ಶೀಘ್ರದಲ್ಲೇ ʻಅಲ್ಟ್ರಾ ಫೋಟೋʼಗಳ ಪರೀಕ್ಷೆ ಆರಂಭಿಸಲಿರುವ ಇನ್‌ಸ್ಟಾಗ್ರಾಮ್‌

Instagram Image
  • ಇನ್‌ಸ್ಟಾಗ್ರಾಮ್‌ ಪೋಟೋ ಅಳತೆ 9:16ಗೆ ವಿಸ್ತರಿಸಲು ಚಿಂತನೆ
  • ಫೋಟೋಗಳನ್ನು ಸಂಪೂರ್ಣ ವಿಸ್ತರಿಸಿ ಪೋಸ್ಟ್ ಮಾಡಬಹುದು

ರೀಲ್ಸ್‌ಗಳಲ್ಲಿ ಪೂರ್ಣ ಪ್ರಮಾಣವಾದ ಅಲ್ಟ್ರಾ ಚಿತ್ರಗಳನ್ನು ಅಳವಡಿಸಲು ಇನ್‌ಸ್ಟಾಗ್ರಾಮ್‌ ಸಂಸ್ಥೆ ಯೋಚಿಸುತ್ತಿದೆ. ಸಾಮಾಜಿಕ ಮಾಧ್ಯಮದಲ್ಲಿ ಅತೀ ಹೆಚ್ಚು ಬಳಸುವ ಮನರಂಜನಾ ಅಪ್ಲಿಕೇಶನ್‌ಗಳಲ್ಲಿ ಇನ್‌ಸ್ಟಾಗ್ರಾಮ್‌ ಕೂಡ ಒಂದು. ಇದೀಗ ಸಂಸ್ಥೆ ಹಲವು ಫೀಚರ್‌ಗಳನ್ನು ಪರಿಚಯಿಸುವ ಮೂಲಕ ಬಳಕೆದಾರರ ಮನರಂಜನಾ ಕ್ರಿಯೆಯನ್ನು ಹೆಚ್ಚಿಸಲಿದೆ ಮತ್ತು ಇದಕ್ಕೆ ಸಂಬಂಧಿಸಿದಂತೆ ಇನ್‌ಸ್ಟಾಗ್ರಾಮ್‌ ಅಲ್ಟ್ರಾ ಫೋಟೋಗಳ ಅಳತೆಯನ್ನು ವಿಸ್ತರಿಸಲು ಕಾರ್ಯ ನಿರ್ವಹಿಸುತ್ತಿದೆ.

ಏನಿದು ಅಲ್ಟ್ರಾ ಫೋಟೋ ಅಳತೆ?

ಇನ್‌ಸ್ಟಾಗ್ರಾಮ್‌ನಲ್ಲಿ ಬಳಕೆದಾರರು ಹಾಕುವ ಪೋಸ್ಟ್‌ಗಳ ಅಳತೆ ಸದ್ಯಕ್ಕೆ 4:5 ಇದೆ. ಆದರೆ ಮುಂದಿನ ದಿನಗಳಲ್ಲಿ ಅದರ ಅಳತೆಯನ್ನು 9:16ಗೆ ವಿಸ್ತರಿಸಲಿದೆ. ಇದರಿಂದ ಬಳಕೆದಾರರು ತಮ್ಮ ವಿಡಿಯೋ ಅಥವಾ ಫೋಟೋಗಳನ್ನು ಸಂಪೂರ್ಣ ವಿಸ್ತರಿಸಿ ಪೋಸ್ಟ್ ಮಾಡಬಹುದು ಮತ್ತು ವೀಕ್ಷಿಸಬಹುದಾಗಿದೆ ಎಂದು ಇನ್‌ಸ್ಟಾಗ್ರಾಮ್‌ ಮುಖ್ಯಸ್ಥ ಆಡಮ್ ಮೊಸ್ಸೆರಿ ʻದಿ ವರ್ಜ್ʼ ಸಂಸ್ಥೆಗೆ ತಿಳಿಸಿದ್ದಾರೆ. 

ಈ ಸುದ್ದಿ ಓದಿದ್ದೀರಾ?: ಕಾರುಗಳಲ್ಲಿ ಇನ್ಮುಂದೆ ನಾಲ್ಕು 'ಏರ್‌ಬ್ಯಾಗ್‌' ಕಡ್ಡಾಯ: ಕೇಂದ್ರ ಸೂಚನೆ

ಇನ್‌ಸ್ಟಾಗ್ರಾಮ್‌ ಟಿಕ್‌ಟಾಕ್‌ ತರಹದ ಮರುವಿನ್ಯಾಸವನ್ನು ಮಾಡಲಿದೆ ಎಂದು ಕೆಲವು ಛಾಯಾಗ್ರಾಹಕರು ಟೀಕಿಸಿದ್ದಾರೆ. ಏಕೆಂದರೆ ಈ ಫೀಚರ್ ಎಲ್ಲ ಫೋಟೋಗಳನ್ನು 9:16 ಫ್ರೇಮ್‌ನಲ್ಲಿ ವಿಚಿತ್ರವಾಗಿ ಪ್ರದರ್ಶಿಸಲು ಒತ್ತಾಯಿಸುತ್ತದೆ ಎಂಬುದು ಅವರ ಆರೋಪವಾಗಿದೆ. ಹೊಸ ಫೀಡ್ ಪೋಸ್ಟ್‌ಗಳ ಕೆಳಭಾಗಕ್ಕೆ ʻಓವರ್ಲೇ ಗ್ರೇಡಿಯಂಟ್ʼಗಳನ್ನು ಕೂಡ ಸೇರಿಸಿದೆ. ಇದರಿಂದ ಮಾಹಿತಿಯನ್ನು ಓದಲು ಸುಲಭವಾಗುತ್ತದೆ. ಆದರೆ ಅದು ಛಾಯಾಗ್ರಾಹಕರ ಕೆಲಸದ ನೋಟವನ್ನು ಹೆಚ್ಚಿಸುತ್ತದೆ.

ನಿಮಗೆ ಏನು ಅನ್ನಿಸ್ತು?
0 ವೋಟ್