ಒಂದು ನಿಮಿಷದ ಓದು | ʻಆಲ್ ಇನ್ ಒನ್ʼ ಪಿಸಿ ಬಿಡುಗಡೆ ಮಾಡಿದ ಎಚ್‌ಪಿ

HP `All in One' PC Image

ಎಚ್‌ಪಿ ಸಂಸ್ಥೆ  ನೂತನ ಉತ್ಪನ್ನವನ್ನು ಪರಿಚಯಿಸಲು ಸಿದ್ಧವಾಗಿದೆ. ಇದು ಟಿವಿ ಮತ್ತು ಕಂಪ್ಯೂಟರ್ ಎರಡು ರೀತಿಯ ಶ್ರೇಣಿಯನ್ನು ಒಳಗೊಂಡಿದೆ. 

ಹೈಬ್ರಿಡ್ ಕೆಲಸ ಮಾಡುವವರಿಗೆ ಇದರಿಂದ ಹೆಚ್ಚು ಸಹಾಯವಾಗಲಿದೆ ಎಂದು ಕಂಪನಿ ತಿಳಿಸಿದೆ. ಇದರ ವೈಶಿಷ್ಟ್ಯದ ಎಂದರೆ ಇದರಲ್ಲಿ ಹಲವು ತಂತ್ರಜ್ಞಾನ ಅಳವಡಿಸಲಾಗಿದೆ ಮತ್ತು ಹಿಂದಿನ ಸಿಸ್ಟಮ್‌ಗೆ ಹೋಲಿಸಿದರೆ ಇದರ ಕಾರ್ಯಾಚರಣೆಯ ವೇಗ ಬಹಳ ಹೆಚ್ಚಿದೆ.

ಬೆಲೆ ಮತ್ತು ವೈಶಿಷ್ಟ್ಯ

ಇದು 34 ಇಂಚಿನ ಪರದೆಯ ಜತೆಗೆ ಪೆವಿಲಿಯನ್‌ 31.5 ಇಂಚಿನ ಮಾನಿಟರ್‌ಗಳು ಇದ್ದು, ಕ್ರಮವಾಗಿ ಇಂಟೆಲ್‌ನ 11ನೇ ಪೀಳಿಗೆಯ ಮತ್ತು 12ನೇ ಪೀಳಿಗೆಯ ಪ್ರೊಸೆಸರ್‌ಗಳನ್ನು ಹೊಂದಿವೆ.

ಎಚ್‌ಪಿ ಎನ್.ವಿ.ವೈ 16 ಎಂ.ಪಿ ಕ್ಯಾಮೆರಾ ಸಂವೇದಕ ಮತ್ತು ವಿಡಿಯೊ ಸಂದೇಶಗಳಿಗಾಗಿ ವರ್ಧಿತ ಲೈಟಿಂಗ್‌ನೊಂದಿಗೆ ಬರುತ್ತದೆ. ಇನ್ನೂ ಇಂಟೆಲ್ ಕೋರ್ ಐ9 ಪ್ರೊಸೆಸರ್ ಮತ್ತು ಆರ್.ಟಿ.ಎಕ್ಸ್ 3060 ನಿಂದ ಚಾಲಿತವಾಗಿದೆ. ಆಲ್-ಇನ್-ಒನ್ ಒನ್ ಡೆಸ್ಕ್‌ಟಾಪ್ ಬೆಳ್ಳಿ ಬಣ್ಣದ ರೂಪಾಂತರದಲ್ಲಿ  ₹1,75,999ರ ಆರಂಭಿಕ ಬೆಲೆಯಲ್ಲಿ ಲಭ್ಯವಿದೆ.

ಈ ನಿಟ್ಟಿನಲ್ಲಿ ಹೈಬ್ರಿಡ್‌ ಕೆಲಸದ ವ್ಯವಸ್ಥೆಗೆ ತಕ್ಕಂತೆ ಈ ಪಿಸಿಗಳನ್ನು ವಿನ್ಯಾಸಗೊಳಿಸಲಾಗಿದೆ ಎಂದು ಎಚ್‌ಪಿ ಇಂಡಿಯಾದ ಪಿಸಿ ವಿಭಾಗದ ಹಿರಿಯ ನಿರ್ದೇಶಕ ವಿಕ್ರಂ ಬೇಡಿ ತಿಳಿಸಿದರು.

ನಿಮಗೆ ಏನು ಅನ್ನಿಸ್ತು?
0 ವೋಟ್