ಐಟಿ ಹೊಸ ನಿಯಮ | ಸಾಮಾಜಿಕ ಮಾಧ್ಯಮಗಳ ನಿಯಂತ್ರಣದ ಉದ್ದೇಶವೇನು?

Social Media Image
  • ಸರ್ಕಾರ ತರಲು ಹೊರಟಿರುವ ಹೊಸ ಐಟಿ ನಿಯಮಗಳು ಅನುಕೂಲರವೆ?
  • ಸಾರ್ವಜನಿಕ ಆಕ್ಷೇಪಣೆ ಸಲ್ಲಿಸಲು 40 ದಿನಗಳ ಅವಕಾಶ

ಸಾಮಾಜಿಕ ಮಾಧ್ಯಮಗಳು ಅತ್ಯಂತ ಜನಪ್ರಿಯ ಮತ್ತು ಪರಿಣಾಮಕಾರಿ ಮಾಧ್ಯಮಗಳು. ಜನರನ್ನು ಬೆಸೆಯುವ ಮತ್ತು ಮಾಹಿತಿ ವಿನಿಮಯ ಮಾಡಿಕೊಳ್ಳುವ ವಿಧಾನಕ್ಕೆ ವ್ಯಾಖ್ಯಾನ ಬರೆದ ಸಾಮಾಜಿಕ ಮಾಧ್ಯಮಗಳು ಸುಳ್ಳು ಮಾಹಿತಿ ಹರಡುವ, ರಾಜಕೀಯ ಹಿತಾಸಕ್ತಿಯ ಅಸ್ತ್ರವಾಗಿಯೂ ಬದಲಾಗಿದೆ.

ಚುನಾವಣೆಯಲ್ಲಿ ಪ್ರಭಾವಿಸುವುದಕ್ಕೆ, ಸುಳ್ಳು ಸುದ್ದಿಗಳನ್ನು ಹರಡುವುದಕ್ಕೆ ಸಾಮಾಜಿಕ ಮಾಧ್ಯಮ ಬಳಕೆಯಾದ ರೀತಿಯ ಬಗ್ಗೆ ವ್ಯಾಪಕ ಸಂಶೋಧನೆ, ಅಧ್ಯಯನ, ನಿರ್ಬಂಧಿಸುವ ನಿಯಮಗಳ ಕುರಿತ ಚರ್ಚೆಗಳು ನಡೆದಿವೆ. ಇದೇ ನಿಟ್ಟಿನಲ್ಲಿ ಭಾರತ ಸರ್ಕಾರ ಕೂಡ ಮಾಹಿತಿ ತಂತ್ರಜ್ಞಾನ  ಕಾಯ್ದೆಯಲ್ಲಿ ತಿದ್ದುಪಡಿ ತರುವ ಮೂಲಕ ಸಾಮಾಜಿಕ ಮಾಧ್ಯಮಗಳ ಮೇಲೆ ನಿಯಂತ್ರಣ ಹೇರಲು ಹೊರಟಿದೆ.

Eedina App

ಮಾಹಿತಿ ತಂತ್ರಜ್ಞಾನ ಸಚಿವರು ಈ ಕುರಿತು ಇತ್ತೀಚೆಗೆ ಮಾಹಿತಿ ನೀಡಿದ್ದು, ಹೊಸ ಐಟಿ ನಿಯಮಗಳು ಮೂಲಭೂತ ಹಕ್ಕುಗಳಿಗೆ ಬದ್ಧವಾಗಿದ್ದು,  ಸಾಮಾಜಿಕ ಮಾಧ್ಯಮಗಳು ವಾಕ್‌ ಸ್ವಾತಂತ್ರ್ಯವನ್ನು ಗೌರವಿಸಬೇಕಾಗುತ್ತದೆ. ಒಂದು ವೇಳೆ ಉಲ್ಲಂಘಿಸಿದ್ದಲ್ಲಿ ಗಂಭೀರ ಕ್ರಮಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದೆ.

