ಒಂದು ನಿಮಿಷದ ಓದು | ಜನವರಿ 2023ರೊಳಗೆ ಅಂತ್ಯಗೊಳ್ಳಲಿದೆ ಮೈಕ್ರೋಸಾಫ್ಟ್ ವಿಂಡೋಸ್ 8.1

windows 8
  • ಹಳೆಯ ಆವೃತ್ತಿ ಬಳಸಿದಲ್ಲಿ ಮೈಕ್ರೋಸಾಫ್ಟ್ ಯಾವುದೇ ಭದ್ರತೆ ನೀಡುವುದಿಲ್ಲ
  • ಹೊಸ ಆವೃತ್ತಿಗೆ ನವೀಕರಿಸಿದಲ್ಲಿ ಇತರ ಗುಣಮಟ್ಟದ ವೈಶಿಷ್ಟ್ಯ ಗಳು ಸಿಗಲಿವೆ

ವಿಂಡೋಸ್ 8.1 ಆವೃತ್ತಿ ಶೀಘ್ರದಲ್ಲೇ ಕೊನೆಯಾಗಲಿದೆ ಎಂದು ಮೈಕ್ರೋಸಾಫ್ಟ್ ಸಂಸ್ಥೆ ಘೋಷಿಸಿದೆ. ಮುಂದಿನ ತಿಂಗಳಿಂದ ಮೈಕ್ರೋಸಾಫ್ಟ್ ಬಳಕೆದಾರರ, ವಿಂಡೋಸ್ ಹಳೆಯ ಆವೃತ್ತಿಯನ್ನು ನಿರ್ಬಂದಿಸುವ ಯೋಚನೆ ಮಾಡಲಿದ್ದೇವೆ ಎಂದು ಸಂಸ್ಥೆ ತಿಳಿಸಿದೆ. 

ಈಗಾಗಲೇ 2016ರಲ್ಲಿ ವಿಂಡೋಸ್ 8ನ್ನು ನಿಲ್ಲಿಸಿದ ಸಂಸ್ಥೆ ಈಗ 2023ರೊಳಗೆ ವಿಂಡೋಸ್ 8.1 ಆವೃತ್ತಿಯನ್ನು ಅಂತ್ಯ ಮಾಡಲು ತೀರ್ಮಾನಿಸಿದೆ.

ಮುಂದಿನ ದಿನಗಳಲ್ಲಿ ಹಳೆಯ ಆವೃತ್ತಿಗಳು ಕಾರ್ಯನಿರ್ವಹಿಸುವುದಿಲ್ಲ. ಜೊತೆಗೆ ಮೈಕ್ರೋಸಾಫ್ಟ್ ಹೊಂದಿರುವ 365 ಅಪ್ಲಿಕೇಶನ್‌ಗಳು ಕೂಡ ವಿಂಡೋಸ್ ಹಳೆಯ ಆವೃತ್ತಿಗೆ ಬೆಂಬಲಿಸುವುದಿಲ್ಲ. ಆದ್ದರಿಂದ ಎಲ್ಲ ಬಳಕೆದಾರರು ವಿಂಡೋಸ್ 10ಕ್ಕೇ ನವೀಕರಿಸಬೇಕು, ಇದರಿಂದ ಕಾರ್ಯಕ್ಷಮತೆ ಮತ್ತು ಹಲವು ರೀತಿಯ ಸಮಸ್ಯೆಗಳನ್ನು ತಪ್ಪಿಸಬಹುದು ಎಂದು ಮೈಕ್ರೋಸಾಫ್ಟ್ ಸಂಸ್ಥೆ ಟ್ವೀಟ್‌ ಮಾಡಿದೆ.

ಹಾಗಿದ್ದರೂ, ಬಳಕೆದಾರರು ಹಳೆಯ ಆವೃತ್ತಿಯನ್ನು ಬಳಸಿದಲ್ಲಿ ಮೈಕ್ರೋಸಾಫ್ಟ್ ಸಂಸ್ಥೆ ಯಾವುದೇ ಭದ್ರತೆ ನೀಡುವುದಿಲ್ಲ ಎಂದಿದೆ. ಅಷ್ಟೇ ಅಲ್ಲದೆ 2023 ಬಳಿಕ ಮೈಕ್ರೋಸಾಫ್ಟ್ 365 ಅಪ್ಲಿಕೇಶನ್‌ಗಳು ಕೂಡ ಹಳೆ ಆವೃತ್ತಿಗೆ ಬಳಕೆಯಲ್ಲಿ ಇರುವುದಿಲ್ಲ ಹಾಗೂ ಹೊಸ ಆವೃತ್ತಿಗೆ ನವೀಕರಿಸಿದಲ್ಲಿ ನೀವು ಇನ್ನೂ ಹೆಚ್ಚು ಭದ್ರತಾ ಮತ್ತು ಇತರ ಗುಣಮಟ್ಟದ ವೈಶಿಷ್ಟ್ಯಗಳನ್ನು ಒಳಗೊಂಡಿರುತ್ತೀರಿ ಎಂದು ಮೈಕ್ರೋಸಾಫ್ಟ್ ಕಂಪನಿ ತಿಳಿಸಿದೆ.  

ನಿಮಗೆ ಏನು ಅನ್ನಿಸ್ತು?
1 ವೋಟ್