ಒಂದು ನಿಮಿಷದ ಓದು | ಅತೀ ಕಡಿಮೆ ದರದಲ್ಲಿ ಒಪ್ಪೋ ಸ್ಮಾರ್ಟ್‌ ಟಿವಿ ಬಿಡುಗಡೆ?

Oppo Smarttv Image

ವಿಶ್ವದ ದೊಡ್ಡ ಟೆಕ್ ಕಂಪನಿಗಳಲ್ಲಿ ಒಂದಾದ ಒಪ್ಪೋ ಸಂಸ್ಥೆ, ಈ ಹಿಂದೆ ಸ್ಮಾರ್ಟ್‌ಫೋನ್‌ಗಳನ್ನು ತಯಾರು ಮಾಡುತ್ತಿದ್ದು, ಇದೀಗ ನೂತನ ಸ್ಮಾರ್ಟ್‌ಟಿವಿಯನ್ನು ಅತೀ ಕಡಿಮೆ ವೆಚ್ಚದಲ್ಲಿ ಪರಿಚಯಿಸಲು ಮುಂದಾಗಿದೆ. 

ಒಪ್ಪೋ ಕೆ9ಎಕ್ಸ್ ಸಿರೀಸ್ ಸರಣಿಯಲ್ಲಿ ಈ ಸ್ಮಾರ್ಟ್‌ಟಿವಿ ಅತ್ಯುತ್ತಮ, ಇದು 50 ಇಂಚಿನ ಪರದೆಯನ್ನು ಹೊಂದಿದೆ. ಈ ಸಾಧನವು 4ಕೆ ರೆಸಲ್ಯೂಶನ್ ಜತೆಗೆ 60 ಎಚ್ ರಿಫ್ರೆಶ್ ರೇಟ್ ಕ್ವಾಡ್ ಕೋರ್ ಮೀಡಿಯಾ ಚಿಪ್‌ಸೆಟ್‌ ಹೊತ್ತು ಬಂದಿದೆ.

ಈ ಸುದ್ದಿ ಓದಿದ್ದೀರಾ? ಚೀನಿ ಸರಕಿಗೆ ಸಂಕಷ್ಟ| ಚೀನಾ ಸ್ಮಾರ್ಟ್‌ಫೋನ್‌ಗಳಿಗೆ ಜರ್ಮನಿಯಲ್ಲೂ ನಿಷೇಧ 

ಒಪ್ಪೋ ಕೆ9ಎಕ್ಸ್ ಸ್ಮಾರ್ಟ್‌ಟಿವಿಯ ವಿಶೇಷತೆಗಳು

ಒಪ್ಪೋ ಕೆ9ಎಕ್ಸ್ 50 ಸ್ಮಾರ್ಟ್‌ಟಿವಿ ಕನೆಕ್ಟಿವಿಟಿ ಆಯ್ಕೆಗಳಲ್ಲಿ, 3 ಎಚ್‌ಡಿಎಮ್ಐ ಪೋರ್ಟ್‌ಗಳು, ಎಟರ್‌ನೆಟ್‌ ಪೋರ್ಟ್, ವೈರ್ಲೆಸ್ ಸಂಪರ್ಕಕ್ಕಾಗಿ ಡ್ಯುಯಲ್-ಬ್ಯಾಂಡ್ ವೈ-ಫೈ, ವಾಯ್ಸ್ ಅಸಿಸ್ಟೆಂಟ್ ನಂತಹ ವೈಶಿಷ್ಟ್ಯಗಳಿವೆ. ಅಷ್ಟೇ ಅಲ್ಲದೇ, ಈ ಸ್ಮಾರ್ಟ್‌ಟಿವಿ 20 ವ್ಯಾಟ್ ಸಾಮರ್ಥ್ಯದ ಎರಡು ಇಂಟಿಗ್ರೇಟೆಡ್ ಸ್ಪೀಕರ್‌ಗಳನ್ನು ಹೊಂದಿದ್ದು, ಇದು ಡಿಸ್‌ಪ್ಲೆ ವ್ಯಾಲ್ಯೂಮ್ ಧ್ವನಿಯಾಗಿರುವ ಡಾಲ್ಬಿ ಸೌಂಡ್ ಅನ್ನು ಸಹ ಬೆಂಬಲಿಸುತ್ತದೆ.

ಭಾರತದಲ್ಲಿ ಈ ಸ್ಮಾರ್ಟ್‌ಟಿವಿ ಶೀಘ್ರದಲ್ಲಿ ಬಿಡುಗಡೆಯಾಗಲಿದೆ. ಒಪ್ಪೋ ಸಂಸ್ಥೆಯಿಂದ ಇದಕ್ಕೆ ಸಂಬಂಧಿಸಿದಂತೆ ಯಾವುದೇ ಅಧಿಕೃತ ಮಾಹಿತಿ ಒದಗಿಸಿಲ್ಲ. ಇದರ ಬೆಲೆ ಮಾರುಕಟ್ಟೆಯಲ್ಲಿ ಸುಮಾರು ರೂ ₹16,000 ಇರಬಹುದು ಎಂದು ಅಂದಾಜಿಸಲಾಗಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್