ಭಾರತಕ್ಕೆ ಲಗ್ಗೆಯಿಡಲಿದೆ ಒನ್‌ಪ್ಲಸ್‌ ಟಿ10 ಸ್ಮಾರ್ಟ್‌ಫೋನ್‌; ಇದರ ಮೊತ್ತ ಅಂದಾಜು ₹50000

OnePlus 10T
  • ಆಗಸ್ಟ್ 3ರಂದು ಈ ಸ್ಮಾರ್ಟ್‌ಫೋನ್‌ ಬಿಡುಗಡೆಯಾಗಲಿದೆ
  • ಆಸಕ್ತರು ಅಮೆಜಾನ್‌ನಲ್ಲಿ ಒನ್‌ಪ್ಲಸ್‌ ಟಿ10 ಖರೀದಿಸಬಹುದು 

ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಪ್ರಸಿದ್ಧ ಸಂಸ್ಥೆ ಒನ್‌ಪ್ಲಸ್‌, ಆಗಸ್ಟ್ 3ರಂದು ತಮ್ಮ ಸಂಸ್ಥೆಯ ನೂತನ ಸ್ಮಾರ್ಟ್‌ಫೋನ್‌ ಅನಾವರಣ ಮಾಡಲು ಸಂಸ್ಥೆ ಮುಂದಾಗಿದೆ. 

ಈ ಸ್ಮಾರ್ಟ್‌ಫೋನ್‌ ಕಳೆದ ಮೊಬೈಲ್‌ಗಳಿಗಿಂತ ಹೆಚ್ಚು ಫೀಚರ್‌ಗಳನ್ನು ಹೊಂದಿದ್ದು, ಹೆಚ್ಚು ವೇಗವಾಗಿ ಕಾರ್ಯನಿರ್ವಹಿಸಲಿದೆ. ಇದರ ಸಂಪೂರ್ಣ ವಿಡಿಯೋವನ್ನು ಯೂಟ್ಯೂಬ್ ಖಾತೆಯಲ್ಲಿ ಬಿಡುಗಡೆ ಮಾಡಲಿದೆ ಎಂದು ಒನ್‌ಪ್ಲಸ್‌ ಸಂಸ್ಥೆ ವರದಿ ಮಾಡಿದೆ. 

ಎರಡು ವರ್ಷದ ಬಳಿಕ ಒನ್‌ಪ್ಲಸ್‌ ಟಿ ಸೀರಿಸ್ ಅನ್ನು ಹೊರತಂದಿದೆ ಇದರ ಹಿಂದೆ ಟಿ8 ಬಿಡುಗಡೆ ಮಾಡಿತ್ತು, ಆದರೆ ಈಗ ನೇರವಾಗಿ ಟಿ10 ಬಿಡುಗಡೆ ಮಾಡಿದೆ. ಇದೀಗ ಎಲ್ಲರ ಗಮನ ಈ ಸ್ಮಾರ್ಟ್‌ಫೋನ್‌ ಮೇಲಿದೆ. ಈಗಾಗಲೇ ಯೂಟ್ಯೂಬ್‌ನಲ್ಲಿ ಹೊರಬಂದ ಟೀಸರ್‌ನಲ್ಲಿ ಸ್ಮಾರ್ಟ್‌ಫೋನ್‌ನ ಸಣ್ಣ ತುಣುಕನ್ನು ಕಾಣಬಹುದು. ಅದರಲ್ಲಿ ಮೋಬೈಲ್‌ನ ಸಂಪೂರ್ಣ ವಿವರ ನೀಡಲಾಗಿದೆ ಎಂದು ಸಂಸ್ಥೆ ವರದಿ ಮಾಡಿದೆ. 

ಈ ಸ್ಮಾರ್ಟ್‌ಫೋನ್‌ ಬೆಲೆ ಭಾರತದಲ್ಲಿ ₹49,999 ದಿಂದ ಪ್ರಾರಂಭವಾಗಲಿದೆ ಎಂದು ಅಂದಾಜಿಸಲಾಗಿದೆ. ಆಸಕ್ತರು ಅಮೆಜಾನ್‌ನಲ್ಲಿ ಖರೀದಿಸಬಹುದು. 

ವೈಶಿಷ್ಟ್ಯಗಳು

ಪ್ರೊಸೆಸರ್- ಕ್ವಾಲ್ಕಾಮ್ ಸ್ನಾಪ್‌ ಡ್ರಾಗನ್‌ 8+ ಜನರೇಷನ್ 
ಪರದೆ - 6.7 ಇಂಚಿನ ಪೂರ್ಣ ಎಚ್‌ಡಿ, 394 ಪಿಪಿಐ
ಮೆಮೊರಿ - 12 ಜಿಬಿ ರಾಮ್, 256 ಜಿಬಿ ಸಂಗ್ರಹಣೆ
ಬ್ಯಾಟರಿ - 4800 ಎಂಎಎಚ್ 
ಹಿಂಬದಿಯ ಕ್ಯಾಮೆರಾ - 50 ಎಂಪಿ + 16 ಎಂಪಿ + 2 ಎಂಪಿ ಕ್ಯಾಮೆರಾ 
ಮುಂಭಾಗದ ಕ್ಯಾಮೆರಾ – 34 ಎಂಪಿ ಜೊತೆಗೆ ವಿಡಿಯೋ ರೆಕಾರ್ಡಿಂಗ್
ಬೆಲೆ – ₹49,999

ಈ ಸುದ್ದಿ ಓದಿದ್ದೀರಾ? ಗೂಗಲ್ ಮೇಲ್ಸ್‌ಗಳು ಗೊಂದಲಮಯವೆ? ಫಿಲ್ಟರ್ ಮಾಡಲು ಇಲ್ಲಿದೆ ಸುಲಭ ಉಪಾಯ

ನಿಮಗೆ ಏನು ಅನ್ನಿಸ್ತು?
0 ವೋಟ್