ಆರ್‌ಸಿಬಿ ಯೂಟ್ಯೂಬ್ ಖಾತೆಗೆ ಕನ್ನ; ವಿಡಿಯೋಗಳೆಲ್ಲವೂ ಡಿಲೀಟ್

RCB youtube account hacked Image
  • ರಾತ್ರೋರಾತ್ರಿ ಆರ್‌ಸಿಬಿ ಯೂಟ್ಯೂಬ್ ಖಾತೆ ಹ್ಯಾಕ್
  • ʻಮೈಕ್ರೋಸ್ಟ್ರಾಟಜಿʼ ಎಂದು ಮರುನಾಮಕರಣ ಮಾಡಲಾಗಿದೆ

ಕ್ರೀಡಾ ವಲಯದಲ್ಲಿ ಹೆಚ್ಚು ಹಿಂಬಾಲಕರನ್ನು ಪ್ರಪಂಚದಾದ್ಯಂತ ಹೊಂದಿರುವ ಏಕೈಕ್ ಕ್ರೀಡಾ ಯೂಟ್ಯೂಬ್ ಖಾತೆ ಎಂದರೆ ಅದು ಆರ್‌ಸಿಬಿ (ರಾಯಲ್ ಚಾಲೆಂಜ್ಸ್ ಬೆಂಗಳೂರು).

ಇದೀಗ ರಾತ್ರೋರಾತ್ರಿ ಯೂಟ್ಯೂಬ್ ಖಾತೆಯನ್ನು ಹ್ಯಾಕ್ ಮಾಡಲಾಗಿದೆ ಮತ್ತು ಖಾತೆಯಲ್ಲಿರುವ ಹೆಸರು ಸಮೇತ ಎಲ್ಲ ವಿಡಿಯೋಗಳನ್ನು ಅಳಿಸಲಾಗಿದೆ ಹಾಗೂ ಅದನ್ನು ʻಮೈಕ್ರೋಸ್ಟ್ರಾಟಜಿʼ ಎಂದು ಮರುನಾಮಕರಣ ಮಾಡುವ ಮೂಲಕ ಅದರ ರೂಪವನ್ನು ಸಂಪೂರ್ಣವಾಗಿ ಬದಲಾಯಿಸಲಾಗಿದೆ. ಜತೆಗೆ ಕ್ರಿಪ್ಟೋಗೆ ಸಂಬಂಧಿಸಿದಂತೆ ಖಾತೆಯನ್ನು ಬಳಸಿಕೊಳ್ಳಲಾಗಿದೆ ಎಂದು ವರದಿಯಾಗಿದೆ. 

ಈ ಸುದ್ದಿ ಓದಿದ್ದೀರಾ? ಶೀಘ್ರದಲ್ಲಿ ಭಾರತಕ್ಕೆ 5ಜಿ ಆಗಮನ; ಇಲ್ಲಿದೆ ನೀವು ತಿಳಿಯಬೇಕಾದ ಮುಖ್ಯ ಅಂಶಗಳು 

ಇದೇನು ಮೊದಲಲ್ಲ, ಒಂದು ವರ್ಷದ ಹಿಂದೆ  ಆರ್‌ಸಿಬಿಯ ಟ್ವಿಟರ್ ಖಾತೆಯನ್ನೂ ಹ್ಯಾಕ್ ಮಾಡಲಾಗಿತ್ತು. ಅದರ ತಾಂತ್ರಿಕ ದೋಷವನ್ನು ಸರಿಪಡಿಸಲು ಸುಮಾರು ಗಂಟೆಯೇ ಬೇಕಾಗಿತ್ತು, ಸದ್ಯಕ್ಕೆ ಯೂಟ್ಯೂಬ್ ಖಾತೆ ಕುರಿತು ಆರ್‌ಸಿಬಿ ಫ್ರ್ಯಾಂಚೈಸಿ ಯಾವುದೇ ಕ್ರಮಕೈಗೊಂಡಿಲ್ಲ ಎಂಬುದು ಗಮನಹರಿಸಬೇಕಾದ ವಿಷಯ. ಇದಕ್ಕೆ ಸಂಬಂಧಿಸಿದಂತೆ ಆರ್‌ಸಿಬಿಯಿಂದ ಯಾವ ಅಧಿಕೃತ ಮಾಹಿತಿ ದೊರಕಿಲ್ಲ.

ಪ್ರಸ್ತುತ ಈ ಖಾತೆಯಲ್ಲಿ ಕ್ರಿಪ್ಟೋ ಬಗ್ಗೆ ವಿಡಿಯೋಗಳನ್ನು ಹಾಕಲಾಗಿದೆ. ಇದನ್ನು ಹಿಂಪಡೆಯಲು ಆರ್‌ಸಿಬಿ ಯಾವುದೇ ಚಿಂತನೆ ಮಾಡಿಲ್ಲ. ಇನ್ನು, ಐಪಿಎಲ್‌ನಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ತಂಡವೆಂದರೆ ಅದು ಆರ್‌ಸಿಬಿ. ಹೀಗಾಗಿ ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿಯೂ ಅಷ್ಟೇ ಹಿಂಬಾಲಕರು ಇದ್ದಾರೆ. ಆರ್‌ಸಿಬಿ ಟ್ವಿಟರ್‌ನಲ್ಲಿ ಸುಮಾರು 4.8 ಮಿಲಿಯನ್, ಫೇಸ್‌ಬುಕ್‌ನಲ್ಲಿ 9.4 ಮಿಲಿಯನ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ 6.9 ಮಿಲಿಯನ್ ಅನುಯಾಯಿಗಳನ್ನು ಹೊಂದಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್