ಸಂದೇಶ ಕಳುಹಿಸಿದ ಮೇಲೂ ʻಎಡಿಟ್ʼ ಮಾಡುವ ಅವಕಾಶ ಪರಿಚಯಿಸಲಿರುವ ವಾಟ್ಸಪ್

Whatsapp Feature Edit Image
  • ವಾಟ್ಸಪ್‌ನಲ್ಲಿ ಈಗ ನೂತನ ʻಎಡಿಟ್ʼ ವೈಶಿಷ್ಟ್ಯ  ಲಭ್ಯ‌
  • ಸ್ಕ್ರೀನ್‌ಶಾಟ್ ಶೇರ್ ಮಾಡಿದ ʻವಾಬೀಟಾಇನ್ಪೊʼ ಸಂಸ್ಥೆ

ವಾಟ್ಸಪ್‌ನಲ್ಲಿ ಶೀಘ್ರದಲ್ಲೇ ಬಳಕೆದಾರರು ಕಳುಹಿಸಿದ ಸಂದೇಶವನ್ನು ಸಂಪಾದಿಸುವ ಅವಕಾಶ ಪರಿಚಯಿಸಲಿದೆ, ಸದ್ಯಕ್ಕೆ ಬೀಟಾ ಆವೃತ್ತಿಯಲ್ಲಿ ಎಡಿಟ್ ಮಾಡುವುದನ್ನು ಪರೀಕ್ಷಿಸಲಿದೆ ಎಂದು ʻವಾಬೀಟಾಇನ್ಪೊʼ ಸಂಸ್ಥೆ ತಿಳಿಸಿದೆ.

ಪ್ರಸ್ತುತ, ಬಳಕೆದಾರರು ಕಳುಹಿಸಿದ ಅಥವಾ ಸ್ವೀಕರಿಸಿದ ಸಂದೇಶಗಳನ್ನು ಮಾತ್ರ ಅಳಿಸಿಹಾಕುವ ಅವಕಾಶ ವಾಟ್ಸಪ್ ನೀಡಿದೆ. ಆದರೆ, ಮುಂಬರುವ ದಿನದಲ್ಲಿ ವಾಟ್ಸಪ್ ಬಳಕೆದಾರರು ತಾವು ಕಳುಹಿಸಿದ ಸಂದೇಶಗಳನ್ನು ಸಂಪಾದಿಸುವ ಅವಕಾಶ ಕೂಡ ಕಲ್ಪಿಸಲು ಸಂಸ್ಥೆ ಮುಂದಾಗಿದೆ, ಇದರಿಂದ ನೀವೂ ಆಕಸ್ಮಿಕವಾಗಿ ಸಂದೇಶಗಳನ್ನು ಕಳುಹಿಸಿದಲ್ಲಿ ಅದನ್ನು ಪುನಃ ಎಡಿಟ್ ಮಾಡುವ ವೈಶಿಷ್ಟ್ಯವನ್ನು ವಾಟ್ಸಪ್ ಹೊಂದಿರಲಿದೆ.

ವಾಟ್ಸಪ್‌ಗೆ ಸಂಬಂಧಿಸಿದ ಎಲ್ಲ ನೂತನ ಬೆಳವಣಿಗೆ ಮತ್ತು ವೈಶಿಷ್ಟ್ಯಗಳನ್ನು ಅಭಿವೃದ್ಧಿಪಡಿಸುವ ವೆಬ್‌ಸೈಟ್ ʻವಾಬೀಟಾಇನ್ಪೊʼ. ಇದೀಗ ಈ ಸಂಸ್ಥೆ ಸ್ಕ್ರೀನ್‌ಶಾಟ್ ಶೇರ್ ಮಾಡುವ ಮೂಲಕ ವಾಟ್ಸಪ್‌ನ ಮುಂಬರುವ ವೈಶಿಷ್ಟ್ಯವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದೆ. ಐದು ವರ್ಷಗಳ ಹಿಂದೆಯೇ ಈ ಪ್ರಯತ್ನ ಕಾರ್ಯನಿರ್ವಹಿಸಲು ಪ್ರಾರಂಭಿಸಿದ್ದೇವೆ ಎಂದು ವಾಟ್ಸಪ್ ಸಂಸ್ಥೆ ತಿಳಿಸಿದೆ.

