ಭಾರತಕ್ಕೆ ಲಗ್ಗೆಯಿಟ್ಟ ನಥಿಂಗ್ ಸ್ಮಾರ್ಟ್ ಫೋನ್

  • ಫ್ಲಿಪ್‌ಕಾರ್ಟ್‌ನಲ್ಲಿ ಬಿಡುಗಡೆಯಾಗಲಿರುವ 'ನಥಿಂಗ್'
  • ಹೊಸ ಉತ್ಸಾಹದಿಂದ ತಂತ್ರಜ್ಞಾನಕ್ಕೆ ಮರಳಿದ ಘೋಷಣೆ

ಲಂಡನ್ ಮೂಲದ 'ಒನ್ ಪ್ಲಸ್' ಸಹ ಸಂಸ್ಥಾಪಕ ಕಾರ್ಲ್ ಪೀ ಪ್ರಾರಂಭಿಸಿರುವ ಹೊಸ ಟೆಕ್ ಕಂಪನಿಯೇ 'ನಥಿಂಗ್.' ಈ ಕಂಪನಿಯು ಹೊಸ ಸ್ಮಾರ್ಟ್ ಫೋನ್ ಅನ್ನು ಫ್ಲಿಪ್‌ಕಾರ್ಟ್ ಬಿಡುಗಡೆ ಮಾಡಲು ಸಿದ್ಧವಾಗುತ್ತಿದೆ.

ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್‌ ಪೋನ್ ತಯಾರಿಕಾ ಕಂಪನಿಗಳು ಹಲವು ಫೀಚರ್‌ಗಳಿರುವ ಮೊಬೈಲ್‌ಗಳನ್ನು ಮಾರುಕಟ್ಟೆಗೆ ತರುತ್ತಿವೆ. 'ನಥಿಂಗ್' ಸಂಸ್ಥೆಯೂ ಮೊದಲ ಸ್ಮಾರ್ಟ್‌ ಪೋನ್ ಅನ್ನು ಬಿಡುಗಡೆ ಮಾಡಿದೆ.

“ಹೊಸ ಉತ್ಸಾಹದೊಂದಿಗೆ ಮತ್ತೆ ತಂತ್ರಜ್ಞಾನಕ್ಕೆ ಮರಳಿದ್ದೇವೆ. ಆರಂಭದಲ್ಲಿ ನಾವು ಸಣ್ಣ ಮತ್ತು ಟೆಲ್ಕೋ ವ್ಯಾಪಾರಿಗಳೊಂದಿಗೆ ಪ್ರಾರಂಭಿಸಲು ಹೆಮ್ಮೆ ಪಡುತ್ತೇವೆ” ಎಂದು ನಥಿಂಗ್ ಸಂಸ್ಥೆ ಟ್ವೀಟ್ ಮಾಡಿದೆ. 

ನಥಿಂಗ್ ಮೊಬೈಲ್  ವೈಶಿಷ್ಟ್ಯಗಳು 

ಉನ್ನತ ಗುಣಮಟ್ಟದ ಸ್ಮಾರ್ಟ್‌ಫೋನ್ ಸ್ನಾಪ್‌ಡ್ರಾಗನ್ ಪ್ರೊಸೆಸರ್ ಮತ್ತು ನಥಿಂಗ್ ಐಓಎಸ್‌ನಲ್ಲಿ ಬರಲಿದೆ. ಈ ಮೊಬೈಲ್ ನೀಲಿ, ಬ್ಲಾಕ್ ಗ್ಲಾಸಿ, ಡಾರ್ಕ್ ಪಿಂಕ್, ಡಾರ್ಕ್ ಗೋಲ್ಡ್, ಬಿಳಿ ಬಣ್ಣದಲ್ಲಿ ಲಭ್ಯವಿರಲಿದೆ. “ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್” 8ನೇ ಜನರೇಷನ್ ಪ್ರೊಸೆಸರ್ ಹಾಗೂ 8ಜಿಬಿ ರಾಮ್‌ನೊಂದಿಗೆ ಸ್ಮಾರ್ಟ್‌ಫೋನ್ ಹೆಚ್ಚು ಮೆಮೊರಿ ಇಂಟೆನ್ಸಿವ್  ಅಪ್ಲಿಕೇಶನ್‌ಗಳಲ್ಲಿಯೂ ಸಹ ಸರಾಗವಾಗಿ ಚಲಿಸುತ್ತದೆ. 