1. ಭಾರತದ ಐಟಿ ನಿಯಮಗಳು ಏನು ಹೇಳುತ್ತವೆ?
ಫೆಬ್ರವರಿಯಲ್ಲಿ ಬಿಡುಗಡೆಯಾದ ಐಟಿ ನಿಯಮಗಳ ಪ್ರಕಾರ ಯಾವುದೇ ಸಾಮಾಜಿಕ ಮಾಧ್ಯಮಗಳು 50ಲಕ್ಷಕ್ಕೂ ಅಧಿಕ ಬಳಕೆದಾರರನ್ನು ಹೊಂದಿರುತ್ತಾರೊ ಅವರು ಭಾರತದ ಐಟಿ ನಿಯಮದ ಅಡಿಯಲ್ಲಿ ನೊಂದಾಯಿಸಿಕೊಳ್ಳಬೇಕು ಮತ್ತು ಒಬ್ಬ ಭಾರತೀಯ ನಾಗರಿಕನನ್ನು ಸಂಸ್ಥೆಯ ಪ್ರಮುಖ ಹುದ್ದೆಯಲ್ಲಿ ನೇಮಿಸಿಕೊಳ್ಳಲು ಮಾಹಿತಿ ತಂತ್ರಜ್ಞಾನ ಕಾನೂನಿನ 79ನೇ ಪರಿಚ್ಛೇದ ಹೇಳಿದೆ.

AV Eye Hospital ad

2.ಏನಿದು ಐಟಿ ತಿದ್ದುಪಡಿಗಳು?
ಜೂನ್ 6ರಂದು ಪ್ರಕಟಿಸಿದ ತಿದ್ದುಪಡಿ ಪ್ರಕಾರ ಮಾಹಿತಿ ತಂತ್ರಜ್ಞಾನ ಸಚಿವಾಲಯವು ಒಂದು ಕುಂದುಕೊರತೆ ಮೇಲ್ಮನವಿ ಸಮಿತಿಯನ್ನು ರಚಿಸಿತ್ತು. ಅದರ ಅಡಿಯಲ್ಲಿ ಬರುವ ಸಾಮಾಜಿಕ ಕಂಪನಿಗಳು ನಿಯಮಗಳನ್ನು ಒಪ್ಪಿ ಯಾವುದೇ ಮಾಹಿತಿ, ಖಾತೆ ನಿರ್ಬಂಧಿಸಿದಲ್ಲಿ ಅವುಗಳ ಮೇಲೆ ನಿರ್ಧಾರ ತಗೆದುಕೊಳ್ಳುವ ಹಕ್ಕುಗಳನ್ನು ಹೊಂದಿರುತ್ತಾರೆ ಹಾಗೂ ಯಾವುದೇ ಬಳಕೆದಾರರ ತಪ್ಪು ಮಾಹಿತಿ ಮತ್ತು ನಕಲಿ ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುವ 72 ಗಂಟೆಯೊಳಗೆ ಅದನ್ನು ನಿರ್ಬಂಧಿಸಬೇಕು ಎಂದು ಈ ನಿಯಮಗಳು ಹೇಳುತ್ತದೆ.

ಈ ಸುದ್ದಿ ಓದಿದ್ದೀರಾ? ಐಟಿ ನಿಯಮಗಳನ್ನು ಬದಲಾಯಿಸಿ ಮರುಪ್ರಕಟಿಸಿದ ಮಾಹಿತಿ ಸಚಿವಾಲಯ

3. ಹಾಗಾದರೆ ಈ ತಿದ್ದುಪಡಿಗಳು ಅಂತಿಮವೆ?
ಇಲ್ಲ, ಈಗಾಗಲೇ ಮಾಡಿದ ಹೊಸ ಕರಡುಗಳನ್ನು ಮಾಹಿತಿ ಸಚಿವಾಲಯವು ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಲು ಬಿಡುಗಡೆ ಮಾಡಲಾಗಿದೆ.  ಅವುಗಳನ್ನು ಸಾರ್ವಜನಿಕರು ಪರಿಶೀಲಿಸಿ, ಆಕ್ಷೇಪವಿದ್ದಲ್ಲಿ ಮುಂದಿನ ಒಂದು ತಿಂಗಳಿನಲ್ಲಿ ಅವರ ಅಭಿಪ್ರಾಯ ನೀಡಬೇಕು. ಇದನ್ನು ಸ್ವೀಕರಿಸಿದ ಬಳಿಕ ಐಟಿ ಸಚಿವಾಲಯವು ಮರುಪರಿಶೀಲಿಸಿ ಮುಂದಿನ ಒಂದು ತಿಂಗಳಲ್ಲಿನಲ್ಲಿ ಹೊಸ ನಿಯಮ ಪ್ರಕಟಿಸಲಿದೆ. ಆ ನಿಯಮಗಳು ಅಂತಿಮವಾಗಿದ್ದು, ಅವುಗಳನ್ನು ಸಾಮಾಜಿಕ ಮಾಧ್ಯಮದ ದೊಡ್ಡ ಕಂಪನಿಗಳು ಒಪ್ಪಿಕೊಳ್ಳಬೇಕು, ಇಲ್ಲವಾದಲ್ಲಿ ಭಾರತದ ಸುರಕ್ಷಿತ ರಕ್ಷಣೆಗಳಿಂದ ಹೊರಹಾಕಲಾಗುತ್ತದೆ ಎಂದು ಮಾಹಿತಿ ಸಚಿವಾಲಯ ಹೇಳಿದೆ.

