ಒಂದು ನಿಮಿಷದ ಓದು | ವಿದ್ಯಾರ್ಥಿನಿಯರೇ ನಿರ್ಮಿಸಿದ ಅಜಾದಿಸ್ಯಾಟ್ ಉಡಾವಣೆಗೆ ಸಿದ್ಧ

AzadiSAT satellite Image

ಆಗಸ್ಟ್ 7ರಂದು 75ರ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ವಿದ್ಯಾರ್ಥಿನಿಯರು ನಿರ್ಮಿಸಿದ ಉಪಗ್ರಹ ಉಡಾವಣೆಯಾಗಲಿದೆ ಎಂದು ಇಸ್ರೋ ಸಂಸ್ಥೆ ವರದಿ ಮಾಡಿದೆ. 

ಇದೊಂದು ನೂತನ ಪ್ರಯೋಗ. ಈ ಉಪಗ್ರಹದ ಹೆಸರು ʻಅಜಾದಿಸ್ಯಾಟ್ʼ. ಆಗಸ್ಟ್ 7ರಂದು ಭಾರತದ ಪ್ರಧಾನ ಮಂತ್ರಿ ಚಾಲನೆ ನೀಡಲಿದ್ದಾರೆ.

ಅಜಾದಿಸ್ಯಾಟ್ ಉಪಗ್ರಹವು 75 ಪೇಲೋಡ್‌ಗಳನ್ನು (ಕಾರ್ಯಾಚರಣೆಗೆ ಅವಶ್ಯಕ ಉಪಕರಣಗಳನ್ನು ಹೊತ್ತೊಯ್ಯುವ ವಾಹನ) ಒಳಗೊಂಡಿದೆ. ಭಾರತಾದ್ಯಂತ ವಿವಿಧ ಶೈಕ್ಷಣಿಕ ಸಂಸ್ಥೆಗಳ 750 ವಿದ್ಯಾರ್ಥಿನಿಯರು ಅಭಿವೃದ್ಧಿಪಡಿಸಿದ್ದಾರೆ ಮತ್ತು  ನಿರ್ಮಿಸಿದ್ದಾರೆ ಎಂದು ಇಸ್ರೋ ಸಂಸ್ಥೆಯ ಅಧ್ಯಕ್ಷರಾದ ಎಸ್ ಸೋಮನಾಥ್ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಜಿತೇಂದ್ರ ಸಿಂಗ್ ನೇತೃತ್ವದಲ್ಲಿ ನಡೆದ ವಿಜ್ಞಾನ ಇಲಾಖೆಗಳ ಜಂಟಿ ಸಭೆಯಲ್ಲಿ ಹೇಳಿದರು.

ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಆಗಸ್ಟ್ 7 ರಂದು ಬೆಳಿಗ್ಗೆ 9:18 ಕ್ಕೆ ಉಪಗ್ರಹವನ್ನು ʻಲೋ ಅರ್ಥ್ ಆರ್ಬಿಟ್ʼಗೆ ಉಡಾವಣೆ ಮಾಡಲಾಗುವುದು ಎಂದು ವರದಿ ಮಾಡಲಾಗಿದೆ.

"ಇದು ವಿಜ್ಞಾನ, ತಂತ್ರಜ್ಞಾನ, ಇಂಜಿನಿಯರಿಂಗ್ ಮತ್ತು ಗಣಿತ ಓದುವ ಮಹಿಳೆಯರನ್ನು ಉತ್ತೇಜಿಸಲು ಈ ರೀತಿಯ ಮೊದಲ ಬಾಹ್ಯಾಕಾಶ ಕಾರ್ಯಾಚರಣೆ ಮಾಡಲಾಗಿದೆ. ಏಕೆಂದರೆ ಈ ವರ್ಷದ ವಿಶ್ವಸಂಸ್ಥೆಯ ವಿಷಯ 'ಬಾಹ್ಯಾಕಾಶದಲ್ಲಿ ಮಹಿಳೆಯರು' ಆಗಿದೆ. ಆದ್ದರಿಂದ ಈ ಪ್ರಯತ್ನ ಮಾಡಲಾಗಿದೆ" ಎಂದು ಸ್ಪೇಸ್ ಕಿಡ್ಜ್ ಇಂಡಿಯಾ ಸಂಸ್ಥೆಯ ಮುಖ್ಯ ತಂತ್ರಜ್ಞಾನ ಅಧಿಕಾರಿ ರಿಫಾತ್ ಶಾರೂಕ್ ತಿಳಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್