ಒಂದು ನಿಮಿಷದ ಓದು | ಜಿಮೇಲ್‌ನ ನೂತನ ವೈಶಿಷ್ಟ್ಯ ಈಗ ಬಳಕೆದಾರರಿಗೆ ಲಭ್ಯ

Google chat
  • ಗೂಗಲ್‌ನ ನೂತನ ವೈಶಿಷ್ಟ್ಯ ನವೀಕರಣ
  • ಗೂಗಲ್ ಮೀಟ್, ಚಾಟ್‌ನಲ್ಲಿ ಬದಲಾವಣೆ

ಗೂಗಲ್‌ನ ನೂತನ ವೈಶಿಷ್ಟ್ಯವನ್ನು ನವೀಕರಿಸಿಲಾಗಿದ್ದು, ಬಳಕೆದಾರರಿಗೆ ಲಭ್ಯವಿರಲಿದೆ ಎಂದು ಸಂಸ್ಥೆ ತಿಳಿಸಿದೆ. ಗೂಗಲ್ ಫೆಬ್ರವರಿಯಲ್ಲಿ ಜಿಮೇಲ್‌ಗಾಗಿ ನವೀಕರಿಸಿದ ಬಳಕೆದಾರ ಇಂಟರ್‌ಫೇಸ್‌ನ್ನು ಹೊರತರಲು ಪ್ರಾರಂಭಿಸಿದೆ.

ಗೂಗಲ್ ಮೀಟ್, ಚಾಟ್‌ನಲ್ಲಿ ಹೊಸ ನವೀಕರಣ ತರಲಾಗಿದೆ. ಶೀಘ್ರದಲ್ಲಿ ಬಳಕೆದಾರರು ತಮ್ಮ ಡೀಫಾಲ್ಟ್ ಖಾತೆಯಲ್ಲಿ ವೀಕ್ಷಿಸಬಹುದು ಎಂದು ತಿಳಿಸಲಾಗಿದೆ. ದೊಡ್ಡ ಪ್ರಮಾಣದ ಬದಲಾವಣೆ ಏನೂ ಆಗಿಲ್ಲ, ಆದರೂ ಕೆಲವು ಸಣ್ಣ ಬದಲಾವಣೆಗಳಾದ ಗೂಗಲ್ ಶೀಟ್ಸ್, ಬಗ್ ಫಿಕ್ಸ್ ಹಾಗೂ ಕಾಲಿಂಗ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಮಾಡಲಾಗಿದೆ ಎಂದು ಗೂಗಲ್ ಹೇಳಿದೆ. 

ಬದಲಾಗಲಿರುವ ವೈಶಿಷ್ಟ್ಯಗಳು ಯಾವವು?

ಯೂಐ ಮೇಲ್, ಗೂಗಲ್ ಮೀಟ್, ಸ್ಪೇಸ್‌ಗಳು ಹಾಗೂ ಚಾಟ್‌ಗಾಗಿ ಬಟನ್‌ಗಳನ್ನು ಸಂಗ್ರಹಿಸುವ ಬದಲಿಗೆ ಪಟ್ಟಿಯಲ್ಲಿರುವ ಪ್ರತಿಯೊಂದರಿಂದ ಹಲವಾರು ಸಂಭಾಷಣೆಗಳನ್ನು ತೋರಿಸಲಿದೆ. ಎಡ ಮೇಲ್ಭಾಗದಲ್ಲಿ ಒಂದು ಪಟ್ಟಿಗೆ ಸೇರಿಸಲಾಗಿದೆ ಮತ್ತು ಎಲ್ಲವನ್ನೂ ಒಂದೇ ಬಾರಿಗೆ ತೆರೆಯದೆ ಅವುಗಳನ್ನು ಇನ್ನೂ ಸುಲಭವಾಗಿ ಪ್ರವೇಶಿಸಲು ಅನುಮತಿಸಿದೆ. ಐಕಾನ್ ಮೇಲೆ ಕ್ಲಿಕ್‌ ಮಾಡುವ ಮೂಲಕ ಬಳಕೆದಾರರು ಯಾವುದೇ ವಿಭಾಗಕ್ಕೆ ಕೂಡ ಭೇಟಿ ನೀಡಬಹುದು.

ಈ ಸುದ್ದಿ ಓದಿದ್ದೀರಾ? ನವೆಂಬರ್‌ನಲ್ಲಿ ಹ್ಯಾಂಗ್ಔಟ್ಸ್ ಅಪ್ಲಿಕೇಶನ್ ಸ್ಥಗಿತಗೊಳಿಸಲು ಗೂಗಲ್ ಚಿಂತನೆ

ಗೂಗಲ್‌ ಚಾಟ್‌ ಅಪ್ಲಿಕೇಶನ್‌ನಲ್ಲಿ ಬಳಕೆದಾರರು ಯಾವುದೇ ಐಕಾನ್‌ಗಳನ್ನು ಪ್ರವೇಶಿಸಬೇಕಿದ್ದಲ್ಲಿ ಕ್ವಿಕ್‌ ಸೆಟ್ಟಿಂಗ್ಸ್‌ಗೆ ಹೋಗುವ ಮೂಲಕ ನೂತನ ವೈಶಿಷ್ಟ್ಯವನ್ನು ಅನುಭವಿಸಬಹುದಾಗಿದೆ. ಈ ಎಲ್ಲ ವೈಶಿಷ್ಟ್ಯವು ಹ್ಯಾಂಗ್‌ಔಟ್ಸ್‌ನಿಂದ ಬದಲಾಯಿಸಿದವರಿಗೆ ಮಾತ್ರ ಲಭ್ಯವಿರಲ್ಲಿದೆ ಎಂದು ಗೂಗಲ್‌ ಸಂಸ್ಥೆ ವರದಿ ಮಾಡಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್