ಒಂದು ನಿಮಿಷದ ಓದು | ವಿಶ್ವಾದ್ಯಾಂತ 500ಕ್ಕೂ ಅಧಿಕ ವೆಬ್‌ಸೈಟ್‌ಗಳು ಸ್ಥಗಿತ

Website Server Image

ಕ್ಲೌಡ್‌ಫ್ಲೇರ್‌ನ ವಿಷಯ ವಿತರಣಾ ಜಾಲದಲ್ಲಿ (ಸಿಡಿಎನ್) ಸಣ್ಣ ಸಮಸ್ಯೆಯೊಂದು ದೃಡಪಟ್ಟಿದೆದ್ದು, ಅದನ್ನು ಸರಿಪಡಿಸಲು ಕ್ರಮ ಕೈಗೊಳ್ಳಲಿದ್ದೇವೆ ಎಂದು ಬಳಕೆದಾರರಿಗೆ ಟ್ವಿಟರ್ ಮೂಲಕ ಕ್ಲೌಡ್‌ಫ್ಲೇರ್‌ ಸಂಸ್ಥೆ ಕ್ಷಮೆಯಾಚಿಸಿದೆ.

ಜಾಗತಿಕ ನಿಲುಗಡೆಯಿಂದಾಗಿ ಜಗತ್ತಿನಾದ್ಯಂತ ಜನಪ್ರಿಯ ವೆಬ್‌ಸೈಟ್‌ಗಳ ಪಟ್ಟಿಯ ಮೇಲೆ ಪರಿಣಾಮ ಬೀರಿದೆ. ಪೀಡಿತ ವೆಬ್‌ಸೈಟ್‌ಗಳಲ್ಲಿ ಮೈನ್ಕ್ರಾಫ್ಟ್, ಕ್ಯಾನ್ವಾ ಮತ್ತು ಡಿಸ್ಕಾರ್ಡ್‌ ಸೇರಿವೆ. ಹಲವು ಬಳಕೆದಾರರ ಪ್ರಕಾರ, ಓಕ್ಲಾಸ್‌ ಡೌನ್‌ಡಿಟೆಕ್ಟರ್‌ನಲ್ಲಿ ಸ್ಥಗಿತ ಪತ್ತೆಹಚ್ಚಲು ಸಾಧ್ಯವಾಗುವುತ್ತಿಲ್ಲ, ಇದು ವಿಶ್ವಾದ್ಯಂತ ಇಂಟರ್ನೆಟ್ ಸರ್ವರ್‌ನ ಸಮಸ್ಯೆಯಾಗಿದೆ. ಜಾಗತಿಕ ಇಂಟರ್ನೆಟ್ ನಿಲುಗಡೆಗೆ ನಿಖರ ಕಾರಣವನ್ನು ಇನ್ನೂ ಬಹಿರಂಗಪಡಿಸಿಲ್ಲ. ಆದರೂ, ವಿಷಯ ವಿತರಣಾ ಜಾಲದಲ್ಲಿ (ಸಿಡಿಎನ್) ಕ್ಲೌಡ್‌ಫ್ಲೇರ್‌ನ ಕೆಲವು ಸಮಸ್ಯೆಗಳಿಂದಾಗಿ ಇದು ಕಂಡುಬಂದಿದೆ.

"ವ್ಯಾಪಕ- ಹರಡುವ ಸಮಸ್ಯೆಗಳು ಸಿಡಿಎನ್ ಸೇವೆಯ ಮೇಲೆ ಪರಿಣಾಮ ಬೀರಿದೆ. ಹಾಗಾಗಿ ವೆಬ್‌ಸೈಟ್‌ ಸರ್ವರ್‌ನಲ್ಲಿ ಆಗುತ್ತಿರುವ ಸಮಸ್ಯೆಗಳನ್ನು ಒಪ್ಪಿಕೊಂಡಿದ್ದೇವೆ ಮತ್ತು ಸಮಸ್ಯೆಗಳನ್ನು ಸರಿಪಡಿಸಲು ಕಾರ್ಯಾಚರಣೆ ನಡೆಸುತ್ತಿದ್ದೇವೆ" ಎಂದು ಇತ್ತೀಚೆಗೆ ಮಾಡಿದ ಟ್ವೀಟ್‌ನಲ್ಲಿ ಕ್ಲೌಡ್‌ಫ್ಲೇರ್‌ ಸಂಸ್ಥೆ ತಿಳಿಸಿದೆ.

ನಿಮಗೆ ಏನು ಅನ್ನಿಸ್ತು?
1 ವೋಟ್