3ಡಿ ಅವತಾರ್ ಫೀಚರ್ ಪರಿಚಯಿಸಿದ ಇನ್‌ಸ್ಟಾಗ್ರಾಂ

Instagram Avatar Image
  • ಅವತಾರ್‌ ಬಳಸಿ ತಮ್ಮದೇ ಆದ 3ಡಿ ಸ್ಟಿಕರ್ ರಚಿಸಬಹುದು
  • ‌ಹಳೆಯ ಇನ್‌ಸ್ಟಾಗ್ರಾಂನಲ್ಲಿ ಈ ಫೀಚರ್ ಲಭ್ಯವಿರಲಿಲ್ಲ

ಸಾಮಾಜಿಕ ಜಾಲತಾಣಗಳಲ್ಲಿ ಒಂದಾದ ಇನ್‌ಸ್ಟಾಗ್ರಾಂ, ಈಗ ಮೆಟಾ ಸಹಾಯದಿಂದ 3ಡಿ ಅವತಾರ್ ಪರಿಚಯಿಸಿದೆ. ಇದೊಂದು ವಿಶೇಷ ವೈಶಿಷ್ಟ್ಯವಾಗಿದ್ದು, ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಮಾತ್ರ ಹಂಚಿಕೊಳ್ಳಲು ಲಭ್ಯ.. ಈ ಅವತಾರ್ ಮೊದಲು ಪರಿಚಯಿಸಿರುವುದು ಸ್ನಾಪ್‌ಚಾಟ್ ಅಪ್ಲಿಕೇಶನ್‌ನಲ್ಲಿ. ತದನಂತರ ಜನವರಿ 31ರಂದು ಇನ್‌ಸ್ಟಾಗ್ರಾಂ ಕೂಡ ಅದನ್ನೇ ಹೋಲುವ 3ಡಿ ಅವತಾರ್ ಎಂಬ ಹೆಸರಿನ ಪೀಚರ್ ಪರಿಚಯಿಸಿದೆ.

ಏನಿದು 3ಡಿ ಅವತಾರ್?

Eedina App

ಇದೊಂದು ಮಾನವನ ಪ್ರತಿರೂಪ ಹೊಲುವ ವೈಶಿಷ್ಟ್ಯ. ನಿಮ್ಮದೇ ಆಕಾರವಿರುವ 3ಡಿ ಅವತಾರ್ ರಚಿಸಬಹುದು. ಮೂಲತಃ ವ್ಯಕ್ತಿಯನ್ನು ಪ್ರತಿನಿಧಿಸುವ ಐಕಾನ್ ಆಕೃತಿಗೆ ಅನುಗುಣವಾಗಿ 3ಡಿ ಅವತಾರ್‌ ವಿನ್ಯಾಸಗೊಳಿಸಲಾಗಿದೆ. 
ಈ ಅವತಾರ್ ನೀವು ಇಷ್ಟಪಡುವ ರೀತಿಯಲ್ಲಿ ʻಕಸ್ಟಮೈಸ್ʼ ಮಾಡಲು ಅನುಮತಿಸುತ್ತದೆ ಮತ್ತು ನಿಮ್ಮ ಚರ್ಮದ ಬಣ್ಣ, ಕಣ್ಣಿನ ಬಣ್ಣ, ಕೂದಲ ಬಣ್ಣ, ಕೇಶವಿನ್ಯಾಸ ಸೇರಿದಂತೆ ನಿಮ್ಮ 3ಡಿ ಅವತಾರ್ ರಚಿಸಬಹುದು.

ಪ್ರಸ್ತುತವಾಗಿ, ಈ ಅವತಾರ್ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಮಾತ್ರ ಕಾಣಬಹುದು. ಆದರೆ, ಮುಂದಿನ ದಿನಗಳಲ್ಲಿ ಈ ಫೀಚರ್ ಭಾರೀ ಸದ್ದು ಮಾಡುವ ಸಾಧ್ಯತೆಯಿದೆ. 

AV Eye Hospital ad

ಇದನ್ನು ಓದಿದ್ದೀರಾ? ಟ್ರೂಕಾಲರ್ ಹೋಲುವ ಅಪ್ಲಿಕೇಶನ್‌ ತರಲಿರುವ ಭಾರತ ಸರ್ಕಾರ

ಇನ್‌ಸ್ಟಾಗ್ರಾಂ ಅವತಾರ್ ರಚಿಸುವುದು ಹೇಗೆ?

ಮೊದಲಿಗೆ ನಿಮ್ಮ ಇನ್‌ಸ್ಟಾಗ್ರಾಂ ಅಪ್ಡೇಟ್ ಆಗಿದೆಯೇ ಎಂದು ಪರಿಶೀಲಿಸಿ, ಹಳೆಯ ಇನ್‌ಸ್ಟಾಗ್ರಾಂನಲ್ಲಿ ಈ ಫೀಚರ್ ಲಭ್ಯವಾಗಿರುವುದಿಲ್ಲ. ನಿಮ್ಮ ಇನ್‌ಸ್ಟಾಗ್ರಾಂ ಹೊಸ ಅಪ್‌ಡೇಟ್‌ ಹೊಂದಿದ್ದರೆ, ಈಗ ಅವತಾರ್ ರಚಿಸಲು ಕೆಳಗಿನ ಹಂತಗಳನ್ನು ಅನುಸರಿಸಿ.

