ನಿಮಗಿದು ಗೊತ್ತೆ | ಬಾಹ್ಯಾಕಾಶ ನಿಲ್ದಾಣದ ತ್ಯಾಜ್ಯ ವಿಲೇವಾರಿಯೂ ಒಂದು ಸಮಸ್ಯೆ! ಪರಿಹಾರ ಹುಡುಕಿದ ನಾಸಾ

NASA Image
  • ಗಗನಯಾತ್ರಿಗಳಿಂದ ದಿನವೊಂದಕ್ಕೆ 270 ಕಿ.ಗ್ರಾಂಗಳಷ್ಟು ತ್ಯಾಜ್ಯ ಸಂಗ್ರಹ
  • ತ್ಯಾಜ್ಯ ವಿಲೇವಾರಿ ತಂತ್ರಜ್ಞಾನ ಬಳಸಿ 78 ಕಿ.ಗ್ರಾಂನಷ್ಟು ಕಸ ತುಂಬಬಹುದು

ಟೆಕ್ಸಾಸ್ ಮೂಲದ ನ್ಯಾನೊರಾಕ್ಸ್ ಎಂಬ ಅಂತಾರಾಷ್ಟ್ರೀಯ ಬಾಹ್ಯಾಕಾಶ ತಂತ್ರಜ್ಞಾನ ಕಂಪನಿ (ಐಎಸ್ಎಸ್) ಅಭಿವೃದ್ಧಿಪಡಿಸಿದ ತ್ಯಾಜ್ಯ ವಿಲೇವಾರಿ ತಂತ್ರಜ್ಞಾನವನ್ನು ನಾಸಾ ಬಾಹ್ಯಾಕಾಶ ನಿಲ್ದಾಣದ ಯಶಸ್ವಿಯಾಗಿ ಪರೀಕ್ಷಿಸಿದೆ.

ನಾಸಾದ ಸಹಯೋಗದೊಂದಿಗೆ ತಯಾರಾದ ವಿಲೇವಾರಿ ಪರೀಕ್ಷೆಯು ಯಶಸ್ಸು ಕಂಡಿದೆ. ಇದರಿಂದ ಮುಂದಿನ ದಿನಗಳಲ್ಲಿ ಎಲ್ಲ ಬಾಹ್ಯಾಕಾಶ ನಿಲ್ದಾಣದ ತ್ಯಾಜ್ಯವನ್ನು ವಿಲೇವಾರಿ ಮಾಡುವುದಕ್ಕೆ ನೆರವಾಗಲಿದೆ ಎಂದು ನಾಸಾ ಹೇಳಿದೆ. 

ಏನಿದು ಬಾಹ್ಯಾಕಾಶದ ಕಸದ ಸಮಸ್ಯೆ?

ಗಗನಯಾತ್ರಿಗಳು ಒಂದು ದಿನಕ್ಕೆ ಸುಮಾರು 270 ಕಿ.ಗ್ರಾಂಗಳಷ್ಟು ತ್ಯಾಜ್ಯ ಸೃಷ್ಟಿಸುತ್ತಾರೆ. ಪ್ಯಾಕಿಂಗ್ ವಸ್ತುಗಳು, ಸರಕು ವರ್ಗಾವಣೆ ಚೀಲಗಳು, ಸಿಬ್ಬಂದಿಯ ಕೊಳಕು ಉಡುಪುಗಳು, ನೈರ್ಮಲ್ಯ ಉತ್ಪನ್ನಗಳು ಮತ್ತು ಬಳಸಿದ ಬಾಹ್ಯಾಕಾಶ ಸಾಮಗ್ರಿಗಳು ತ್ಯಾಜ್ಯದಲ್ಲಿ ಸೇರಿರುತ್ತವೆ. ಸಾಮಾನ್ಯವಾಗಿ ಐಎಸ್ಎಸ್ ಗಗನಯಾತ್ರಿಗಳು ತಮ್ಮ ವಿಲೇವಾರಿಯನ್ನು ಬಾಹ್ಯಾಕಾಶದಲ್ಲಿ ಸಂಗ್ರಹಿಸಿ ಸಿಗ್ರಸ್ ಕಾರ್ಗೋ ವಾಹನ (ಬಾಹ್ಯಾಕಾಶ ನಿಲ್ದಾಣಕ್ಕೆ ಸರಬರಾಜು ಮಾಡಲು ಮತ್ತು ವಿನ್ಯಾಸಗೊಳಿಸಲಾದ ಬಾಹ್ಯಾಕಾಶ ನೌಕೆಯಾಗಿದೆ) ನಿಲ್ದಾಣಕ್ಕೆ ಬರುವವರೆಗೂ ಕಾಯ್ದು  ಬಳಿಕ ವಿಲೇವಾರಿ ಸಾಗಿಸಬೇಕಿತ್ತು. ಆದರೆ ಅದು ಬರುವ ಒಳಗೆ ಸಾಕಷ್ಟು ಕಸದ ರಾಶಿ ಬೀಳುತ್ತಿತ್ತು. ಇದಕ್ಕೆ ಪರ್ಯಾಯವಾಗಿ ನಾಸಾ ಮತ್ತು ನ್ಯಾನೊರಾಕ್ಸ್ ಕಂಪನಿ ಜೊತೆಗೂಡಿ ನೂತನ ತಂತ್ರಜ್ಞಾನ ಪರಿಚಯಿಸಿದೆ. 