ವಾಟ್ಸಪ್ ಎಡಿಟ್ ವೈಶಿಷ್ಟ್ಯವನ್ನು ಬಳಸುವುದು ಹೇಗೆ?

ಹೆಸರೇ ಸೂಚಿಸಿದಂತೆ ಬಳಕೆದಾರರಿಗೆ ಸಂದೇಶಗಳನ್ನು ಎಡಿಟ್ ಮಾಡಲು ಅವಕಾಶ ನೀಡುತ್ತದೆ ಮತ್ತು ಮೊದಲಿಗೆ ನಿಮ್ಮ ವಾಟ್ಸಪ್ ತೆರೆದು ಅಲ್ಲಿ ಕಾಣುವ ಯಾವುದಾದರೊಂದು ಸಂದೇಶದ ಮೇಲೆ ಹಿಡಿದಿಟ್ಟುಕೊಳ್ಳಬೇಕು ಬಳಿಕ ಮೇಲ್ಬಾಗದಲ್ಲಿ ಕಾಣುವ ಮೂರು ಚುಕ್ಕೆಗಳ ಮೇಲೆ ಕ್ಲಿಕ್ ಮಾಡಿ ಮತ್ತು ಎಡಿಟ್ ಆಯ್ಕೆಯನ್ನು ಆರಿಸಿ, ಈಗ ನೀವು ಆಕಸ್ಮಿಕವಾಗಿ ಸಂದೇಶವನ್ನು ಕಳುಹಿಸಿದ್ದರೆ ಅಥವಾ ಅದನ್ನು ಸರಿಪಡಿಸಲು ಬಯಸಿದರೆ ಸಂದೇಶಗಳನ್ನು ಎಡಿಟ್ ಮಾಡಬಹುದು.

ಈ ವೈಶಿಷ್ಟ್ಯ ಪ್ರಸ್ತುತವಾಗಿ ಐಓಎಸ್, ಆಂಡ್ರಾಯ್ಡ್‌ನಲ್ಲಿ  ಮತ್ತು ಡೆಸ್ಕ್‌ಟಾಪ್ ಬೀಟಾ ಅವೃತಿಯಲ್ಲಿ ಲಭ್ಯವಿರಲಿದೆ ಹಾಗೂ ಇನ್ನು ಹೆಚ್ಚು ಅವೃತ್ತಿಗಳನ್ನು ವಾಟ್ಸಪ್ ಸಂಸ್ಥೆ ತರಲು ಯೋಚಿಸಲಿದೆ.

ಎಡಿಟ್ ಆಯ್ಕೆಯು ಸದ್ಯಕ್ಕೆ ಬಳಕೆದಾರರಿಗೆ ಲಭ್ಯವಿಲ್ಲ, ಆದರೆ ಭವಿಷ್ಯದಲ್ಲಿ ಸಂದೇಶಗಳನ್ನು ಕಾಪಿ ಮಾಡುವ ಮತ್ತು ಫಾರ್ವಡ್ ಮಾಡುವ ಅವಕಾಶದ ಜೊತೆಗೆ ಎಡಿಟ್ ಆಯ್ಕೆಯನ್ನು ಸಹ ತರಲಿದ್ದೇವೆ, ಬಿಡುಗಡೆಯಾದಾ ಕ್ಷಣ ಬಳಕೆದಾರರಿಗೆ ತಿಳಿಸುತ್ತೇವೆ ಎಂದು ʻವಾಬೀಟಾಇನ್ಪೊʼ ಸಂಸ್ಥೆ ತಮ್ಮ ವೆಬ್‌ಸೈಟ್‌ನಲ್ಲಿ ತಿಳಿಸಿದೆ.

ನಿಮಗೆ ಏನು ಅನ್ನಿಸ್ತು?
4 ವೋಟ್