದು ಸಚಿವಾಲಯ ಹೇಳಿದೆ.

ಈ ವರ್ಷದ ಆರಂಭದಲ್ಲೇ ಸಾಮಾಜಿಕ ಮಾಧ್ಯಮಗಳಿಗೆ ಕಟ್ಟುನಿಟ್ಟಾದ ಕ್ರಮ ಮತ್ತು ಮಾನದಂಡಗಳನ್ನು ಸರ್ಕಾರ ಸಿದ್ಧಪಡಿಸಿದೆ ಹಾಗೂ ದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಮೈಕ್ರೋ ಬ್ಲಾಗಿಂಗ್‌ಗಳು ಇದರ ಜವಾಬ್ದಾರರಾಗಿರುತ್ತಾರೆ ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app