ನೂತನ 5ಜಿ ಸ್ಮಾರ್ಟ್‌ಪೋನ್‌ ಬಿಡುಗಡೆ ಮಾಡಲು ಸಿದ್ಧವಾದ ಜಿಯೋ

Jio Smartphone 5G Image
  • ಜಿಯೋ ಸಂಸ್ಥೆಯಿಂದ 5ಜಿ ಸ್ಮಾರ್ಟ್‌ಪೋನ್‌ಗೆ ಚಾಲನೆ
  • ಗ್ರಾಹಕರಿಗೆ ಕೇವಲ ರೂ ₹12,000ದೊಳಗೆ ಲಭ್ಯ

ಭಾರತದ ಟೆಲಿಕಾಮ್ ವಲಯದಲ್ಲಿ ಭಾರೀ ಬದಲಾವಣೆ ಕಳೆದ ಹಲವು ದಿನಗಳಿಂದ ನಡೆಯುತ್ತಿದೆ. 4ಜಿಗೆ ಅಂತ್ಯ ಹೇಳುವ ಕಾಲ ಶೀಘ್ರದಲ್ಲಿ ಬರಲಿದೆ. ಏಕೆಂದರೆ ರಿಲಯನ್ಸ್ ಕಂಪನಿಯ ಜಿಯೋ ಇದೀಗ ನೂತನ 5ಜಿ ಸ್ಮಾರ್ಟ್‌ಪೋನ್‌ಗೆ ಚಾಲನೆ ನೀಡಲು ಸಿದ್ಧವಾಗಿದೆ. 

ಇದೇ ವರ್ಷದ ಅಂತ್ಯದೊಳಗೆ ಕೇಂದ್ರ ಸರ್ಕಾರದ ಸಹಕಾರದೊಂದಿಗೆ ಜಿಯೋ ಸಂಸ್ಥೆ ತನ್ನದೇ ಆದ ನೂತನ ಸ್ಮಾರ್ಟ್‌ಪೋನ್‌ನ್ನು ಬಿಡುಗಡೆ ಮಾಡಲಿದೆ. 4ಜಿ ಕೂಡ ಜಿಯೋ ಸಂಸ್ಥೆ ಮಾಡಿದ ಮೊದಲ ಪ್ರಯೋಗ. ಇದೀಗ ಜಿಯೋ ಸಂಸ್ಥೆ ನೀಡಿರುವ ವರದಿಯ ಪ್ರಕಾರ ಶೀಘ್ರದಲ್ಲಿ ಭಾರತಕ್ಕೆ 5ಜಿ ಲಗ್ಗೆ ಇಡಲಿದೆ.

ಸದ್ಯಕ್ಕೆ ಸಿಕ್ಕಿರುವ ಮಾಹಿತಿಯ ಪ್ರಕಾರ ಜಿಯೋ ಮತ್ತು ಗೂಗಲ್ ಜೊತೆಗೂಡಿ, ನೂತನ ಸ್ಮಾರ್ಟ್‌ಪೋನನ್ನು ಪರಿಚಯಿಸಲು ಮುಂದಾಗಿದೆ. ಇದು ಎಲ್ಲ ಬಳಕೆದಾರರಿಗೆ ಕೈಗೆಟ್ಟುಕುವಂತಹ ಬೆಲೆಯಲ್ಲಿ ನೀಡಲು ತೀರ್ಮಾನಿಸಿದೆ. ಅಷ್ಟೇ ಅಲ್ಲದೆ, 5ಜಿ ಕುರಿತು ಆಗಸ್ಟ್ 15ರಂದು ಜಿಯೋ ಸಂಸ್ಥೆ ವರದಿ ಮಾಡಿದೆ. 

ಬೆಲೆ ಎಷ್ಟು?

5ಜಿ ಭಾರತದಲ್ಲಿ ಬಳಕೆದಾರರಿಗೆ ಅತಿ ಕಡಿಮೆ ಬೆಲೆಯಲ್ಲಿ ಅಂದರೆ 12000ರೂದೊಳಗೆ ಸಿಗಬಹುದು ಎಂದು ಅಂದಾಜಿಸಲಾಗಿದೆ ಮತ್ತು ಖರೀದಿ ಮಾಡುವ ಆಸಕ್ತರು 2500 ರೂ ಡೌನ್ ಪೇಮೆಂಟ್ ಪಾವತಿ ಮಾಡುವ ಮೂಲಕ ಇದನ್ನು ಪಡೆಯಬಹುದು ಎಂದು ಸಂಸ್ಥೆ ತಿಳಿಸಿದೆ ಜತೆಗೆ ಅನಿಯಮಿತ ಯೋಜನೆಯೊಂದಿಗೆ ಲಭ್ಯವಿದೆ. 

ಈ ಸುದ್ದಿ ಓದಿದ್ದೀರಾ? ತಮಿಳುನಾಡು| ಸರ್ಕಾರಿ ಶಾಲೆಗಳಲ್ಲಿ ವರ್ಚುವಲ್ ರಿಯಾಲಿಟಿ ಲ್ಯಾಬ್‌ ಯೋಜನೆಗೆ ಚಾಲನೆ

ವೈಶಿಷ್ಟ್ಯಗಳು  

ಜಿಯೋ ಸ್ಮಾರ್ಟ್‌ಪೋನ್‌ 1:600 x 720 ಪಿಕ್ಸೆಲ್‌ಗಳ ರೆಸಲ್ಯೂಶನ್‌ನೊಂದಿಗೆ 6.5 ಇಂಚಿನ ಪರದೆಯನ್ನು ಒಳಗೊಂಡಿರುವ ನಿರೀಕ್ಷೆಯಿದೆ. ಇದು ಸ್ನಾಪ್‌ ಡ್ರಾಗನ್‌ 480 ಆಕ್ಟ್‌ ಕೋರ್‌ನೊಂದಿಗೆ 4ಜಿಬಿ ರಾಮ್ ಮತ್ತು 32ಜಿಬಿ ಸಂಗ್ರಹಣೆ ಇದರಲ್ಲಿ ಇರಲಿದೆ. ಜಿಯೋ ಸಂಸ್ಥೆಯ ಕಸ್ಟಮ್ ಸಾಫ್ಟ್‌ವೇರ್‌ ಆದ ಪ್ರಗತಿ ಐಓಎಸ್ ಮತ್ತು ಗೂಗಲ್ ಅಂಡ್ರಾಯ್ಡ್ ಸಹಕಾರದೊಂದಿಗೆ ಅಭಿವೃದ್ಧಿಪಡಿಸಲಾಗಿದೆ. ಶೀಘ್ರದಲ್ಲಿ ಬಳಕೆದಾರರಿಗೆ ಸಿಗಲಿದೆ. ಯಾವಾಗ ಏನು ಎಂಬುದನ್ನು ಸಂಸ್ಥೆ ತಿಳಿಸಿಲ್ಲ.

ನಿಮಗೆ ಏನು ಅನ್ನಿಸ್ತು?
0 ವೋಟ್