ಈ ಸುದ್ದಿ ಓದಿದ್ದೀರಾ? ನಿಮಗಿದು ಗೊತ್ತೆ | ಅಮೆರಿಕದ ನೀಲಾಕಾಶ ಹಸಿರಾಗಲು ಕಾರಣವೇನು?

ಹೊಸ ತಂತ್ರಜ್ಞಾನದ ವಿಶೇಷತೆಯೇನು?

ಈ ನೂತನ ತಂತ್ರಜ್ಞಾನವು ಪ್ರಾಥಮಿಕ ಕಾರ್ಗೋ ವಾಹನದಂತೆ ಕೆಲಸ ಮಾಡುತ್ತದೆ. ಗಗನಯಾತ್ರಿಗಳು ಕಸದ ಚೀಲಗಳನ್ನು ತುಂಬಿದ ಮೇಲೆ ಬಾಹ್ಯಾಕಾಶ ನೌಕೆಯನ್ನು ಬಿಡುಗಡೆ ಮಾಡುತ್ತಾರೆ. ಬಳಿಕ ಭೂಮಿಯ ವಾತಾವರಣಕ್ಕೆ ಮರುಪ್ರವೇಶಿಸುವ ಸಮಯದಲ್ಲಿ ಡಿ- ಕಕ್ಷೆ ದಾಟುವಾಗ ತ್ಯಾಜ್ಯ ಸಂಪೂರ್ಣವಾಗಿ ಸುಟ್ಟುಹೋಗಿ ವಿಲೇವಾರಿಯಾಗುತ್ತದೆ. ಇದರಿಂದ ಗಗನಯಾತ್ರಿಗಳು ಕಸ ಹೊತ್ತೊಯ್ಯಲು ವಾಹನ ಬರುವವರೆಗೆ ಕಾಯುವ ಅಗತ್ಯವಿರುವುದಿಲ್ಲ ಎಂದು ನಾಸಾ ತಿಳಿಸಿದೆ.

ನೂತನ ತಂತ್ರಜ್ಞಾನದ ಮೊದಲ ಪರೀಕ್ಷೆ ಮಾಡಲಾಗಿದ್ದು ಯಶಸ್ಸು ಕಂಡಿದೆ. ಇದರಲ್ಲಿ ಸುಮಾರು 78 ಕಿ.ಗ್ರಾಂನಷ್ಟು ತ್ಯಾಜ್ಯ ತುಂಬಬಹುದಾಗಿದೆ. “ಈ ಪ್ರಯೋಗ ಮುಂದಿನ ದಿನಗಳಲ್ಲಿ ಬಾಹ್ಯಾಕಾಶ ವಲಯದಲ್ಲಿ ದೊಡ್ಡ ಬದಲಾವಣೆ ತರಲಿದೆ. ಅಷ್ಟೇ ಅಲ್ಲದೆ, ಭವಿಷ್ಯದ  ಒಳನೋಟಗಳನ್ನು ಕಾಣುವ ಪ್ರಯತ್ನಕ್ಕೆ ಇದೊಂದು ಮಾದರಿ ಹೆಜ್ಜೆ. ನಾಸಾ ನಮ್ಮ ಸಂಸ್ಥೆಯನ್ನು ಇದರ ಭಾಗವಾಗಿಸಿದ್ದಕ್ಕೆ ಹೃದಯ ಪೂರ್ವಕ ಧನ್ಯವಾದಗಳು” ಎಂದು ನ್ಯಾನೊರಾಕ್ಸ್ ಕಂಪನಿಯ ಮುಖ್ಯಸ್ಥ ಅಮೆಲಾ ವಿಲ್ಸನ್ ತಿಳಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
2 ವೋಟ್