ನೋವಿ ಅಪ್ಲಿಕೇಶನ್‌ನ್ನು ಸ್ಥಗಿತಗೊಳಿಸಲು ಮುಂದಾದ ಮೆಟಾ ಸಂಸ್ಥೆ 

Novi Image
  • ಈ ಅಪ್ಲಿಕೇಶನ್ ವಾಟ್ಸ್ಆ್ಯಪ್‌ನಲ್ಲಿ ಕೂಡ ಬಳಕೆಯಲ್ಲಿರುವುದಿಲ್ಲ
  • ಗ್ರಾಹಕರು ಎರಡು ರೀತಿಯಲ್ಲಿ ಹಣವನ್ನು ಹಿಂಪಡೆಯಬಹುದು

ಮೆಟಾ ಅಭಿವೃದ್ಧಿಪಡಿಸಿದ ಡಿಜಿಟಲ್ ಸೇವಾ ಅಪ್ಲಿಕೇಶನ್ ನೋವಿ, ಯಾವುದೇ ಶುಲ್ಕವಿಲ್ಲದೆ ಹಣ ಕಳುಹಿಸುವ ಅಥವಾ ಸ್ವೀಕರಿಸುವ ಅಪ್ಲಿಕೇಶನ್ ಆಗಿದ್ದು, ಸೆಪ್ಟೆಂಬರ್ 1ರಿಂದ ಸ್ಥಗಿತಗೊಳಿಸಲು ಮೆಟಾ ಸಂಸ್ಥೆ ನಿರ್ಧರಿಸಿದೆ.

“ಗ್ರಾಹಕರು ನೋವಿ ಖಾತೆಯಲ್ಲಿ ತಮ್ಮ ಸಂಪೂರ್ಣ ಹಣವನ್ನು ಸೆಪ್ಟೆಂಬರ್ 1ರೊಳಗೆ ಹಿಂಪಡೆಯಿರಿ, ಇಲ್ಲವಾದಲ್ಲಿ ಉಳಿದ ಹಣವನ್ನು ಪಡೆಯಲು ಅನುಮತಿಸುವುದಿಲ್ಲ ಮತ್ತು ಈ ಅಪ್ಲಿಕೇಶನ್ ವಾಟ್ಸ್ಆ್ಯಪ್‌ನಲ್ಲಿ ಕೂಡ ಬಳಕೆಯಲ್ಲಿರುವುದಿಲ್ಲ” ಎಂದು ನೋವಿ ಸಂಸ್ಥೆ ತಮ್ಮ ಅಧಿಕೃತ ವೆಬ್‌ಸೈಟ್‌ ಮತ್ತು ಟ್ವಿಟರ್ ಖಾತೆಯಲ್ಲಿ ಪ್ರಕಟಿಸಿದೆ.

ಜುಲೈ 21ರಿಂದ ಬಳಕೆದಾರರು ತಮ್ಮ ನೋವಿ ಖಾತೆಯಲ್ಲಿ ಹಣ ಹಾಕುವುದಾಗಲ್ಲಿ, ಲಾಗಿನ್ ಮಾಡಲು ಸಾಧ್ಯವಾಗುವುದಿಲ್ಲ ಮತ್ತು ಕ್ರಮೇಣ ನಿಧಾನವಾಗಿ ಎಲ್ಲ ಖಾತೆಗಳನ್ನು ನಿರ್ಬಂಧಿಸಲಾಗುವುದು. ಆದರಿಂದ ಬಳಕೆದಾರರು ಎಚ್ಚರ ವಹಿಸಬೇಕು ಎಂದು ಸಂಸ್ಥೆ ತಿಳಿಸಿದೆ. 

ನೋವಿ ಸಂಸ್ಥೆ ನೀಡಿದ ವರದಿಯ ಪ್ರಕಾರ, ಗ್ರಾಹಕರು ಎರಡು ರೀತಿಯಲ್ಲಿ ತಮ್ಮ ಖಾತೆಯಲ್ಲಿರುವ ಹಣ ಹಿಂಪಡೆಯಬಹುದು. ಅಮೆರಿಕ ಮತ್ತು ಗ್ವಾಟೆಮಾಲಾ ಗ್ರಾಹಕರು ಯುಪಿಐ ಬಳಸಿ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸಬಹುದು ಮತ್ತು ಉಳಿದ ಗ್ರಾಹಕರು ಹತ್ತಿರದ ಎಟಿಎಂಗೆ ಭೇಟಿ ನೀಡಿ ನೋವಿ ಕಾರ್ಡ್ ಮೂಲಕ ತಮ್ಮ ಹಣ ಪಡೆಯಬಹುದು. 

ಸೆಪ್ಟೆಂಬರ್ ಬಳಿಕವು ಗ್ರಾಹಕರ ಖಾತೆಯಲ್ಲಿ ಹಣ ಉಳಿದರೆ ತಮ್ಮ ನೋವಿ ಖಾತೆಗಳಿಗೆ ಜಂಟಿ ಮಾಡಿದ ಖಾತೆಗೆ ವರ್ಗಾಯಿಸಲಾಗುವುದು ಎನ್ನಲಾಗಿದೆ ಮತ್ತು ಇದಕ್ಕೆ ಸಂಬಂಧಿಸಿದಂತೆ ಎಲ್ಲ ದಾಖಲೆಗಳನ್ನು ಗ್ರಾಹಕರು ಪರಿಶೀಲಿಸಲು ಬಯಸಿದರೆ ನೋವಿ ವೆಬ್‌ಸೈಟ್‌ಗೆ ಭೇಟಿ ನೀಡಬಹುದು ಎಂದು ಸಂಸ್ಥೆ ವರದಿ ಮಾಡಿದೆ.

“ಈಗಾಗಲೇ ಮೆಟಾ ಬ್ಲಾಕ್‌ಚೈನ್‌ನಲ್ಲಿ ಹೂಡಿಕೆ ಮಾಡಲು ಮುಂದಾಗಿದೆ. ಶೀಘ್ರದಲ್ಲಿ ಡಿಜಿಟಲ್ ಸಂಗ್ರಹಣೆಗಳಂತಹ ನೂತನ ಉತ್ಪನ್ನಗಳನ್ನು ಪರಿಚಯಿಸಲಿದೆ. ಇದಕ್ಕೆ ಸಂಬಂಧಿಸಿದಂತೆ ಎಲ್ಲ ಮಾಹಿತಿಗಳನ್ನು ಬಳಕೆದಾರರು ವೆಬ್3 ವೆಬ್‌ಸೈಟ್‌ನಲ್ಲಿ ಕಾಣಬಹುದು” ಎಂದು ಮೆಟಾ ಸಂಸ್ಥೆ ತಿಳಿಸಿದೆ.

ನಿಮಗೆ ಏನು ಅನ್ನಿಸ್ತು?
1 ವೋಟ್