ಸೈಬರ್ ದಾಳಿ ತಡೆಯಲು ಮೈಕ್ರೋಸಾಫ್ಟ್ ಪರಿಚಯಿಸಿದೆ ನೂತನ ಡಿಫೆಂಡರ್ ಸಾಫ್ಟ್‌ವೇರ್‌

ಈ ಸಾಫ್ಟ್‌ವೇರ್‌ ಹೆಸರು ಮೈಕ್ರೋಸಾಫ್ಟ್ ಡಿಫೆಂಡರ್ ಎಕ್ಸ್ಟರ್ನಲ್ ಅಟ್ಯಾಕ್ ಸರ್ಫೇಸ್ ಮ್ಯಾನೇಜ್ಮೆಂಟ್. ಇದರ ಸಹಾಯದಿಂದ ಸೈಬರ್ ದಾಳಿಯನ್ನು ತಡೆಯಬಹುದು ಮತ್ತು ಸೈಬರ್‌ ದಾಳಿಯಾದ ತಕ್ಷಣ ಅಲರ್ಟ್‌ ಮಾಡುವ ಕಾರ್ಯ ಕೂಡ ಈ ಸಾಫ್ಟ್‌ವೇರ್‌ ಮಾಡಲಿದೆ.
Microsoft Defender External Attack Surface Management

ಸಾಫ್ಟ್‌ವೇರ್‌ ತಯಾರಕರಾದ ಮೈಕ್ರೋಸಾಫ್ಟ್, ಇದೀಗ ಸೈಬರ್ ಕ್ರೈಮ್ ತಡೆಯಲು ಕಂಪನಿಗಳಿಗೆ ನೂತನ ಸಾಫ್ಟ್‌ವೇರ್‌ ಹೊರತಂದಿದೆ.

ಇತ್ತೀಚೆಗೆ ಹ್ಯಾಕರ್‌ಗಳು ಹೆಚ್ಚಾದ ಕಾರಣ ಪ್ರಪಂಚದಲ್ಲಿ ಇರುವ ಎಲ್ಲ ದೊಡ್ಡ ಕಂಪನಿಗಳ ಮೇಲೆ ಸೈಬರ್ ದಾಳಿ ಆಗುತ್ತಿದೆ. ಅದನ್ನು ತಡೆಯಲು ಮೈಕ್ರೋಸಾಫ್ಟ್  ಸಂಸ್ಥೆ ನೂತನ ಪ್ರಯೋಗ ಮಾಡಿದೆ. ಈ ಸಾಫ್ಟ್‌ವೇರ್‌ ಹೆಸರು, ಮೈಕ್ರೋಸಾಫ್ಟ್ ಡಿಫೆಂಡರ್ ಎಕ್‌ಸ್ಟರ್ನಲ್ ಅಟ್ಯಾಕ್ ಸರ್ಫೇಸ್ ಮ್ಯಾನೇಜ್ಮೆಂಟ್. ಈ ಸಾಫ್ಟ್‌ವೇರ್‌ ಸಹಾಯದಿಂದ ಸೈಬರ್ ದಾಳಿ ತಡೆಯಬಹುದು ಎಂದು ಸಂಸ್ಥೆ ತಿಳಿಸಿದೆ. 

2020ರಲ್ಲಿ ಸೈಬರ್ ಸೆಕ್ಯೂರಿಟಿ ವೆಂಚರ್ಸ್ ನಡೆಸಿದ ಸಂಶೋಧನೆಯ ಪ್ರಕಾರ 2025ರ ವೇಳೆಗೆ ಸೈಬರ್ ದಾಳಿ ಹೆಚ್ಚಾಗಲಿದೆ. ಚೆಕ್ ಪಾಯಿಂಟ್ ಸಾಫ್ಟ್‌ವೇರ್‌ ಟೆಕ್ನಾಲಜಿ ಸಂಸ್ಥೆಯ ವರದಿಯ ಪ್ರಕಾರ 2020ಕ್ಕೆ ಹೋಲಿಸಿದರೆ, ಕಾರ್ಪೂರೇಟ್ ಕಂಪನಿಗಳ ಮೇಲೆ ವಾರಕ್ಕೆ ಒಟ್ಟಾರೆ ಶೇ. 50ರಷ್ಟು ಸೈಬರ್ ದಾಳಿಯ ಸಂಖ್ಯೆ ಜಾಸ್ತಿಯಾಗಲಿದೆ. 