ಈ ಸ್ಮಾರ್ಟ್ ಪೋನಿನಲ್ಲಿ ಪ್ರಾಥಮಿಕ ಸಂವೇದಕದೊಂದಿಗೆ 8 ಎಂಪಿ ಅಲ್ಟ್ರಾ ವೈಡ್ ಆಂಗಲ್ ಮತ್ತು 2 ಎಂಪಿ ಮ್ಯಾಕ್ರೋ ಸಂವೇದಕ ಟ್ರಿಪಲ್ ಕ್ಯಾಮರಾ ಹಾಗೂ 32 ಎಂಪಿ ಸೆಲ್ಫಿಯನ್ನು ಹೊಂದಿದೆ. ನಥಿಂಗ್ ಸ್ಮಾರ್ಟ್‌ಫೋನ್‌ನಲ್ಲಿ ಸ್ಟಾಕ್ ಆಂಡ್ರಾಯ್ಡ್ ಪ್ಲಾಟ್ ಫಾರ್ಮ್‌ ಬಳಸುವುದಿಲ್ಲ. ಬದಲಾಗಿ ʼನಥಿಂಗ್ ಓಎಸ್ʼ ಅನ್ನು ತರಲಾಗುತ್ತಿದೆ.

ಈ ಮೊಬೈಲ್ 4950 ಎಂಎಎಚ್ ಬ್ಯಾಟರಿಯೊಂದಿಗೆ 6.7 ಇಂಚಿನ ಪರದೆ ಜೊತೆಗೆ 1080*2400 ಪಿಕ್ಸೆಲ್‌ಗಳನ್ನು ಹೊಂದಿರಲಿದೆ. ನಥಿಂಗ್ ಪರದೆಯನ್ನು ಗೊರಿಲ್ಲಾ ಗ್ಲಾಸ್‌ನಿಂದ ರಕ್ಷಿಸಲಾಗಿದೆ. ಒಟ್ಟಾರೆಯಾಗಿ ಒನ್ ಪ್ಲಸ್, "ಓಎಸ್‌ನೊಂದಿಗೆ ನೀಡುತ್ತಿರುವ ಅತ್ಯುತ್ತಮ ಬದಲಾವಣೆಗಳನ್ನು ನಾವು ಈ ಸ್ಮಾರ್ಟ್ ಪೋನಿನಲ್ಲಿ ಕಾಣಬಹುದು" ಎಂದು ತಿಳಿಸಿದೆ.

ಪ್ಲಿಪ್‌ಕಾರ್ಟ್‌ನಲ್ಲಿ ನಥಿಂಗ್ ಮೊಬೈಲ್ ಬಗ್ಗೆ “ಅಲರ್ಟ್ ಮೀ” ಆಯ್ಕೆ ನೀಡಲಾಗಿದೆ. ಇಲ್ಲಿ ನಥಿಂಗ್ ಮೊಬೈಲ್ ಬಿಡುಗಡೆ ಕುರಿತಂತೆ ಖರೀದಿಸುವಲ್ಲಿ ಆಸಕ್ತಿ ಇದ್ದರೆ ಹೆಚ್ಚಿನ ಮಾಹಿತಿ ಪಡೆಯಬಹುದು. 

ನಿಮಗೆ ಏನು ಅನ್ನಿಸ್ತು?
4 ವೋಟ್