ಒಂದು ನಿಮಿಷದ ಓದು | ಲಿಂಕ್ ಹಂಚಲು ಟ್ವೀಟ್ ನೋಟ್ಸ್ ಪರಿಚಯಿಸಿದ ಟ್ವಿಟರ್ ಸಂಸ್ಥೆ 

Twitter Notes Image
  • ಬರವಣಿಗೆಗಳು ಮತ್ತು ಲಿಂಕ್‌ ಹಚ್ಚಿಕೊಳ್ಳಲು ನೋಟ್ಸ್‌
  • ಟ್ವಿಟರ್ ಪರಿಚಯಿಸಿದ ಹೊಸ ವೈಶಿಷ್ಟ್ಯ ಟ್ವೀಟ್ ನೋಟ್ಸ್

ಟ್ವಿಟರ್ ಸಂಸ್ಥೆ ಬುಧವಾರ ʻನೋಟ್ಸ್ʼ ಎಂಬ ಹೊಸ ವೈಶಿಷ್ಟ್ಯ ಪರಿಚಯಿಸಿದ್ದು, ಇದು ಬಳಕೆದಾರರಿಗೆ ಪ್ರಬಂಧದಂತಹ ಬರವಣಿಗೆಗಳು ಮತ್ತು ಲಿಂಕ್‌ಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲು ಅನುವು ಮಾಡಿಲಿದೆ.

ಕಳೆದ ವರ್ಷ ಟ್ವಿಟರ್ ಸಂಸ್ಥೆ ರೆವ್ಯೂ ಎಂಬ ಸುದ್ದಿಪತ್ರ ಸಂಸ್ಥೆಯನ್ನು ಖರೀದಿಸಿದೆ. ಅದರ ನವೀಕೃತ ರೂಪವೇ ಟ್ವಿಟರ್ ನೋಟ್ಸ್ ಎಂದು ಸಂಸ್ಥೆ ತಿಳಿಸಿದೆ. 

ಐದು ವರ್ಷದ ಹಿಂದೆಯೇ ತಯಾರಾದ ಈ ವೈಶಿಷ್ಟ್ಯ, ಪ್ರಸ್ತುತ ಟ್ವೀಟ್‌ಗಳಲ್ಲಿ 280 ಅಕ್ಷರಗಳ ಮಿತಿಯನ್ನು ಹೊಂದಿದೆ ಮತ್ತು ಎರಡು ಪ್ರತ್ಯೇಕ ಗಿಫ್‌ಗಳಲ್ಲಿ ಈ ವೈಶಿಷ್ಟ್ಯವು ಕಾರ್ಯನಿರ್ವಹಿಸುತ್ತಿದೆ ಎಂದು ಟ್ವಿಟರ್ ಸಂಸ್ಥೆ ಹಂಚಿಕೊಂಡಿದೆ.

ಬಳಕೆದಾರರು ಟಿಪ್ಪಣಿ ರೂಪದಲ್ಲಿ ಬರೆಯಲು ಪ್ರಾರಂಭಿಸಲು, ಮೊದಲಿಗೆ ʻಬರೆಯಿರಿʼ ಎಂಬ ಟ್ಯಾಬ್ ಮೇಲೆ ಕ್ಲಿಕ್ ಮಾಡಿ ನಂತರ ಟಿಪ್ಪಣಿಯನ್ನು ತಮ್ಮ ಟ್ವೀಟ್‌ಗೆ ಎಂಬೆಡ್ ಮಾಡಬಹುದು. 

ಹಲವಾರು ಬರಹಗಾರರು ಈಗಾಗಲೇ ಟ್ವಿಟರ್ ವೇದಿಕೆಯಲ್ಲಿ ತಮ್ಮ ಟಿಪ್ಪಣಿಗಳನ್ನು ಪ್ರಕಟಿಸಿದ್ದಾರೆ, ಇದು ಟ್ವೀಟ್‌ಗಳು, ವೀಡಿಯೊಗಳು ಮತ್ತು ಚಿತ್ರಗಳನ್ನು ಹೊಂದಿರುವ ದೀರ್ಘರೂಪದ ಪೋಸ್ಟ್‌ಗಳಾಗಿ ಗೋಚರಿಸುತ್ತವೆ.  

ನಿಮಗೆ ಏನು ಅನ್ನಿಸ್ತು?
3 ವೋಟ್