ಇದರ ಆಧಾರದ ಮೇಲೆ ಮೈಕ್ರೋಸಾಫ್ಟ್ ಸಂಸ್ಥೆ 'ಮೈಕ್ರೋಸಾಫ್ಟ್ ಡಿಫೆಂಡರ್ ಎಕ್ಸ್ಟರ್ನಲ್ ಅಟ್ಯಾಕ್ ಸರ್ಫೇಸ್ ಮ್ಯಾನೇಜ್ಮೆಂಟ್' ಸಾಫ್ಟ್‌ವೇರ್‌ನ್ನು ಪರಿಚಯಿಸಿದೆ. ಈ ಸಾಫ್ಟ್‌ವೇರ್‌ ಪ್ರತ್ಯೇಕವಾಗಿ ಕಂಪನಿಗಳಲ್ಲಿರುವ ಎಲ್ಲ ದಾಖಲೆಗಳಿಗೆ ಸುರಕ್ಷತೆ ವಹಿಸುವ ಜೊತೆಗೆ, ಕಂಪನಿಯ ಗ್ರಾಹಕರ ದಾಖಲೆಗಳು ಮತ್ತು ವಹಿವಾಟಿನ ಸಂಪೂರ್ಣ ವಿವರದ ಮೇಲೆ ಹೆಚ್ಚು ಗಮನಹರಿಸುತ್ತದೆ ಎಂದು ಸಂಸ್ಥೆ ತಿಳಿಸಿದೆ. 

ಮೈಕ್ರೋಸಾಫ್ಟ್ ಡಿಫೆಂಡರ್ ಕಾರ್ಯನಿರ್ವಹಣೆ ಹೇಗೆ?

ಈ ಡಿಫೆಂಡರ್ ಉಪಕರಣವು ಸಂಸ್ಥೆಯ ಸಂಪೂರ್ಣ ಸುರಕ್ಷೆಯ  ಜೊತೆಗೆ ಇಂಟರ್ನೆಟ್ ಸಂಪರ್ಕಗಳನ್ನು ನಿರಂತರವಾಗಿ ಪರಿಶೀಲಿಸುವ ಕಾರ್ಯ ಮಾಡಲಿದೆ. ನಿರ್ವಹಣೆಯಿಲ್ಲದ ಮತ್ತು ಮಾನವ ರಹಿತ ಸಾಧನಗಳ ಮೇಲೂ ಈ ಸಾಫ್ಟ್‌ವೇರ್‌ ಕಾರ್ಯನಿರ್ವಹಿಸಲಿದೆ. ಯಾವುದೇ ಅನಾಮಿಕ ಸೈಬರ್ ದಾಳಿಗಳು ಕಂಪನಿಗಳ ಸಾಫ್ಟ್‌ವೇರ್‌ಗಳ ಮೇಲೆ ಆಗುವುದನ್ನು ಗುರುತಿಸುವ ಜೊತೆಗೆ ಶೀಘ್ರದಲ್ಲಿ ಅಲರ್ಟ್ ಮಾಡಲಿದೆ. ಗ್ರಾಹಕರಿಗೆ ಎಚ್ಚರದ ಸಂದೇಶವನ್ನು ಕೂಡ ಈ ಸಾಫ್ಟ್‌ವೇರ್‌ ನೀಡಲಿದೆ ಎಂದು ಮೈಕ್ರೋಸಾಫ್ಟ್ ಸಂಸ್ಥೆಯ ಸೆಕ್ಯೂರಿಟಿ ವಿಭಾಗದ ನಿರ್ದೇಶಕರಾದ ವಾಸು ಜಕ್ಕಲ್ ಮೈಕ್ರೋಸಾಫ್ಟ್‌ನ ಆಧಿಕೃತ ಬ್ಲಾಗ್‌ವೊಂದರಲ್ಲಿ ಉಲ್ಲೇಖಿಸಿದ್ದಾರೆ. 

