27 ವರ್ಷದ ನಂತರ ಇಂಟರ್ನೆಟ್ ಎಕ್ಸ್‌ಪ್ಲೋರರ್‌ ಸ್ಥಗಿತ; ಜಪಾನಿಗೆ ಭಾರೀ ನಿರಾಸೆ

Internet Explorer
  • ಮೈಕ್ರೋಸಾಫ್ಟ್ ಎಡ್ಜ್ ಇಂಟರ್ನೆಟ್ ಎಕ್ಸ್‌ಪ್ಲೋರರ್‌ನ ಮುಂದಿನ ಅವೃತ್ತಿ
  • ಶೇರು ಮಾರುಕಟ್ಟೆಯಲ್ಲಿ ಶೇಕಡ 0.64ರಷ್ಟು ಮಾತ್ರ ಪಾಲು ಹೊಂದಿರುವ ಎಕ್ಸ್‌ಪ್ಲೋರರ್‌

ಹಲವು ವರ್ಷಗಳ ಕಾಲ ಇಂಟರ್ನೆಟ್ ಎಕ್ಸ್‌ಪ್ಲೋರರ್‌ ಜಗತ್ತಿನಾದ್ಯಂತ ಪ್ರಬಲವಾದ ಬ್ರೌಸರ್ ಮತ್ತು ಡಿ–ಫಾಕ್ಟೋ ಮಾನದಂಡಗಳನ್ನು ಹೊಂದಿದ್ದು, ಆದರೆ ಇತ್ತೀಚಿನ ಅವೃತಿಯಾದ ಐಈ6 ನಿಂದ ಭಾರೀ ಹೊಡೆತ ಅನುಭವಿಸಿದೆ. ಇದರಿಂದ ಜಪಾನ್ ದೇಶಕ್ಕೂ ಹೆಚ್ಚು ನಷ್ಟವಾಗಿದೆ.

ಮೈಕ್ರೋಸಾಫ್ಟ್ ಕಂಪನಿಯು ತನ್ನ ಇಂಟರ್ನೆಟ್ ಎಕ್ಸ್‌ಪ್ಲೋರರ್‌ನ್ನು ಜೂನ್ 15ರಂದು ಸ್ಥಗಿತಗೊಳಿಸಿದೆ. ಇದರಿಂದ ಬ್ರೌಸರ್ ಬಳಕೆದಾರರಿಗೆ ಮತ್ತು ದೊಡ್ಡ ಕಂಪನಿಗಳಿಗೆ ದಿಕ್ಕು ತೋಚದಂತಾಗಿದೆ. ಜಪಾನ್ ರಾಷ್ಟ್ರದಲ್ಲಿ ಶೇಕಡ 49ರಷ್ಟು ಕಂಪನಿಗಳು ಈ ಸಾಫ್ಟ್‌ವೇರ್‌ ಅನ್ನೇ ಬಳಸುತ್ತಿದ್ದರು. ಆ ಕಾರಣದಿಂದಾಗಿ ಜಪಾನ್ ದೇಶವೂ ಹೆಚ್ಚು ಪ್ರಭಾವಿತವಾಗಿದೆ. ಡೇಟಾ ವಿನಿಮಯ ಮತ್ತು ಲೆಕ್ಕಪತ್ರವನ್ನು ಬಳಸುವುದರಲ್ಲಿ ಈ ಬ್ರೌಸರ್ ಹೆಚ್ಚು ಕಾರ್ಯನಿರ್ವಹಿಸುತ್ತಿತ್ತು. ಕಳೆದ ವರ್ಷ ಇಂಟರ್‌ನೆಟ್ನ ಸ್ಥಗಿತವನ್ನು ಘೋಷಿಸಿದ ನಂತರ ಹಲವು ಪರಿವರ್ತನೆ ಮತ್ತು ಸಾಫ್ಟ್‌ವೇರ್‌ನಲ್ಲಿ ನವೀಕರಣ ಮಾಡಲು ಮುಂದಾಗಿದ್ದೇವೆ ಎಂದು ಮೈಕ್ರೋಸಾಫ್ಟ್ ಕಂಪನಿಯು ತಿಳಿಸಿದೆ.

ವಿಶ್ವದ ಎಲ್ಲ ದೊಡ್ಡ ಕಂಪನಿಗಳು ಈ ಬ್ರೌಸರ್‌ನ್ನು ಬಳಸುತ್ತಿದ್ದು, ಹೊಸ ಆವೃತ್ತಿಯ ನಂತರ ಎಲ್ಲ ಕಂಪನಿಗಳು ನಿಧಾನವಾಗಿ ಬೇರೆ ಕಂಪನಿಯ ಬ್ರೌಸರ್‌ಗಳಿಗೆ ಮೊರೆಹೊಗುತ್ತಿವೆ.