  • ಮೊಬೈಲ್ ಇನ್‌ಸ್ಟಾಗ್ರಾಂ ಅಪ್ಲಿಕೇಶನ್ ಅಪ್‌ಡೇಟ್‌ ಮಾಡಿ
  • ಅಪ್ಲಿಕೇಶನ್ ತೆರೆದು ಅಲ್ಲಿರುವ ಪ್ರೊಪೈಲ್ ಬಟನ್ ಮೇಲೆ ಕ್ಲಿಕ್ ಮಾಡಿ
  •  ಪ್ರೊಪೈಲ್‌ನ ಬಲಕ್ಕೆ ಕಾಣುವ ಮೂರು ಅಡ್ಡ ರೇಖೆಗಳ ಮೇಲೆ ಕ್ಲಿಕ್ ಮಾಡಿ
  • ಅಲ್ಲಿ ಕಾಣುವ ʻಸೆಟ್ಟಿಂಗ್ಸ್ʼ ಮೇಲೆ ಕ್ಲಿಕ್ ಮಾಡಿ ನಂತರ ʻಅಕೌಂಟ್ʼ ವಿಭಾಗದ ಮೇಲೆ ಕ್ಲಿಕ್ ಮಾಡಿ ಪ್ರವೇಶಿಸಿ
  • ಇಲ್ಲಿ ನೀವು ಅವತಾರ್ ಆಯ್ಕೆ ಕಾಣಬಹುದು.
  • ಅದರ ಮೇಲೆ ಕ್ಲಿಕ್ ಮಾಡಿ, ಈನಿಮ್ಮ ಅವತಾರ್ ರಚಿಸಲು ಸಿದ್ಧವಾಗಿದೆ.

ನಂತರ ಅಲ್ಲಿ ಕಾಣುವ ಎಲ್ಲ ಆಯ್ಕೆಗಳ ಮೇಲೆ ಕ್ಲಿಕ್ ಮಾಡುವದರ ಮೂಲಕ ನಿಮ್ಮ ಚರ್ಮದ ಬಣ್ಣ, ಕಣ್ಣಿನ ಬಣ್ಣ, ಕೂದಲು ಬಣ್ಣ, ಕೇಶವಿನ್ಯಾಸ ಸೇರಿದಂತೆ ನಿಮ್ಮ 3ಡಿ ಅವತಾರ್ ರಚಿಸಿ.

Instagram Avatar Image

ಅವತಾರ್ ಬಳಸುವುದು ಹೇಗೆ?

ಅವತಾರ್ ರಚಿಸಿದ ನಂತರ ನಿಮ್ಮ ಪ್ರೊಪೈಲ್ ಪೋಟೋಗೆ ಹಾಕಬಹುದು. ಅಷ್ಟೇ ಅಲ್ಲ, ಇನ್‌ಸ್ಟಾಗ್ರಾಂ ಸ್ಟೋರಿಗೆ ಕೂಡ ಸ್ಟಿಕರ್‌ನಂತೆ ಬಳಸಬಹುದು. ಜೊತೆಗೆ ಚಾಟ್ ಬಾಕ್ಸ್‌ನಲ್ಲಿ ಸಂದೇಶ ಕಳಿಸುವ ಮೂಲಕ ಇದನ್ನು ಉಪಯೋಗಿಸಬಹುದು.

ರಚಿಸಿದ ಬಳಿಕ ಅವತಾರ್ ಹಂಚಿಕೊಳ್ಳುವುದು ಹೀಗೆ!

ಇನ್‌ಸ್ಟಾಗ್ರಾಂ ತೆರೆದು ಸ್ಟೋರೀಸ್ ಬಟನ್ ಮೇಲೆ ಕ್ಲಿಕ್ ಮಾಡಿದರೆ ಕಾಣುವ ಸ್ಟಿಕರ್ ಮೇಲೆ ಕ್ಲಿಕ್ ಮಾಡಿದಾಕ್ಷಣ ನಿಮಗೆ ಅವತಾರ್ ಕಾಣಿಸುತ್ತದೆ. ನಂತರ, ಅದರ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಅವತಾರ್ ಸ್ಟಿಕರ್ ರೂಪದಲ್ಲಿ ಹಂಚಿಕೊಳ್ಳಲು ಸಿದ್ಧವಾಗಿರುತ್ತದೆ.

ನಿಮಗೆ ಏನು ಅನ್ನಿಸ್ತು?
1 ವೋಟ್
eedina app