ಒಂದು ನಿಮಿಷದ ಓದು | ವಿಡಿಯೋಗಳನ್ನು ರೀಲ್ಸ್‌ ಆಗಿ ಪರಿವರ್ತಿಸಲು ಇನ್‌ಸ್ಟಾಗ್ರಾಮ್‌ ಮುಂದಾಗಿದೆ

Instagram Reels Image

ಇನ್‌ಸ್ಟಾಗ್ರಾಮ್‌ ಕಳೆದ ಒಂದು ತಿಂಗಳಿಂದ ಹಲವು ಬದಲಾವಣೆಗಳನ್ನು ಮಾಡುವ ಮೂಲಕ ಸುದ್ದಿಯಲ್ಲಿದೆ. ಇದೀಗ ತನ್ನ ವೇದಿಕೆಯಲ್ಲಿ 'ಅಪ್‌ಲೋಡ್‌' ಮಾಡಲಾಗುವ ವಿಡಿಯೋಗಳನ್ನು ರೀಲ್ಸ್‌ಗಳಾಗಿ ಪರಿವರ್ತಿಸಲು ಅವಕಾಶ ಕಲ್ಪಿಸಲು ಮುಂದಾಗಿದೆ. 

"ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳುವ ವಿಡಿಯೋಗಳತ್ತ ನೆಟ್ಟಿಗರನ್ನು ಸೆಳೆಯುವ ಮತ್ತು ವಿಡಿಯೋಗಳನ್ನು ಮಾರ್ಪಡಿಸಿ ಸರಳಗೊಳಿಸುವ ಪ್ರಯತ್ನದ ಭಾಗವಾಗಿ ಈ ಬದಲಾವಣೆಯನ್ನು ಪರೀಕ್ಷಿಸುತ್ತಿದ್ದೇವೆ. ಇದರಿಂದಾಗಿ, ಪ್ರಸ್ತುತವಿರುವ ಇನ್‌ಸ್ಟಾಗ್ರಾಮ್‌ನಲ್ಲಿನ ವಿಡಿಯೋಗಳ ಮೇಲೆ ಯಾವ ರೀತಿಯ ಪರಣಾಮ ಬೀರಬಹುದೆಂಬುದು ಇನ್ನು ಸ್ಪಷ್ಟವಾಗಿಲ್ಲ" ಎಂದು ಮೆಟಾ ಸಂಸ್ಥೆಯ ವಕ್ತಾರರು ತಿಳಿಸಿದ್ದಾರೆ. 

"ಇನ್‌ಸ್ಟಾಗ್ರಾಮ್ ಈಗ ಪ್ರತಿ ವಿಡಿಯೋವನ್ನು ರೀಲ್ಸ್‌ ಮಾಡುತ್ತಿದೆ. ಪ್ರಯೋಗದ ಮೂಲಕ ವಿಡಿಯೋ ಪೋಸ್ಟ್‌ಗಳ ಎಂಗೇಜ್‌ಮೆಂಟ್ ಹೆಚ್ಚಿಸಲು ಇನ್‌ಸ್ಟಾಗ್ರಾಮ್‌ ಚಿಂತನೆ ಮಾಡಿದೆ. ಮುಂದಿನ ದಿನಗಳಲ್ಲಿ ಬಳಕೆದಾರರು ಸಂಗೀತವನ್ನು ಸೇರಿಸಬಹುದು ಮತ್ತು ವಿಡಿಯೋಗಳನ್ನು ಹೊಸ ರೀಲ್ಸ್‌ಗಳಾಗಿ ರೀಮಿಕ್ಸ್ ಮಾಡಬಹುದು" ಎಂದು ಛಾಯಚಿತ್ರದ ಮೂಲಕ ಸಾಮಾಜಿಕ ಮಾಧ್ಯಮ ವಿಶ್ಲೇಷಕ ಮ್ಯಾಟ್ ನವರಾ ತಮ್ಮ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. 

"ಕಂಪನಿಯು ತನ್ನ  'ಕ್ಯೂ1 2022'ರಲ್ಲಿ ಬಿಡುಗಡೆ ಮಾಡಿದ ವರದಿಯ ಪ್ರಕಾರ, ಜನರು ಇನ್‌ಸ್ಟಾಗ್ರಾಮ್‌ನಲ್ಲಿ ಕಳೆಯುವ ಒಟ್ಟು ಸಮಯದಲ್ಲಿ 20%ಕ್ಕಿಂತ ಹೆಚ್ಚಿನ ಸಮಯ ರೀಲ್ಸ್‌ನಲ್ಲಿ ತೊಡಗಿಸಿಕೊಂಡಿದ್ದಾರೆ. ರೀಲ್ಸ್‌ನಿಂದ ಹೆಚ್ಚು ಬಳಕೆದಾರರನ್ನು ಸಂಸ್ಥೆ ಹೊಂದಿದೆ. ಆದರಿಂದ ಇನ್‌ಸ್ಟಾಗ್ರಾಮ್‌ ಇನ್ನು ಮುಂದೆ ಫೋಟೋ ಹಂಚಿಕೆ ಅಪ್ಲಿಕೇಶನ್ ಮಾತ್ರವಲ್ಲದೆ, ವೀಡಿಯೊಗಳ ಮೇಲೆ ಕೂಡ ಗಮನ ಹೆಚ್ಚಿಸುತ್ತಿದೆ" ಎಂದು ಇನ್‌ಸ್ಟಾಗ್ರಾಮ್‌ ಸಂಸ್ಥೆಯ ಸಿಇಒ ಆಡಮ್ ಮೊಸ್ಸೆರಿ ಹೇಳಿದರು.

ನಿಮಗೆ ಏನು ಅನ್ನಿಸ್ತು?
1 ವೋಟ್