“ಜಪಾನ್‌ನವರು ಸುರಕ್ಷತೆಯ ಕಡೆಗೆ ಹೆಚ್ಚು ಗಮನಹರಿಸುತ್ತಾರೆ ಮತ್ತು ದೊಡ್ಡ ಸಂಸ್ಥೆಗಳು ಹಾಗೂ ಸರ್ಕಾರ ಹೊಸ ಬ್ರೌಸರ್ ಬಳಸಲು ಹಿಂಜರಿಯುತ್ತಿವೆ” ಎಂದು ರಿಟ್ಸುಮೈಕನ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಟೆಟ್ಸುಟಾರೊ ಉಹರಾ ತಿಳಿಸಿದ್ದಾರೆ. 

ಅತಿದೊಡ್ಡ ಸಮಸ್ಯೆಯೆಂದರೆ, ಸರ್ಕಾರಿ ವೆಬ್‌ಸೈಟ್‌ಗಳಿಗೆ ಬಂದಾಗ, ಅಂತಹ ದೊಡ್ಡ ವ್ಯವಸ್ಥೆಗಳನ್ನು ಕಾರ್ಯಗತಗೊಳಿಸಲು ಮಾರಾಟಗಾರರು ಹೆಚ್ಚು ಪ್ರಮಾಣದಲ್ಲಿ ಇಂಟರ್ನೆಟ್ ಎಕ್ಸಪ್ಲೋರರ್‌ ಅನ್ನು ಬಳಸುತ್ತಿದ್ದಾರೆ. ಇದರಿಂದ ಜಪಾನ್ ರಾಷ್ಟ್ರಕ್ಕೆ ನಿರಾಸೆಯಾಗಿದೆ. 

ಈ ಸುದ್ದಿ ಓದಿದ್ದೀರಾ? ಹದಿನೈದು ಸಾವಿರದೊಳಗೆ ಅತ್ಯುತ್ತಮ ಸ್ಮಾರ್ಟ್‌ಪೋನ್‌ ಆರಿಸಬಹುದು

ಸ್ಟಾಟ್‌ಕೌಂಟರ್‌ ವರದಿಯ ಪ್ರಕಾರ, ಗೂಗಲ್ ಕ್ರೋಮ್, ಮೊಝಿಲ್ಲಾ ಮತ್ತು ಫೈರ್‌ಫಾಕ್ಸ್‌ ನಂತಹ ವೇಗವಾದ ಹಾಗೂ ಉತ್ತಮ ಬ್ರೌಸರ್‌ಗಳು ಕಳೆದ ತಿಂಗಳು ವಿಶ್ವಾದ್ಯಂತ ಮಾರುಕಟ್ಟೆಯಲ್ಲಿ ಹೆಚ್ಚು ಶೇರು ಪಡೆದಿವೆ. ಆದರೆ ಇಂಟರ್ನೆಟ್ ಎಕ್ಸ್‌ಪ್ಲೋರರ್‌ನ ಪಾಲು ಶೇಕಡ 0.64ರಷ್ಟು ನಗಣ್ಯವಾಗಿದೆ.

ಇಂಟರ್ನೆಟ್ ಎಕ್ಸ್‌ಪ್ಲೋರರ್‌ ಅನ್ನು ಮುಂದಿನ ಆವೃತ್ತಿ ಇಂಟರ್‌ನೆಟ್ ಎಡ್ಜ್‌ ಆಗಿದ್ದು, ಕ್ರೋಮಿಯಂ ಎಂದು ಕರೆಯಲ್ಪಡುವ ಕ್ರೋಮ್‌ನ ಅದೇ ಮೂಲ ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಿಸಲಾದ ಬ್ರೌಸರ್ ಇದಾಗಿದೆ ಮತ್ತು ಕ್ರೋಮ್ ಹಲವು ವಿಸ್ತರಣೆಗಳೊಂದಿಗೆ ಹೊಂದಿಕೊಳ್ಳುತ್ತದೆ ಮತ್ತು ಅದೇ ಕಾರ್ಯವನ್ನು ಬೆಂಬಲಿಸುತ್ತದೆ ಎಂದು ವರದಿಯಾಗಿದೆ.

ಈಗ ಮೈಕ್ರೋಸಾಫ್ಟ್ ಎಡ್ಜ್ ಇಂಟರ್ನೆಟ್ ಎಕ್ಸ್‌ಪ್ಲೋರರ್‌ನ ಮುಂದಿನ ಆವೃತ್ತಿಯಾಗಿದ್ದು, ಕ್ರೋಮ್ ರೀತಿ ಇದನ್ನು ಅಭಿವೃದ್ಧಿಪಡಿಸಲಾಗಿದೆ. ಮುಂದಿನ ದಿನಗಳಲ್ಲಿ ಈ ಬ್ರೌಸರ್ ಹೆಚ್ಚು ಕಾರ್ಯ ನಿರ್ವಹಿಸಲಿದೆ ಎಂದು ಮೈಕ್ರೋಸಾಫ್ಟ್ ತಿಳಿಸಿದೆ. 

ನಿಮಗೆ ಏನು ಅನ್ನಿಸ್ತು?
1 ವೋಟ್