ಒಂದು ನಿಮಿಷದ ಓದು | ಮೆಟ್ರೋ ದರಕ್ಕಿಂತ ಅತೀ ಕಡಿಮೆ ವೆಚ್ಚದಲ್ಲಿ ತಯಾರಾಗ್ತಿದೆ ಸೌರ ವಿದ್ಯುತ್ ರೈಲ್‌ಬಸ್‌

Railbus Image

ದುಬೈ ಮೂಲದ ರೈಲ್‌ಬಸ್‌ ಒಂದು ಪ್ರಾರಂಭಿಕ ಕಂಪನಿಯಾಗಿದ್ದು, ಅತ್ಯಾಧುನಿಕ, ಹಸಿರು ಮತ್ತು ಕಡಿಮೆ- ವೆಚ್ಚದ ಸಮೂಹ ಸಾರಿಗೆ ವ್ಯವಸ್ಥೆಯನ್ನು ರಚಿಸುತ್ತಿದೆ. ಇದೊಂದು ಮಹತ್ವಾಕಾಂಕ್ಷೆಯ ದಾರ್ಶನಿಕ ವಾಣಿಜ್ಯೋದ್ಯಮವಾಗಿದ್ದು, ಕೈಗಾರಿಕಾ ವಿನ್ಯಾಸಕರು ಮತ್ತು ಸಾರಿಗೆ ತಜ್ಞರ ತಂಡವೊಂದು ಇದನ್ನು ಅಭಿವೃದ್ಧಿಪಡಿಸುತ್ತಿದೆ.

ರೈಲ್‌ಬಸ್‌ ವೈಶಿಷ್ಟ್ಯಗಳು 

  • ಸಣ್ಣ ಗಾತ್ರದ ವಾಹನ, ಹೊರತಾಗಿಯೂ ಹೆಚ್ಚಿನ ಸಾರಿಗೆ ಸಾಮರ್ಥ್ಯ ನೀಡುತ್ತದೆ.
  • ಅಲ್ಟ್ರಾ ಮತ್ತು ಅತೀ ಕಡಿಮೆ ತೂಕದ ಜೊತೆಗೆ ಕಾರ್ಯಾಚರಣೆಯಲ್ಲಿ ಹೆಚ್ಚು ಸಾಮರ್ಥ್ಯ ಹೊಂದಿದೆ. 
  • ಪ್ರಸ್ತುತವಿರುವ ಮೆಟ್ರೋ ದರಕ್ಕಿಂತ ಇಪ್ಪತ್ತು ಪ್ರತಿಶತ ಕಡಿಮೆ ದರದಲ್ಲಿ ಈ ರೈಲ್‌ಬಸ್‌ನ್ನು ಅಭಿವೃದ್ಧಿಪಡಿಸಬಹುದು ಎಂದು ಸಂಸ್ಥೆ ತಿಳಿಸಿದೆ.
  • ಸೌರಶಕ್ತಿ ಚಾಲಿತ ಹಸಿರು ಸಾರಿಗೆ ವ್ಯವಸ್ಥೆಯಾಗಿ ರೈಲ್‌ಬಸ್‌ ಅನೇಕ ಜನಸಂಖ್ಯೆಯ ನಗರಗಳಲ್ಲಿ ಲಕ್ಷಾಂತರ ಜನರಿಗೆ ಸಾರಿಗೆ ವೈವಸ್ಥೆ ನೀಡಲಿದೆ ಮತ್ತು ಪರಿಸರವನ್ನು ಸುಧಾರಿಸುತ್ತದೆ ಹಾಗೂ ವಾಯುಮಾಲಿನ್ಯವನ್ನು ಕಡಿಮೆ ಮಾಡುವಲ್ಲಿ ಇದರ ಕೊಡುಗೆಯು ಪ್ರಶಂಸನಾರ್ಹ ಎಂದು ಸಂಸ್ಥೆ ಹೇಳಿಕೊಂಡಿದೆ. 
ನಿಮಗೆ ಏನು ಅನ್ನಿಸ್ತು?
0 ವೋಟ್