ಖಾಸಗಿ ಬಾಹ್ಯಾಕಾಶ ಉಡಾವಣೆಗಳ ಪ್ರಾರಂಭಕ್ಕೆ ಚಾಲನೆ ನೀಡಲಿದೆ ಇಸ್ರೋ

ISRO Image
  • ದಿಗಂತರಾ ಹವಾಮಾನ ಉಪಗ್ರಹವನ್ನು ಉಡಾವಣೆ ಮಾಡಲು ಇಸ್ರೋ ಮುಂದಾಗಿದೆ
  • ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಜೂನ್ 12ರಂದು ಉಚಿತ ತರಬೇತಿ ನೀಡಲಿರುವ ಇಸ್ರೋ

ಭಾರತೀಯ ಬಾಹ್ಯಾಕಾಶ ಪ್ರಚಾರ ಮತ್ತು ಅಧಿಕಾರ ಕೇಂದ್ರ ಖಾಸಗಿ ಸಂಸ್ಥೆಗಳಿಗೆ ಬಾಹ್ಯಾಕಾಶ ಉಡಾವಣೆಯ ಅಧಿಕಾರ ನೀಡಲು ಪ್ರಾರಂಭಿಸಿದೆ ಎಂದು ಇನ್-ಸ್ಪೇಸ್ ಕೇಂದ್ರ ಜೂನ್ 24ರಂದು ವರದಿ ಮಾಡಿದೆ.  

ಇನ್-ಸ್ಪೇಸ್‌ ಒಂದು ಖಾಸಗಿ ಏಜಿನ್ಸಿ. ಇದನ್ನು ಭಾರತದಲ್ಲಿ ಸರ್ಕಾರೇತರ ಘಟಕಗಳ ಬಾಹ್ಯಾಕಾಶ ಚಟುವಟಿಕೆ ಉತ್ತೇಜಿಸಲು, ಅಧಿಕೃತಗೊಳಿಸಲು ಹಾಗೂ ಮೇಲ್ವಿಚಾರಣೆ ಮಾಡಲು ರಚಿಸಲಾಗಿದೆ. ಧ್ರುವ ಸ್ಪೇಸ್ ಖಾಸಗಿ ನಿಗಮ, ಹೈದರಾಬಾದ್ ಮತ್ತು ದಿಗಂತರಾ ರಿಸರ್ಚ್ ಮತ್ತು ಟೆಕ್ನಾಲಜೀಸ್ ಖಾಸಗಿ ನಿಗಮ, ಬೆಂಗಳೂರು, ತಮ್ಮ ಪೇಲೋಡ್‌ಗಳನ್ನು ಪ್ರಾರಂಭಿಸಲು ಜೂನ್ 24ರಂದು ಇನ್-ಸ್ಪೇಸ್‌ನಿಂದ ಅಧಿಕೃತ ಪರವಾನಗಿ ಪಡೆದಿದೆ. 

ಧ್ರುವ ಸ್ಪೇಸ್‌ನ ಧ್ರುವ ಬಾಹ್ಯಾಕಾಶ ಉಪಗ್ರಹ ಆರ್ಬಿಟಲ್ ಡಿಪ್ಲೋಯರ್ (ಡಿಎಸ್ಓಡಿ1ಯು), ತಂತ್ರಜ್ಞಾನ ಪ್ರದರ್ಶನ ಪೇಲೋಡ್ ಮತ್ತು ದಿಗಂತರಾ ರೋಬಸ್ಟ್ ಇಂಟಿಗ್ರೇಟಿಂಗ್ ಪ್ರೋಟಾನ್ ಫ್ಲೂಯೆನ್ಸ್ ಮೀಟರ್, ಪ್ರೋಟಾನ್ ಡೋಸಿಮೀಟರ್ ಪೇಲೋಡ್ ಅನ್ನು ಅಧಿಕೃತಗೊಳಿಸಲಾಗಿದೆ ಎಂದು ಇನ್-ಸ್ಪೇಸ್ ಸೋಮವಾರ ವರದಿ ಮಾಡಿದೆ. 

