ಒಂದು ನಿಮಿಷದ ಓದು | ವಾಟ್ಸ್ಆ್ಯಪ್‌ ಗ್ರೂಪ್‌ಗೆ ಸೇರಲು ಗುಂಪಿನ ಅಡ್ಮಿನ್‌ ಅನುಮತಿ ಕಡ್ಡಾಯ

Whatsapp Group Image

ಮೆಟಾ ಸಂಸ್ಥೆಯ ವಾಟ್ಸ್ಆ್ಯಪ್‌, ಈಗ ಗ್ರೂಪ್ ಅಡ್ಮಿನ್‌ಗಳಿಗೆ ವಿಶೇಷ ಅಧಿಕಾರವನ್ನು ನೀಡಲು ಮುಂದಾಗಿದೆ. ಇದರಿಂದ ಗ್ರೂಪ್ ಅಡ್ಮಿನ್‌ಗಳು ಬಳಕೆದಾರರನ್ನು ಗ್ರೂಪಿಗೆ ಸೇರದ ಹಾಗೆ ತಡೆಯಬಹುದು. 

ಈ ಫೀಚರ್‌ ಅನ್ನು ʻಅಪ್ರೂ ನ್ಯೂ ಪಾರ್ಟಿಸಿಪೆಂಟ್ʼ ಎಂದು ಹೆಸರಿಡಲಾಗಿದೆ. ಇದರ ಪ್ರಕಾರ ಗ್ರೂಪಿಗೆ ಸೇರುವ ಮೊದಲು ಗ್ರೂಪ್ ಅಡ್ಮಿನ್‌ ಅನುಮತಿಸಬೇಕು. ಇದರಿಂದ ಅನಾವಶ್ಯಕವಾಗಿ ಎಲ್ಲರೂ ಗ್ರೂಪಿಗೆ ಸೇರುವುದಾಗಲೀ ಅಥವಾ ಮಾಹಿತಿಯನ್ನು ಹಂಚಿಕೊಳ್ಳುವುದನ್ನು ತಡೆಯಬಹುದು ಎಂದು ತಿಳಿಸಲಾಗಿದೆ.

ಪ್ರಸ್ತುತ, ಈ ಫೀಚರ್‍‌ ವಾಟ್ಸ್ಆ್ಯಪ್‌ ಬೀಟಾ ಅಪ್ಲಿಕೇಶನ್‌ನಲ್ಲಿ ಮಾತ್ರ ಕಾರ್ಯನಿರ್ವಹಿಸಲಿದೆ ಎಂದು ಸಂಸ್ಥೆ ವರದಿ ಮಾಡಿದೆ. ಈ ಅಂಶವನ್ನು ಸಂಸ್ಥೆಯು ತನ್ನ ಅಧಿಕೃತ ಟ್ವಿಟರ್‍‌ ಖಾತೆಯಲ್ಲಿ ಹಂಚಿಕೊಂಡಿದೆ.   

ಹಳೆಯ ಆವೃತ್ತಿಯ ಫೀಚರ್‍‌ನಲ್ಲಿ  ಗ್ರೂಪ್‌ನಿಂದ ಯಾರಾದರೂ ನಿರ್ಗಮಿಸಿದರೆ ಅದು ಕೇವಲ ಅಡ್ಮಿನ್‌ಗಳಿಗೆ ಮಾತ್ರ ತಿಳಿಯುವ ಹಾಗೆ ರೂಪಿಸಲಾಗಿತ್ತು. ಆದರೆ ಇನ್ನು ಮುಂದೆ ಬರಲಿರುವ ನವೀಕೃತ ಫೀಚರ್‍‌ನಲ್ಲಿ ಅಡ್ಮಿನ್‌ಗಳು ಗ್ರೂಪ್‌ನಲ್ಲಿ ಯಾರು ಇರಬೇಕು ಅಥವಾ ಇರಬಾರದು ಎಂದು ಆಯ್ಕೆ ಮಾಡುವ ವಿಶೇಷ ವೈಶಿಷ್ಟ್ಯವನ್ನು ಸಂಸ್ಥೆ ಅಭಿವೃದ್ಧಿಪಡಿಸಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್