ಜಿಯೋ ಸಾವನ್ ಸ್ಥಗಿತ; ಟ್ವಿಟರ್‌ನಲ್ಲಿ ಬಳಕೆದಾರರ ಆಕ್ರೋಶ

JIO Savan Image
  • ಜಿಯೋ ಸಾವನ್ ಅಪ್ಲಿಕೇಶನ್ ಸ್ಥಗಿತ
  • ಟ್ವಿಟರ್‌ನಲ್ಲಿ ಬಳಕೆದಾರರು ಆಕ್ರೋಶ

ಜಿಯೋ ಸಾವನ್ ಆಪ್ಲಿಕೇಶನ್ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಟ್ವಿಟರ್‌ನಲ್ಲಿ ಸಂಸ್ಥೆಯ ಕಾರ್ಯನಿರ್ವಾಹಕರು ಖಚಿತಪಡಿಸಿದ್ದಾರೆ.

ಕಳೆದ ಒಂದು ಗಂಟೆಯಿಂದ ಜಿಯೋ ಸಾವನ್ ಅಪ್ಲಿಕೇಶನ್ ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ ಟ್ವಿಟರ್ ಖಾತೆಯಲ್ಲಿ ಬಳಕೆದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಜಿಯೋ ಸಾವನ್ ಸಂಸ್ಥೆ, “ಕೆಲವು ಗಂಟೆಗಳಿಂದ ಜಿಯೋ ಸಾವನ್ ಕಾರ್ಯನಿರ್ವಹಿಸುತ್ತಿಲ್ಲ. ಆದ್ದರಿಂದ ಬಳಕೆದಾರರು ತಮ್ಮ ನೆಚ್ಚಿನ ಸಂಗೀತ ಕೇಳಲು ಆಗುತ್ತಿಲ್ಲ ಎಂದು ದೃಢಪಡಿಸಿದೆ. ಇದನ್ನು ಸರಿಪಡಿಸಲು ಕಾರ್ಯನಿರ್ವಹಿಸುತ್ತಿದ್ದೇವೆ” ಎಂದು ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.

ಜಿಯೋ ಸಾವನ್ ಅಪ್ಲಿಕೇಶನ್ ಅನ್ನು ಈ ಹಿಂದೆ ಬರೀ ಸಾವನ್ ಎಂದು ಕರೆಯಲಾಗುತ್ತಿತ್ತು, ಈ ಅಪ್ಲಿಕೇಶನ್ ಭಾರತದಲ್ಲಿ ಜನಪ್ರಿಯ ಸಂಗೀತ ಸ್ಟ್ರೀಮಿಂಗ್ ಸೇವೆಗಳಲ್ಲಿ ಒಂದಾಗಿದೆ. ಇದು ಪ್ರಿಮಿಯಂ ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಬಳಕೆದಾರರು ಜಾಹಿರಾತುಗಳೊಂದಿಗೆ ಉಚಿತವಾಗಿ ಸಂಗೀತ ಕೇಳಬಹುದು. ಉಚಿತವಾಗಿ ಡೌನ್ಲೌಡ್ ಕೂಡ ಮಾಡಬಹುದು. ಹೀಗೆ ಜಿಯೋ ಸಾವನ್ ಅನೇಕ ಪ್ರೀಮಿಯಂ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಭಾರತೀಯ ಸಂಗೀತ ಸ್ಟ್ರೀಮಿಂಗ್ ಸೇವೆಯು ರಿಲಯನ್ಸ್ ಒಡೆತನದಲ್ಲಿದೆ. ಇವರು ವಿದೇಶಿ ಸಂಗೀತ ಅಪ್ಲಿಕೇಶನ್‌ಗಳಾದ ಅಮೆಜಾನ್ ಪ್ರೈಮ್, ಆಪಲ್ ಮ್ಯೂಸಿಕ್ ಮತ್ತು ಗೂಗಲ್ ಪ್ಲೇ ಮ್ಯೂಸಿಕ್‌ನಂತಹ ಸಂಗೀತ ಅಪ್ಲಿಕೇಶನ್‌ಗಳ ಮಧ್ಯೆ ಪೈಪೋಟಿ ನಡೆಸುತ್ತಿದ್ದಾರೆ. ಅಷ್ಟೇ ಅಲ್ಲದೆ ಸ್ವದೇಶಿ ಕಂಪನಿಗಳಾದ ಏರ್‌ಟೆಲ್‌ ವಿಂಕ್, ಹಂಗಾಮಾ ಮತ್ತು ಗಾನಾ ಸೇರಿದಂತೆ ಹಲವು ಕಂಪನಿಗಳೊಂದಿಗೆ ಕೂಡ ಜಿಯೋ ಸಾವನ್ ಸ್ಪರ್ಧಿಸುತ್ತಿದೆ. 

ಜಿಯೋ ಸಾವನ್ ಸ್ಟ್ರೀಮಿಂಗ್ ಸೇವೆಯು ಇಂದು ಬೆಳಗ್ಗೆಯಿಂದ ಕಾರ್ಯನಿರ್ವಹಿಸುತ್ತಿಲ್ಲ ಎಂದು ಬಳಕೆದಾರರು ಟ್ವೀಟ್ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್