ಯೂಟ್ಯೂಬ್‌ನಲ್ಲಿ ಪೇಟಿಂಗ್‌ ಮಾಡುವುದನ್ನು ಕಲಿಸಿಕೊಡುವ ಈ ಜಪಾನೀ ತಾತ ಈಗ ವರ್ಲ್ಡ್‌ ಫೇಮಸ್‌

Harumichi Shibasaki
  • 70ರ ಹರೆಯದ ಹರುಮಿಚಿ ಶಿಬಾಸಾಕಿ ಜನಪ್ರಿಯ ಯುಟ್ಯೂಬರ್‌
  • ವಾಟರ್‌ಕಲರ್‌ ಪೇಟಿಂಗ್‌ ಮಾಡುವುದನ್ನು ಹೇಳಿಕೊಡುವ

ವಯಸ್ಸು 73, ಆದರೆ ಉತ್ಸಾಹ 23ರ ಹುಡುಗನದ್ದು. ಜಪಾನಿನ ಟೋಕಿಯೋ ಸಮೀಪದ ಪಟ್ಟಣವೊಂದರಲ್ಲಿರುವ ಈ ತಾತನ ಹೆಸರು ಹರುಮಿಚಿ ಶಿಬಾಸಾಕಿ. ತಮ್ಮ ಪೇಟಿಂಗ್‌ ಟುಟೋರಿಯಲ್‌ ಮೂಲಕ ಯೂಟ್ಯೂಬ್‌ನಲ್ಲಿ ಸಂಚಲನ ಹುಟ್ಟಿಸಿರುವ ಕಲಾವಿದ ಇವರು.

ಅಬ್ಬರ, ಅತಿರೇಕಗಳಿಲ್ಲದೆ ತಾಳ್ಮೆ, ಲವಲವಿಕೆಯಿಂದ ಜಲವರ್ಣದ ಕಲಾಕೃತಿಗಳನ್ನು ಕ್ಯಾನ್‌ವಾಸ್‌ ಮೇಲೆ ಚಿತ್ರಿಸುವ ರೀತಿಯನ್ನು ಹೇಳಿಕೊಡುತ್ತಾರೆ ಈ ಶಿಬಾಸಾಕಿ ತಾತ. ಅವರ ಪ್ರತಿ ವಿಡಿಯೋ ಕನಿಷ್ಟ 1ಲಕ್ಷ ಬಾರಿ ವೀಕ್ಷಿಸಲ್ಪಟ್ಟ ದಾಖಲೆ ಇದೆ.

ಕಲಾವಿದರೂ ಕಲಾ ಶಿಕ್ಷಕರೂ ಆಗಿದ್ದ ಶಿಬಾಸಾಕಿ ಅವರು ಕೋವಿಡ್ ಬರದೇ ಹೋಗಿದ್ದರೆ ಜಗತ್ತಿಗೆ ಪರಿಚಯವಾಗುತ್ತಿರಲಿಲ್ಲವೇನೊ. ಕೋವಿಡ್‌ ಕಾಲದಲ್ಲಿ ಮನೆಯಲ್ಲೇ ಕೂತಿದ್ದ ಶಿಬಾಸಾಕಿಗೆ ಮಗ ಸೋಷಿಯಲ್‌ ಮೀಡಿಯಾದ ಪರಿಚಯ ಮಾಡಿಕೊಟ್ಟರು, ಅಷ್ಟೇ.  ತಮ್ಮ ಕಲೆಯನ್ನು ಆಸಕ್ತರಿಗೆ ಕಲಿಸಬಹುದು ಎಂದು ಟುಟ್ಯೋರಿಯಲ್‌ ಮಾದರಿಯ ವಿಡಿಯೋಗಳನ್ನು ನಿರ್ಮಿಸಲು ಶುರು ಮಾಡಿದರು.

ಶಿಬಾಸಾಕಿ ಕ್ಯಾನ್‌ವಾಸ್‌ನಲ್ಲಿ ಮಾಡುವುದಲ್ಲದೇ ಸಾಫ್ಟ್‌ವೇರ್‌ ಮತ್ತು ಮೊಬೈಲ್‌ ಆಪ್‌ಗಳನ್ನು ಬಳಸಿ ಟ್ಯಾಬ್‌ಗಳಲ್ಲೂ ಕಲಾಕೃತಿಗಳನ್ನು ರಚಿಸುತ್ತಾರೆ. ಬಣ್ಣಗಳ ಆಯ್ಕೆ, ವ್ಯಕ್ತಿ, ಪರಿಸರವನ್ನು ಚಿತ್ರಿಸುವಾಗ ಏನನ್ನು ಗಮನದಲ್ಲಿರಿಸಿಕೊಳ್ಳಬೇಕು ಎಂದು ಹೇಳಿಕೊಡುತ್ತಾರೆ.

ಈ ಸುದ್ದಿ ಓದಿದ್ದೀರಾ? | ಸ್ಮಾರ್ಟ್‌ಪೋನ್‌ಗಳನ್ನು ಗುರಿಯಾಗಿಸುತ್ತಿವೆಯೇ ಹರ್ಮಿಟ್ ಸ್ಪೈವೇರ್; ಭದ್ರತೆ ಹೇಗೆ?

ಜಪಾನಿನಲ್ಲಿರುವ ಈ ವಿಡಿಯೋಗಳಿಗೆ ಇಂಗ್ಲಿಷ್‌ ಸಬ್‌ಟೈಟಲ್‌ಗಳೂ ಇರುವುದರಿಂದ ಶಿಬಾಸಾಕಿ ಅವರಿಗೆ ಈಗ ಜಗತ್ತಿನೆಲ್ಲೆಡೆ ಅಭಿಮಾನಿಗಳಿದ್ದಾರೆ. ಯೂಟ್ಯೂಬ್‌ನಲ್ಲಿ ಇವರ ಚಾನೆಲ್ ಸಬ್‌ಸ್ಕ್ರೈಬ್‌ ಮಾಡಿದವರ ಸಂಖ್ಯೆ 14 ಲಕ್ಷ ಮಂದಿ! ಟಿಕ್‌ಟಾಕ್‌ನಲ್ಲೂ 3 ಲಕ್ಷ ದಾಟಿದೆ. 2016ರಲ್ಲೇ ಯೂಟ್ಯೂಬ್‌ ಆರಂಭಿಸಿದ್ದರೂ, ಅದು ಹೆಚ್ಚು ಸಕ್ರಿಯವಾಗಿದ್ದು ಕೋವಿಡ್‌ ಅವಧಿಯಲ್ಲೇ.

ನಲವತ್ತು ವರ್ಷಗಳ ಕಾಲ ಕಲಾಬೋಧಕರಾಗಿದ್ದ ಶಿಬಾಸಾಕಿ ಅವರು ತಂತ್ರಜ್ಞಾನ, ತಾಂತ್ರಿಕ ಸಾಧನಗಳಿಗೆ ಹೊಸಬರು. ಆದರೆ ಮಗನ ಸಹಾಯದಿಂದ ಕ್ಯಾಮೆರಾ, ಶೂಟಿಂಗ್‌, ಎಡಿಟಿಂಗ್‌ ಎಲ್ಲವನ್ನೂ ಕಲಿತು ತಮ್ಮ ವಿಡಿಯೋಗಳನ್ನು ತಾವೇ ನಿರ್ಮಿಸುತ್ತಿದ್ದಾರೆ.

ನಿಮಗೆ ಏನು ಅನ್ನಿಸ್ತು?
2 ವೋಟ್