ಒಂದು ನಿಮಿಷದ ಓದು | ಪ್ರಧಾನಿಗೆ ಸೈಬರ್ ಮಂಥನದ ವಿವರ

Cyber Security Image

ಬಹುನಿರೀಕ್ಷಿತ ರಾಷ್ಟ್ರೀಯ ಸೈಬರ್ ಭದ್ರತೆಯ ತಂತ್ರಾಂಶವನ್ನು ಪ್ರಸ್ತುತ, ಪ್ರಧಾನಮಂತ್ರಿ ಕಚೇರಿಗೆ (ಪಿಎಂಒ) ಸಲ್ಲಿಸಿದ ಬಳಿಕ ನರೇಂದ್ರ ಮೋದಿ ಅವರಿಗೆ ಮುಂಬರುವ ನಿಯಂತ್ರಣದ ಕುರಿತು ಮಾಹಿತಿ ನೀಡಲಾಗಿದೆ ಎಂದು ರಾಷ್ಟ್ರೀಯ ಸೈಬರ್ ಭದ್ರತಾ ಸಂಯೋಜಕ ಲೆಫ್ಟಿನೆಂಟ್ ಜನರಲ್ (ನಿವೃತ್ತ) ರಾಜೇಶ್ ಪಂತ್ ಜುಲೈ 1ರಂದು ತಿಳಿಸಿದ್ದಾರೆ.

ಮೈಕ್ರೋಸಾಫ್ಟ್ ಮತ್ತು ಇಂಡಿಯನ್ ಫ್ಯೂಚರ್ ಫೌಂಡೇಶನ್ ಆಯೋಜಿಸಿದ "ಸೈಬರ್ ಮಂಥನದಲ್ಲಿ ಆರಂಭಿಕ ಬೆದರಿಕೆಗಳ ಕುರಿತು ಭಾರತದ ಸೈಬರ್‌ನ್ನು ಸುರಕ್ಷಿತಗೊಳಿಸುವ ಸಮಾಲೋಚನೆ ನಡೆಸಲಾಗಿದೆ. ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಈಗಾಗಲೇ ಪ್ರಧಾನಿಯವರ ಕಚೇರಿಗೆ ಸಲ್ಲಿಸಲಾಗಿದೆ ಎಂದು ಪಂತ್ ಹೇಳಿದರು. 

ನಾವು ಆಗಸ್ಟ್ 3ರಂದು ಮಾಲ್ವೇರ್ ರೆಪೊಸಿಟರಿಯನ್ನು ಪ್ರಾರಂಭಿಸಲು ಯೋಚಿಸುತ್ತಿದ್ದೇವೆ ಮತ್ತು ನಮ್ಮ ಕಚೇರಿಯಲ್ಲಿ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ರಾಷ್ಟ್ರೀಯ ಮಾಲ್ವೇರ್ ರೆಪೊಸಿಟರಿಯು 90 ಮಿಲಿಯನ್ ಮಾಲ್ವೇರ್ ಮಾದರಿಗಳನ್ನು ಹೊಂದಿದೆ ಎಂದು ಮಾಹಿತಿ ನೀಡಿದರು.

“ಆದ್ದರಿಂದ ನಾವು ಮಾನವ ಸಂಪನ್ಮೂಲಗಳ ರಾಷ್ಟ್ರೀಯ ಸೈಬರ್ ರಿಜಿಸ್ಟ್ರಿಯನ್ನು ರಚಿಸಲು ಮುಂದಾಗಿದ್ದೇವೆ. ಇದೇ ರಿಜಿಸ್ಟ್ರಿಯ ಅಡಿಯಲ್ಲಿ ಹಲವು ಉಪಕರಣಗಳು ಈಗಾಗಲೇ ಲಭ್ಯವಿದ್ದು, ಯಾರಾದರೂ ವೃತ್ತಿಪರರು ಸೈಬರ್ ಭದ್ರತೆ ಅಭಿವೃದ್ಧಿಪಡಿಸಲು ಬಯಸಿದರೆ ಪೋರ್ಟಲ್‌ನಲ್ಲಿ ಇದರ ಮಾಹಿತಿ ಕಾಣಬಹುದು” ಎಂದಿದ್ದಾರೆ. 

ನಿಮಗೆ ಏನು ಅನ್ನಿಸ್ತು?
0 ವೋಟ್