ಐಫೋನ್ ಜತೆಗೆ ಚಾರ್ಜರ್ ನೀಡುವ ತನಕ ಮಾರಾಟಕ್ಕೆ ಅನುಮತಿ ಇಲ್ಲ | ಬ್ರೆಜಿಲ್ ಸರ್ಕಾರ

iPhone without Charger Image
  • ಐಫೋನ್ 12 ಮತ್ತು ಹೊಸ ಮಾದರಿಗಳ ಮಾರಾಟವನ್ನು ರದ್ದುಗೊಳಿಸುವಂತೆ ಆದೇಶ
  • ಬ್ರೆಜಿಲ್ ನ್ಯಾಯಾಲಯವು ಆ್ಯಪಲ್ ಮೇಲೆ ಸುಮಾರು 18 ಕೋಟಿ ದಂಡ ವಿಧಿಸಿದೆ

ವಿಶ್ವದಲ್ಲಿ ಅತ್ಯಂತ ಬೇಡಿಕೆಯಲ್ಲಿರುವ ಸ್ಮಾರ್ಟ್‌ಫೋನ್‌ ತಯಾರಾಕ ಕಂಪನಿಯಾದ ಆ್ಯಪಲ್ ಉತ್ಪನ್ನವನ್ನು ಸಂಪೂರ್ಣವಾಗಿ ನಿಷೇಧಿಸಲು ