ಒಂದು ನಿಮಿಷದ ಓದು | ಆ್ಯಪಲ್‌ಗೆ ಸ್ಯಾಮ್‌ಸಂಗ್‌ ಕೊಟ್ಟ ಟಾಂಗ್ ಏನು?

Samsung and Apple Image

ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಹೆಚ್ಚು ಪೈಪೋಟಿಯಲ್ಲಿ ಮುನ್ನುಗುತ್ತಿರುವ ಆ್ಯಪಲ್ ಮತ್ತು ಸ್ಯಾಮ್‌ಸಂಗ್‌, ಇದೀಗ ಜಾಹೀರಾತು ಮಾಡುವ ಮೂಲಕ ಆ್ಯಪಲ್‌ಗೆ ಟೀಕಿಸಿದೆ. ಆ್ಯಪಲ್, ಹೊಸ ವಿನ್ಯಾಸ ಮತ್ತು ಸಂಶೋಧನೆಗಳನ್ನು ಪ್ರಚಾರಪಡಿಸುತ್ತಿಲ್ಲ ಎಂಬರ್ಥದಲ್ಲಿ ಸ್ಯಾಮ್‌ಸಂಗ್‌ ತನ್ನ ಜಾಹೀರಾತನ್ನು ಪ್ರಸ್ತುತಪಡಿಸಿದೆ.

ಸ್ಯಾಮ್‌ಸಂಗ್‌ ಬಿಡುಗಡೆ ಮಾಡಿರುವ ಗ್ಯಾಲಕ್ಸಿ ಝೆಡ್ ಫ್ಲಿಪ್ 4 ಮತ್ತು ಗ್ಯಾಲಕ್ಸಿ ಎಸ್22 ಅಲ್ಟ್ರಾ ಸ್ಮಾರ್ಟ್‌ಫೋನ್‌ ಜಾಹೀರಾತಿನಲ್ಲಿ 108 ಮೆಗಾಪಿಕ್ಸೆಲ್ ಕ್ಯಾಮೆರಾ ಸೆನ್ಸರ್ ಜತೆಗೆ 120 ಸ್ಪೇಸ್ ಝೂಮ್ ಜಾಹೀರಾತಿನ ಮೂಲಕ ಪ್ರಚಾರ ಮಾಡಿದೆ. 

ಇದರ ಅರ್ಥ ಸಂಶೋಧನೆಯಲ್ಲಿ ಆ್ಯಪಲ್ ಸ್ಯಾಮ್‌ಸಂಗ್‌ಗಿಂತ ಎರಡು ವರ್ಷ ಹಿಂದಿದೆ ಎಂಬ ರೀತಿಯಲ್ಲಿ ಟೀಕೆ ವ್ಯಕ್ತಪಡಿಸಿದೆ. ಅಷ್ಟೇ ಅಲ್ಲದೆ ಸ್ಯಾಮ್‌ಸಂಗ್‌ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ “ನಾವು ಕೂಡ ನೋಡುತ್ತೇವೆ. ನೀವು ಯಾವಾಗ ಹೊಸ ವಿನ್ಯಾಸದ ಪ್ರಚಾರ ಮಾಡುತ್ತೀರಿ” ಎಂದು ಟ್ವೀಟ್ ಮಾಡಿದೆ. 

ಆದರೆ, ಆ್ಯಪಲ್ ಐಫೋನ್‌ಗಳಲ್ಲಿ ಅಷ್ಟೊಂದು ರೆಸಲ್ಯೂಶನ್ ಹೊಂದಿರುವ ಕ್ಯಾಮೆರಾ, ಸೆನ್ಸರ್ ಇರುವುದಿಲ್ಲ. ಝೂಮ್ ಕೂಡ ಇಲ್ಲ ಎನ್ನುವ ಅರ್ಥದಲ್ಲಿ, ಪರೋಕ್ಷವಾಗಿ ಸ್ಯಾಮ್‌ಸಂಗ್‌ ಟೀಕಿಸಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್