ಒಂದು ನಿಮಿಷದ ಓದು | ಆರ್ಥಿಕ ನಷ್ಟ ಸರಿದೂಗಿಸಲು 10,000 ಉದ್ಯೋಗಿಗಳನ್ನು ವಜಾಗೊಳಿಸಿದ ಆಲಿಬಾಬಾ ಸಂಸ್ಥೆ

Alibaba Image

ಆರ್ಥಿಕ ನಷ್ಟ ಅನುಭವಿಸುತ್ತಿರುವ ಚೀನಾದ ದೊಡ್ಡ ಟೆಕ್ ಸಂಸ್ಥೆಯಾದ ಅಲಿಬಾಬಾ ಜೂನ್ ತಿಂಗಳಲ್ಲಿ ಸುಮಾರು ಹತ್ತು ಸಾವಿರ ಕೆಲಸಗಾರರನ್ನು ಹುದ್ದೆಯಿಂದ ತೆಗೆದುಹಾಕಿದೆ ಎಂದು ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ಸಂಸ್ಥೆ ವರದಿ ಮಾಡಿದೆ. 

ಅಲಿಬಾಬಾ ಸಂಸ್ಥೆ  ಜೂನ್ ತಿಂಗಳಲ್ಲಿ 9,421ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹ್ಯಾಂಗ್‌ಝೌನಿಂದ ತೆಗೆದುಹಾಕಿದೆ. ಕಂಪನಿಯು ಒಟ್ಟಾರೆ ಕಾರ್ಯಪಡೆಯನ್ನು 245,700 ಉದ್ಯೋಗಿಗಳಿಗೆ ಮಿತಿಗೊಳಿಸಿದೆ ಎಂದು ಸಂಸ್ಥೆ ತಿಳಿಸಿದೆ. 

ಮಾರ್ಚ್ 2016ಕ್ಕೆ ಹೋಲಿಸಿದರೆ ಕಳೆದ ಆರು ತಿಂಗಳಿಂದ ವಜಾಗೊಂಡವರ ಸಂಖ್ಯೆ ಹೆಚ್ಚಾಗಿದೆ ಮತ್ತು ಆದಾಯದಲ್ಲಿ 22.74 ಶತಕೋಟಿ ಯುವಾನ್‌ಗೆ ($3.4 ಶತಕೋಟಿ) ಶೇ. 50ರಷ್ಟು ಕುಸಿತ ಕಂಡಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 45.14 ಶತಕೋಟಿ ಯುವಾನ್‌ನಷ್ಟು ಕಡಿಮೆಯಾಗಿದೆ ಎಂದು ವರದಿಯಾಗಿದೆ. 

ಚೀನಾದಲ್ಲಿ ಆಗುತ್ತಿರುವ ಆರ್ಥಿಕ ಬದಲಾವಣೆ ಮತ್ತು ನಿರಂತರ ನಿಯಂತ್ರಕ ಒತ್ತಡ ಅನುಭವಿಸಿರುವ ಸಂಸ್ಥೆ ತನ್ನ ಮಾರುಕಟ್ಟೆಯಲ್ಲಿ ಕೂಡ ನಷ್ಟ ಅನುಭವಿಸಿದೆ ಹಾಗೂ ಮುಂದಿನ ದಿನಗಳಲ್ಲಿ ಹಲವು ಕಾಲೇಜುಗಳಿಂದ ತೇರ್ಗಡೆಯಾದ ಐದು ಸಾವಿರಕ್ಕೂ ಹೆಚ್ಚು ಉದ್ಯೋಗಿಗಳನ್ನು ನೇಮಕಾತಿ ಮಾಡಲಿದೆ ಎಂದು ಆಲಿಬಾಬಾ ಸಂಸ್ಥೆಯ ಮುಖ್ಯಸ್ಥ ಡೇನಿಯಲ್ ಜಾಂಗ್ ಯೋಂಗ್ ಹೇಳಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್