ಸಂದೇಶಗಳನ್ನು ಅಳಿಸಲು ಇನ್ನು ಹೆಚ್ಚು ಸಮಯ ಬೇಕಿದೆ: ವಾಟ್ಸ್ಆ್ಯಪ್ 

Whatsapp Feature Image
  • ವಾಟ್ಸ್ಆ್ಯಪ್‌ನಲ್ಲಿ ಸಂದೇಶಗಳನ್ನು ಅಳಿಸಲು ಎರಡು ದಿನ ಬೇಕಿದೆ
  • ಬಳಕೆದಾರರಿಗೆ ಈ ನೂತನ ಆವೃತ್ತಿ ಗೂಗಲ್‌ ಪ್ಲೇಸ್ಟೋರ್‌ನಲ್ಲಿ ಲಭ್ಯ

ಹೆಚ್ಚು ಅನಗತ್ಯ, ಅಪ್ರಸ್ತುತ ಅಥವಾ ಅನುಚಿತ ಸಂದೇಶಗಳನ್ನು ಅಳಿಸಲು ಬಯಸಿದರೆ, ಬಳಕೆದಾರರು ಎರಡು ದಿನಗಳ ಕಾಲ ಕಾಯಬೇಕಿದೆ ಎಂದು ವಾಟ್ಸ್ಆ್ಯಪ್ ತಮ್ಮ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ತಿಳಿಸಿದೆ.

ಈ ಹಿಂದೆ ವಾಟ್ಸ್ಆ್ಯಪ್‌ನಲ್ಲಿ ಸಂದೇಶಗಳನ್ನು ಅಳಿಸಲು ಕೇವಲ ಒಂದು ಗಂಟೆಯ ಕಾಲ ಅವಕಾಶ ತೆಗೆದುಕೊಳ್ಳುತ್ತಿತ್ತು. ಈಗ ನಿರೀಕ್ಷೆಗಿಂತ ಹೆಚ್ಚು ಸಮಯ ಹಿಡಿಯಲಿದೆ. ಹಳೆಯ ವೈಶಿಷ್ಟ್ಯದಲ್ಲಿ ಬಳಕೆದಾರರು ಮಾಡಿದ ಚಾಟ್‌ಗಳನ್ನು ಮಾತ್ರ ಅಳಿಸುವ ಅಧಿಕಾರ ನೀಡಲಾಗಿತ್ತು. ಇದೀಗ ನೂತನ ವೈಶಿಷ್ಟ್ಯವನ್ನು ಬಳಸಿ ಬಳಕೆದಾರರು ಚಾಟ್ ಮಾಡುತ್ತಿದ ಸಹೋದ್ಯೋಗಿಗಳ ಸಂದೇಶಗಳನ್ನು ಕೂಡ ಅಳಿಸಬಹುದಾದ ಫೀಚರ್‌ನ್ನು ವಾಟ್ಸ್ಆ್ಯಪ್ ನೀಡಿದೆ. ಆದರೆ ನವೀಕರಿಸಿದ ಬಳಿಕ ಸಂದೇಶಗಳನ್ನು ಅಳಿಸಲು ಬಯಸಿದರೆ ಬಳಕೆದಾರರು ಎರಡು ದಿನಗಳ ಕಾಲ ಸಮಯ ಕಾಯಬೇಕು ಎಂದು ವಾಟ್ಸ್ಆ್ಯಪ್ ಟ್ವೀಟ್ ಮಾಡಿದೆ. 

ಈ ಸುದ್ದಿ ಓದಿದ್ದೀರಾ? ಲಾಗ್‌ಇನ್‌ ವೈಶಿಷ್ಟ್ಯವನ್ನು ಪರಿಚಯಿಸಲಿದೆ ವಾಟ್ಸ್ಆ್ಯಪ್; ವಾಬೀಟಾಇನ್‌ಫೋ ವರದಿ

ಸದ್ಯಕ್ಕೆ ಬೀಟಾ ಆವೃತ್ತಿಯಲ್ಲಿದ್ದ ವೈಶಿಷ್ಟ್ಯವನ್ನು, ಇದೀಗ ಬಳಕೆದಾರರಿಗೆ ಬಳಸಲು ಅನುಮತಿಸಿದೆ. ಇದಕ್ಕೆ ಪ್ರತಿಕ್ರಿಯಿಸಿದ ವಾಬೀಟಾಇನ್‌ಫೋ, ನವೀಕರಿಸಿದ ಬಳಿಕ ಸಂದೇಶಗಳನ್ನು ಅಳಿಸಲು ಬಯಸಿದರೆ ವಾಟ್ಸ್ಆ್ಯಪ್‌ ಸುಮಾರು ಎರಡು ದಿನ ಅಥವಾ 12 ತಾಸು ತೆಗೆದುಕೊಳ್ಳುತ್ತದೆ ಎಂದು ತಿಳಿಸಿದೆ. 

ಪ್ರಸ್ತುತ, ಈ ಫೀಚರ್ ಎಲ್ಲ ಬಳಕೆದಾರರಿಗೂ ಲಭ್ಯ, ಬಳಸಲು ಬಯಸುವವರು ತಮ್ಮ ವಾಟ್ಸ್ಆ್ಯಪ್ ಅಫ್ಲಿಕೇಶನನ್ನು ಗೂಗಲ್‌ ಪ್ಲೇಸ್ಟೋರ್‌ ಅಥವಾ ಆಪಲ್‌ ಸ್ಟೋರ್‌ನಲ್ಲಿ ನವೀಕರಣ ಮಾಡಬಹುದಾಗಿದೆ. 

ನಿಮಗೆ ಏನು ಅನ್ನಿಸ್ತು?
0 ವೋಟ್