ಒಂದು ನಿಮಿಷದ ಓದು | 'ಮುಂದಿನ ಐದು ವರ್ಷದಲ್ಲಿ ಪೆಟ್ರೋಲ್ ಮುಕ್ತ ಭಾರತ'

Nithin Gadkari Image

ಮುಂದಿನ ಐದು ವರ್ಷಗಳಲ್ಲಿ  ಭಾರತ ಪೆಟ್ರೋಲ್‌ ಮುಕ್ತವಾಗಲಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಹೇಳಿದರು. 

ಮಹಾರಾಷ್ಟ್ರದ ಅಕೋಲಾದಲ್ಲಿ ನಡೆದ ಡಾ.ಪಂಜಾಬರಾವ್ ದೇಶಮುಖ ಕೃಷಿ ವಿದ್ಯಾಪೀಠದಲ್ಲಿ ಗೌರವ ಡಾಕ್ಟರ್ ಆಫ್ ಸೈನ್ಸ್ ಪದವಿ ಪ್ರದಾನ ಮಾಡಿದ ಬಳಿಕ ಅವರು ಮಾತನಾಡಿದರು.  

ʻಮುಂದಿನ ದಿನಗಳಲ್ಲಿ ಹಸಿರು ಹೈಡ್ರೋಜನ್, ಎಥೆನಾಲ್ ಮತ್ತು ಇತರ ಹಸಿರು ಇಂಧನಗಳ ಬಳಕೆಯನ್ನು ಹೆಚ್ಚಿಸುವದರಿಂದ ಪೆಟ್ರೋಲ್ ಮತ್ತು ಡಿಸೇಲ್‌ಗಳ ಬಳಿಕೆ ಸಂಪೂರ್ಣ ಕಡಿಮೆ ಮಾಡಬಹುದುʼ ಎಂದು ಸಚಿವ ಗಡ್ಕರಿ ಹೇಳಿದರು.

ಈ ಸುದ್ದಿ ಓದಿದ್ದೀರಾ ? ವಾರದ ಟೆಕ್ ನೋಟ | ʻಸ್ಟಾರ್ಟ್ಅಪ್ ಸ್ಕೂಲ್ʼ ಆರಂಭಕ್ಕೆ ಮುಂದಾದ ಗೂಗಲ್ ಸಂಸ್ಥೆ

ಹಸಿರು ಇಂಧನ ಮತ್ತು ಎಲ್‌ಪಿಜಿ ಬಳಸುವುದರಿಂದ ಕೃಷಿ ವಲಯದಲ್ಲಿ ಕೂಡ  ಶೇಕಡ 10 ರಿಂದ 12ರಷ್ಟು ಏರಿಕೆಯನ್ನು ಮುಂದಿನ ಐದು ವರ್ಷದಲ್ಲಿ ಕಾಣಬಹುದಾಗಿದೆ.  ಭಾರತದಲ್ಲಿ ಈಗಾಗಲೇ ಹಲವು ನೈಸರ್ಗಿಕ ಬದಲಾವಣೆಗಳನ್ನು ನೋಡುತ್ತಿದೇವೆ ಮತ್ತು ವಾಹನದ ವಲಯದಲ್ಲಿ ಕೂಡ ನೂತನ ತಂತ್ರಜ್ಞಾನಗಳು ಕಾರ್ಯರೂಪಕ್ಕೆ ಬಂದಿದ್ದು ಬಳಕೆಯಲ್ಲಿ ಕೂಡ ಅಳವಡಿಸಲಾಗಿದೆ. ಇದನ್ನು ಇನ್ನೂ ಹೆಚ್ಚಿಸಬೇಕಿದೆ ಎಂದರು. 

ನಿಮಗೆ ಏನು ಅನ್ನಿಸ್ತು?
1 ವೋಟ್