ಇಂಟರ್ನೆಟ್ ಬಳಸದೆ ಜಿ-ಮೇಲ್ ಸಂದೇಶ ಓದಬಹುದು ಮತ್ತು ಪ್ರತಿಕ್ರಿಯಿಸಬಹುದು

Gmail Image
  • ಕಂಪ್ಯೂಟರ್ ಅಥವಾ ಲ್ಯಾಪ್ಟಾಪ್‌ನಲ್ಲಿ ಕ್ರೋಮ್ ಅಪ್ಲಿಕೇಶನ್‌ನ್ನು ಡೌನ್ಲೋಡ್ ಮಾಡಿ
  • ಆಫ್‌ಲೈನ್‌ ಜಿ-ಮೇಲ್‌ಗೆ ಸಿಂಕ್ ಮಾಡುವ ಮೂಲಕ ಈ ಆಯ್ಕೆಯನ್ನು ಪರೀಶಿಲಿಸಿ

ಆಹಾರ, ಬಟ್ಟೆ, ಇನ್ನೂ ಅನೇಕ ಉಪಕರಣಗಳನ್ನು ಆರ್ಡರ್ ಮಾಡುವ ಮೂಲಕ ಆನ್‌ಲೈನ್‌ನಲ್ಲಿರುವ ಎಲ್ಲ ವೆಬ್‌ಸೈಟ್‌ಗಳನ್ನು ಪ್ರವೇಶಿಸಲು ಇಂಟರ್ನೆಟ್ ಪ್ರಮುಖ ಪಾತ್ರ ವಹಿಸಿದೆ. ಆದರೆ, ಗೂಗಲ್ ಈಗ ಇಂಟರ್ನೆಟ್ ಬಳಸದೆ ಸಂದೇಶಗಳನ್ನು ಕಳುಹಿಸುವ ಒಂದು ವಿಶಿಷ್ಟ ಅವಕಾಶವನ್ನು ಪರಿಚಯಿಸಿದೆ. 

ಇಷ್ಟು ದಿನಗಳವರೆಗೆ 'ಇ-ಮೇಲ್‌' ಸಂದೇಶಗಳನ್ನು ಕಳುಹಿಸಲು ಇಂಟರ್ನೆಟ್ ಅಗತ್ಯವಿತ್ತು. ಈಗ ಗೂಗಲ್‌ ಹೊಸ ಪ್ರಯತ್ನಕ್ಕೆ ಮುಂದಾಗಿದ್ದು, ಬಳಕೆದಾರರು ಇಂಟರ್ನೆಟ್ ಬಳಸದೆಯೇ 'ಜಿ-ಮೇಲ್' ಮೂಲಕ ಸಂದೇಶಗಳನ್ನು ಓದುವ, ಪ್ರತಿಕ್ರಿಯಿಸುವ ಹಾಗೂ ಹುಡುಕಬಹುದಾದ ಅವಕಾಶವನ್ನು ನೀಡುತ್ತಿದೆ. 

"ಬಳಕೆದಾರರು mail.google.comಗೆ ಭೇಟಿ ನೀಡುವ ಮೂಲಕ ಇಂಟರ್ನೆಟ್‌ ಸಂಪರ್ಕ ಹೊಂದಿಲ್ಲದಿದ್ದರೂ ಸಹ ಜಿ-ಮೇಲ್‌ನಲ್ಲಿ ಸಂದೇಶಗಳನ್ನು ರವಾನಿಸಬಹುದು" ಎಂದು ಗೂಗಲ್ ಸಹಾಯವಾಣಿ ಮಾಹಿತಿ ನೀಡಿದೆ. 