ಅಷ್ಟೇ ಅಲ್ಲದೆ ಕಂಪನಿಗಳು ತಮ್ಮ ಗ್ರಾಹಕರಿಗೆ ಅವರ ಸ್ವತ್ತುಗಳ ಮೇಲೆ ಶಿಫಾರಸು ಮಾಡುವ ಜೊತೆಗೆ ಸುರಕ್ಷತೆ ವಹಿಸುವುದು ಮತ್ತು ಸೈಬರ್ ದಾಳಿಗಳ ಮೇಲೆ ಕ್ರಮ ಕೈಗೊಳ್ಳಬಹುದು ಎಂದು ಹೇಳಲಾಗಿದೆ. 

Image
Microsoft Image

ಏನಿದು ಮೈಕ್ರೋಸಾಫ್ಟ್ ಡಿಫೆಂಡರ್ ಥ್ರೆಟ್ ಇಂಟೆಲಿಜೆನ್ಸ್?

ಈ ಸಾಫ್ಟ್‌ವೇರ್‌ಗೆ ಸಂಬಂಧಿಸಿದಂತೆ ಮೈಕ್ರೋಸಾಫ್ಟ್ ಸಂಸ್ಥೆ ತನ್ನ ಎರಡನೇ ಭದ್ರತಾ ಉತ್ಪನ್ನವನ್ನು ಪರಿಚಯಿಸಲಿದೆ. ಈ ಉಪಕರಣ ಭದ್ರತಾ ಕಾರ್ಯಚರಣೆಗಳ ತಂಡಗಳಿಗೆ ಅಗತ್ಯವಿರುವ ಗುಪ್ತಚರ ವಿವರ ನೀಡುತ್ತದೆ ಮತ್ತು ಸೈಬರ್ ದಾಳಿಯಾದ ಮೇಲೆ ತನಿಖೆ ಕೂಡ ಮಾಡುವ ಕೆಲಸ ಈ ಸಾಫ್ಟ್‌ವೇರ್‌ ಮಾಡಲಿದೆ.

ಈ ಸುದ್ದಿ ಓದಿದ್ದೀರಾ? ಭಾರತದಲ್ಲಿ ಎರಡು ಲಕ್ಷಕ್ಕಿಂತ ಅಧಿಕ ವಾಟ್ಸ್ಆ್ಯಪ್ ಖಾತೆ ನಿರ್ಬಂಧಿಸಿದ ಕೇಂದ್ರ ಸರ್ಕಾರ 

ಇದು ಗ್ರಾಹಕರಿಗೆ ಹೇಗೆ ಸಹಾಯ ಮಾಡಲಿದೆ?

ಕಂಪನಿಗಳು ತಮ್ಮ ಗ್ರಾಹಕರಿಗೆ ಎಲ್ಲ ರೀತಿ ಭದ್ರತೆ ನೀಡುವ ಜೊತೆಗೆ ಗ್ರಾಹಕರು ತಮ್ಮ ದಾಖಲೆಗಳನ್ನು ಪರಿಶೀಲನೆ ಮಾಡಬಹುದು ಮತ್ತು ಅವರ ಎಲ್ಲ ಡೇಟಾವನ್ನು ಭದ್ರತಾ ಸಹಾಯದಿಂದ ಪ್ರವೇಶಿಸಬಹುದಾಗಿದೆ. 

ಮೈಕ್ರೋಸಾಫ್ಟ್ ಪ್ರಕಾರ, ಬೆದರಿಕೆ ಮೂಲಸೌಕರ್ಯದ ಎಲ್ಲ ಮಾಹಿತಿಯು ಭದ್ರತಾ ತಂಡಗಳಿಗೆ ಸಹಾಯ ಮಾಡುತ್ತದೆ ಮತ್ತು ಕಂಪನಿಯ ಪರಿಸರದಲ್ಲಿ ಅಡಗಿರುವ ಸೈಬರ್ ದಾಳಿಗಳನ್ನು ಪತ್ತೆಹಚ್ಚಲು ಹಾಗೂ ನಿರ್ಬಂಧಿಸಲು ಈ ಸಾಫ್ಟ್‌ವೇರ್‌ ಸಹಾಯ ಮಾಡಲಿದೆ. 

ನಿಮಗೆ ಏನು ಅನ್ನಿಸ್ತು?
0 ವೋಟ್