ʻವರ್ಚುವಲ್ ಸ್ಪೇಸ್ ಪಾರ್ಕ್ʼ ಪ್ರಾರಂಭಿಸಲು ಮುಂದಾದ ಇಸ್ರೊ 

ISRO 3D virtual space park
  • ಇಸ್ರೊ ಟೆಕ್ ಪಾರ್ಕ್‌ನಲ್ಲಿ ತಲೆಯೆತ್ತಲಿರುವ ಮ್ಯೂಸಿಯಂ, ಥಿಯೇಟರ್‌  
  • ʻವೀಲ್ಸ್ ಆನ್ ಸ್ಪೇಸ್ʼ ಎಂಬ ಬಸ್‌ವೊಂದಕ್ಕೆ ಚಾಲನೆ ನೀಡಲು ಇಸ್ರೊ ಚಿಂತನೆ

ಇಸ್ರೊ ನೂತನ 3ಡಿ ವರ್ಚುವಲ್ ಸ್ಪೇಸ್ ಪಾರ್ಕ್ ಅನ್ನು ಆರಂಭಿಸಲಿದೆ, 75ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಈ ಯೋಜನೆ ಪ್ರಾರಂಭಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ.

ಇದಕ್ಕೆ ಸಂಬಂಧಿಸಿದ ಹಲವು ದಾಖಲೆಗಳು, ಫೊಟೊ ಮತ್ತು ವಿಡಿಯೊಗಳನ್ನು ಹಂಚಿಕೊಂಡಿರುವ ಇಸ್ರೊ, ಆಸಕ್ತರು https://spacepark.isro.gov.in. ವೆಬ್‌ಸೈಟ್‌ನಲ್ಲಿ ಕಾಣಬಹುದು. ಬೆಂಗಳೂರು ಮೂಲದ ಬಾಹ್ಯಾಕಾಶ ಸಂಸ್ಥೆಯು ಇದಕ್ಕೆ ಸಂಬಂಧಿಸಿದ ಅಪ್ಲಿಕೇಶನ್ ಅನ್ನು ಸಹ ಪ್ರಾರಂಭಿಸಿದೆ. ಅದರ ಬೀಟಾ ಆವೃತ್ತಿಯು ವೆಬ್‌ಸೈಟ್‌ನಲ್ಲಿದೆ ಎಂದು ಇಸ್ರೋ ತಿಳಿಸಿದೆ. 

ಈ ಟೆಕ್ ಪಾರ್ಕ್‌ನಲ್ಲಿ ಏನಿದೆ?

ಇಸ್ರೊ ಟೆಕ್ ಪಾರ್ಕ್‌ನಲ್ಲಿ ಮ್ಯೂಸಿಯಂ, ಥಿಯೇಟರ್, ವೀಕ್ಷಣಾಲಯ, ಕೆಫೆಟೇರಿಯಾ ಮತ್ತು ಆಟದ ಮೈದಾನವನ್ನು ಕಾಣಬಹುದಾಗಿದೆ. ಅಲ್ಲದೆ ಇದು ಸಂಪೂರ್ಣ ಡಿಜಿಟಲ್ 3ಡಿ ಸ್ಪೇಸ್ ಪಾರ್ಕ್ ಆಗಿದೆ.  ಮ್ಯೂಸಿಯಂನಲ್ಲಿ ಇಸ್ರೊಗೆ ಸಂಬಂಧಿಸಿದ ಎಲ್ಲ ಫೊಟೊ ಗ್ಯಾಲರಿಯನ್ನು ಸಹ ರಚಿಸಲಾಗಿದೆ ಎಂದು ಇಸ್ರೊ ಆಧ್ಯಕ್ಷ ಎಸ್. ಸೋಮನಾಥ್ ತಿಳಿಸಿದರು. 

ಈ ಸುದ್ದಿ ಓದಿದ್ದೀರಾ? ಭಾರತದಲ್ಲಿ ಐಫೋನ್ ಒಳಗೊಂಡಂತೆ ಎಲ್ಲ ಸ್ಮಾರ್ಟ್‌ಪೋನ್‌ಗಳಿಗೂ ಒಂದೇ ಚಾರ್ಜರ್ 

ವಸ್ತುಸಂಗ್ರಹಾಲಯವನ್ನು ಉಪಗ್ರಹ ಗ್ಯಾಲರಿ ಮತ್ತು ಉಡಾವಣಾ ವಾಹನ ಗ್ಯಾಲರಿ ಎಂದು ಎರಡು ರೀತಿಯಲ್ಲಿ ವಿಂಗಡಿಸಲಾಗಿದೆ. ಪ್ರವೇಶದ್ವಾರದಲ್ಲಿಯೇ ಇಸ್ರೊದ ನಿರ್ದಿಷ್ಟ ಕಾರ್ಯಾಚರಣೆಗೆ ಕೊಡುಗೆ ನೀಡಿದ ವಿಜ್ಞಾನಿಗಳ ಚಿತ್ರಗಳಿವೆ. ಟೆಕ್ ಪಾರ್ಕ್‌ನಲ್ಲಿ  ಥಿಯೇಟರ್ ಸಹ ಇದ್ದು  ಇಸ್ರೊದ ಹಿಂದಿನ, ವರ್ತಮಾನ ಮತ್ತು ಭವಿಷ್ಯದ ಕಾರ್ಯಾಚರಣೆಗಳ ಕುರಿತು ಇನ್ನಷ್ಟು ಅರಿಯಲು ಅನೇಕ ವಿಡಿಯೊಗಳನ್ನು ಇದು ಒಳಗೊಂಡಿದೆ.

‘ಆಜಾದಿ ಕಾ ಅಮೃತ್ ಮಹೋತ್ಸವʼದ ಪ್ರಯುಕ್ತ ಈ ಯೋಜನೆಯನ್ನು ಮಾಡಲಾಗಿದೆ. ಇದರ ಜತೆಗೆ ʻವೀಲ್ಸ್ ಆನ್ ಸ್ಪೇಸ್ʼ ಎಂಬ ನೂತನ ಬಸ್‌ವೊಂದಕ್ಕೆ ಕೂಡ ಚಾಲನೆ ನೀಡಲು ಇಸ್ರೊ ಚಿಂತನೆ ನಡೆಸಿದೆ ಎಂದು ಮೂಲಗಳು ಹೇಳಿವೆ.  

ನಿಮಗೆ ಏನು ಅನ್ನಿಸ್ತು?
0 ವೋಟ್