ಜಿ-ಮೇಲ್‌ನಲ್ಲಿ ಆಫ್‌ಲೈನ್‌ ಸಂದೇಶಗಳನ್ನು ಕಳುಹಿಸುವುದು ಹೇಗೆ?
ಮೊದಲಿಗೆ ಕಂಪ್ಯೂಟರ್ ಅಥವಾ ಲ್ಯಾಪ್ಟಾಪ್‌ನಲ್ಲಿ ಕ್ರೋಮ್ ಅಪ್ಲಿಕೇಶನ್‌ನ್ನು ಡೌನ್ಲೋಡ್ ಮಾಡಿಕೊಳ್ಳಬೇಕು. ನಂತರ ಸೆಟ್ಟಿಂಗ್ಸ್‌ಗೆ ಹೋಗಿ ಆಫ್‌ಲೈನ್‌ ಮೇಲ್‌ನ್ನು ಸಕ್ರಿಯಗೊಳಿಸಿ ಹಾಗೂ ಎಷ್ಟು ದಿನಗಳಕಾಲ ಬೇಕಿದೆ ಎಂದು ನಮೂಸಿದ ಬಳಿಕ, ಆಫ್‌ಲೈನ್‌ ಜಿ-ಮೇಲ್‌ಗೆ ಸಿಂಕ್ ಮಾಡಬೇಕು. ತದನಂತರ ʻಬದಲಾವಣೆಗಳನ್ನು ಉಳಿಸಿ' ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು. 

ಬಳಕೆದಾರರು ಆಫ್‌ಲೈನ್‌ನಲ್ಲಿ ಇ-ಮೇಲ್‌ಗಳನ್ನು ಕಳುಹಿಸಿದ ತಕ್ಷಣ, ನಿಮ್ಮ ಮೇಲ್‌ನಲ್ಲಿ ಹೊಸ "ಔಟ್‌ಬಾಕ್ಸ್‌" ಫೋಲ್ಡರ್‌ಗೆ ರವಾನೆಯಾಗುತ್ತದೆ. ನಂತರ, ನೀವು ಆನ್‌ಲೈನ್‌ಗೆ ಹಿಂತಿರುಗಿದಾಕ್ಷಣ ಜಿ-ಮೇಲ್ ಕಳುಹಿಸಲಾಗುತ್ತದೆ.

ಈ ಸುದ್ದಿ ಓದಿದ್ದೀರಾ? ಬೆಂಗಳೂರಿನ ಪ್ರಯಾಣಿಕರಿಗೆ ಡಿಜಿಟಲ್ ಪಾಸ್ ಬಳಸಲು ಬಿಎಂಟಿಸಿ ಸಲಹೆ

ಈ ವೈಶಿಷ್ಟ್ಯವನ್ನು ತಗೆದುಹಾಕುವುದು ಹೇಗೆ?
ಕಂಪ್ಯೂಟರ್ ಅಥವಾ ಲ್ಯಾಪ್ಟಾಪ್‌ನಲ್ಲಿ ಕ್ರೋಮ್ ಅಪ್ಲಿಕೇಶನ್‌ನ್ನು ತೆರೆಯಬೇಕು. ನಂತರ
ಮೇಲಿನ ಬಲಭಾಗದಲ್ಲಿ ಕಾಣುವ ಸೆಟ್ಟಿಂಗ್ಸ್ ಮೇಲೆ ಕ್ಲಿಕ್ ಮಾಡಿ ಅಡ್ವಾನ್ಸ್ ಬಟನ್‌ನ್ನು ಆಯ್ಕೆ ಮಾಡಿಕೊಳ್ಳಬೇಕು. ಕೆಳಗೆ ಕಾಣುವ "ಗೌಪ್ಯತೆ ಮತ್ತು ಭದ್ರತೆ" ಆಯ್ಕೆ ಮೇಲೆ ಕ್ಲಿಕ್ ಮಾಡಿ, ನಂತರ ಕುಕೀಸ್‌ಗಳನ್ನು ಅಳಸಬೇಕು.

ನಿಮಗೆ ಏನು ಅನ್ನಿಸ್ತು?
0 ವೋಟ್