ಆಗಸ್ಟ್ 15ರಂದು ಎಲೆಕ್ಟ್ರಿಕ್ ಕಾರು ಅನಾವರಣ| ಓಲಾ ಸಂಸ್ಥೆ ತಯಾರಿ

Ola electric car Image
  • ಎಲೆಕ್ಟ್ರಿಕ್ ಕಾರು ಮತ್ತು ಬೈಕ್‌ ಎರಡೂ ಬಿಡುಗಡೆಗೊಳಿಸಲಿರುವ ಓಲಾ
  • ಸಂಸ್ಥೆಯ ಮುಖ್ಯಸ್ಥ ಭವಿಶ್ ಅಗರ್ವಾಲ್ ಟ್ವೀಟ್‌ ಮೂಲಕ ಮಾಹಿತಿ

ಭಾರತಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ತುಂಬಿದೆ. ಇದನ್ನು ಸಂಭ್ರಮಿಸಲು ಎಲ್ಲ ವಲಯಗಳೂ ಅವರದೇ ಆದ ಕೊಡುಗೆಯನ್ನು ನೀಡುತ್ತಿದ್ದಾರೆ. ಅದೇ ರೀತಿ ಓಲಾ ಸಂಸ್ಥೆ ಕೂಡ ತಮ್ಮ ಸಂಸ್ಥೆಯಿಂದ ನೂತನ ತಂತ್ರಜ್ಞಾನ ಬಳಸಿ ಎಲೆಕ್ಟ್ರಿಕ್ ಕಾರೊಂದನ್ನು ಬಿಡುಗಡೆ ಮಾಡಲು ಮುಂದಾಗಿದೆ. 

ಇತ್ತೀಚೆಗೆ ಓಲಾ ಸಂಸ್ಥೆ ಎಲೆಕ್ಟ್ರಿಕ್ ಬೈಕ್ ಕೂಡ ಬಿಡುಗಡೆ ಮಾಡಿತ್ತು, ಅದು ಎಲೆಕ್ಟ್ರಿಕ್ ವಾಹನದ ಮಾರುಕಟೆಯಲ್ಲಿ ಹೆಚ್ಚು ಪ್ರಚಾರ ಪಡೆದಿತ್ತು. ಅದನ್ನು ಅರಿತಿರುವ ಸಂಸ್ಥೆ ಇದೀಗ ನೂತನ ಕಾರು ತಯಾರು ಮಾಡಿದೆ. ಅದನ್ನು ಆಗಸ್ಟ್ 15ರಂದು ಪರಿಚಯಿಸುವುದಾಗಿ ತಿಳಿಸಿದೆ. 

ಇದಕ್ಕೆ ಸಂಬಂಧಿಸಿದಂತೆ ವಿಡಿಯೊವೊಂದನ್ನು ಬಿಡುಗಡೆ ಮಾಡಿರುವ ಸಂಸ್ಥೆಯ ಮುಖ್ಯಸ್ಥ ಭವಿಶ್ ಅಗರ್ವಾಲ್. “ಇದನ್ನು ಅನಾವರಣ ಮಾಡಲು ಕಾತುರದಿಂದ ಕಾಯುತ್ತಿದ್ದೇವೆ” ಎಂದು  ಟ್ವೀಟ್ ಮಾಡಿದ್ದಾರೆ. 

ಓಲಾ ಎಲೆಕ್ಟ್ರಿಕ್ ಕಾರು ಬಿಡುಗಡೆಯಾಗಲು ಸಿದ್ಧವಾಗಿದೆ! 

ಹೌದು, ಆಗಸ್ಟ್ 15ರಂದು ಎಲೆಕ್ಟ್ರಿಕ್ ಕಾರನ್ನು ಪರಿಚಯಿಸಲು ಸಂಸ್ಥೆ ಸಿದ್ಧವಾಗಿದೆ. ಆದರೆ  ಕೇವಲ ಎಲೆಕ್ಟ್ರಿಕ್ ಕಾರು ಮಾತ್ರವಲ್ಲ, ಇನ್ನೂ ಎರಡು ಉತ್ಟನ್ನಗಳನ್ನು ಬಿಡುಗಡೆ ಮಾಡಲು ಸಂಸ್ಥೆ ಮುಂದಾಗಿದೆ. ಅದು ಎಲೆಕ್ಟ್ರಿಕ್ ಕಾರು ಮತ್ತು ಬೈಕ್‌ನ್ನು ಒಳಗೊಂಡಿದೆ ಎಂದು ವರದಿಯಾಗಿದೆ. 

ನಿಮಗೆ ಏನು ಅನ್ನಿಸ್ತು?
0 ವೋಟ್