4. ತಿದ್ದುಪಡಿಗಳು ಏನನ್ನು ಖಚಿತಪಡಿಸುತ್ತವೆ?
ಭಾರತದ ಮಾಹಿತಿ ಸಚಿವಾಲಯ ಮಾಡಿದ ನಿಯಮಗಳನ್ನು ಸಾರ್ವಜನಿಕರು ಒಪ್ಪಿ ಅದನ್ನು ಸ್ವೀಕರಿಸಬೇಕು ಹಾಗೂ ಈ ನಿಯಮಗಳು ದುರುಪಯೋಗವಾಗುವ ಸಾಧ್ಯತೆಯೂ ಇದೆ.  ಸರ್ಕಾರಿ ಸಂಸ್ಥೆಗಳು ಪ್ರತಿರೋಧ, ವಿರೋಧಗಳನ್ನು ಹತ್ತಿಕ್ಕುವುದಕ್ಕಾಗಿ ಪ್ರಜಾಪ್ರಭುತ್ವ ವಿರೋಧಿಯ ನಡೆಯನ್ನು ಅನುಸರಿಸಬಹುದು.

೫. ಸಾಮಾಜಿಕ ಮಾಧ್ಯಮ ಕಂಪನಿಗಳು ತಿದ್ದುಪಡಿಯನ್ನು ಅನುಸರಿಸದಿದ್ದರೆ ಏನಾಗುತ್ತದೆ?
ಈ ನಿಯಮಗಳನ್ನು ಅನುಸರಿಸದಿದ್ದರೆ ಯಾವುದೇ ಸಾಮಾಜಿಕ ಮಾಧ್ಯಮ ಕಂಪನಿಗಳು ಭಾರತದಿಂದ ನಿಷೇಧಿಸಲಾಗುವುದಿಲ್ಲ. ಆದರೆ ಆ ಕಂಪನಿಗಳಿಗೆ ಯಾವುದೇ ರೀತಿಯ ಕಾನೂನಿನ ರಕ್ಷಣೆ  ಸಿಗುವುದಿಲ್ಲ ಎಂದು ಹೇಳುತ್ತವೆ.

ಈಗಾಗಲೇ ಈ ನಿಯಮಗಳನ್ನು ಉಲ್ಲಂಘಿಸಿದ ಕೆಲವು ದೊಡ್ಡ ಕಂಪನಿಗಳು ಸರ್ಕಾರದಿಂದ ಭಾರಿ ಹೊಡೆತ ಅಭವಿಸುತ್ತಿವೆ. ಹಾಗೇನಾದರೂ ಮಾಹಿತಿ ತಂತ್ರಜ್ಞಾನದ ಅಡಿಯಲ್ಲಿ ಬರುವ ನಿಯಮಗಳನ್ನು ಒಪ್ಪದೇ ಇದ್ದರೆ ಅಂತಹ ಸಾಮಾಜಿಕ ಮಾಧ್ಯಮಗಳು ಸರ್ಕಾರದ ಒತ್ತಡವನ್ನು ಎದುರಿಸಬೇಕಾಗುತ್ತದೆ. ಇದರಿಂದಾಗಿ ಬಳಕೆದಾರರ ವಾಕ್ ಸ್ವಾತಂತ್ರ್ಯಕ್ಕೂ ಧಕ್ಕೆ ಉಂಟಾಗಬಹುದು.

ನಿಮಗೆ ಏನು ಅನ್ನಿಸ್ತು?
3 ವೋಟ್
eedina app