"ಇದು ಭಾರತದಲ್ಲಿ ಪ್ರಮುಖ ಮೈಲಿಗಲ್ಲು ಮತ್ತು ಬಾಹ್ಯಾಕಾಶ ತಂತ್ರಜ್ಞಾನ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ಹೊಂದಿದೆ. ದಿಗಂತರಾ, ಹವಾಮಾನ ಉಪಗ್ರಹ ಉಡಾವಣೆ ಮಾಡಲಿದ್ದು, ಇದು ಕಂಪನಿಯ ಪೇಟೆಂಟ್ ತಂತ್ರಜ್ಞಾನ ಬಳಸಲಿದೆ. ಧ್ರುವ ತನ್ನ ಉಪಗ್ರಹ ನಿಯೋಜಕ ತಂತ್ರಜ್ಞಾನ ಪರೀಕ್ಷೆಯ ಹಂತದಲ್ಲಿದೆ. ಮುಂದಿನ ದಿನಗಳಲ್ಲಿ ಅಂತಾರಾಷ್ಟ್ರೀಯ ಗ್ರಾಹಕರು ಕೂಡ ಇದನ್ನು ಬಳಸಬಹುದಾಗಿದೆ” ಎಂದು ಇನ್-ಸ್ಪೇಸ್ ಸಂಸ್ಥೆಯ ಅಧ್ಯಕ್ಷ ಪವನ್ ಕುಮಾರ್ ಗೋಯೆಂಕಾ ತಿಳಿಸಿದ್ದಾರೆ. 

ನಿರಂತರ ಸುರಕ್ಷಿತ ಬಾಹ್ಯಾಕಾಶ ಕಾರ್ಯಾಚರಣೆಗಳನ್ನು ಖಚಿತಪಡಿಸಿಕೊಳ್ಳಲು ನಿಖರವಾದ ಕಕ್ಷೆಯ ಒಳನೋಟಗಳನ್ನು ತಲುಪಿಸುವ ದಿಗಂತರಾ, ಗುರಿಯನ್ನು ಸಾಧಿಸಲು ಮುಂದಾಗಿದೆ. ನಾವೀನ್ಯತೆಗಳನ್ನು ವೇಗಗೊಳಿಸುವಲ್ಲಿ ಸರ್ಕಾರದ ಬೆಂಬಲವು ಪ್ರಮುಖ ಪಾತ್ರವನ್ನು ವಹಿಸುತ್ತಿದೆ ಎಂದು ಧ್ರುವ ಸ್ಪೇಸ್ ಸಿಇಒ, ಸಂಜಯ್ ನೆಕ್ಕಂಟಿ ಹೇಳಿದ್ದಾರೆ. 

ಇದಕ್ಕೆ ಸಂಬಂಧಿಸಿದಂತೆ ಪದವಿಪೂರ್ವ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು, ಸರ್ಕಾರಿ ಸಂಸ್ಥೆಗಳಲ್ಲಿನ ವೃತ್ತಿಪರರು, ಸ್ಟಾರ್ಟ್-ಅಪ್‌ಗಳು ಹಾಗೂ ಖಾಸಗಿ ಸಂಸ್ಥೆಗಳಿಗೆ ಉಚಿತ ಆನ್‌ಲೈನ್‌ ತರಬೇತಿ ನೀಡಲು ಇಸ್ರೋ ಜೂನ್ 12ರಂದು ದಿನ ನಿಗದಿಪಡಿಸಿದೆ.

ಉಪಗ್ರಹ ಡೇಟಾ, ವಿಷಯಾಧಾರಿತ ನಕ್ಷೆಗಳು, ಪ್ರಶ್ನೆ, ವಿಶ್ಲೇಷಣೆ, ಉಚಿತ ಡೇಟಾ ಡೌನ್ಲೋಡ್‌ಗಳು ಮತ್ತು ನೈಜ ಸಮಯದ ವಿಪತ್ತು ಸೇವೆಗಳನ್ನು ಹಾಗೂ ಕ್ರೌಡ್‌ ಸೋರ್ಸಿಂಗ್‌ ಅಪ್ಲಿಕೇಶನ್‌ಗಳು ಸೇರಿದಂತೆ ವೈವಿಧ್ಯಮಯ ಭೂಗೋಳಿಕ ಅಪ್ಲಿಕೇಶನ್‌ಗಳ ದೃಶ್ಯೀಕರಣ ಸೇವೆಗಳನ್ನು ಇಸ್ರೋ ನೀಡಲು ಮುಂದಾಗಿದೆ. 

ನಿಮಗೆ ಏನು ಅನ್ನಿಸ್ತು?
0 ವೋಟ್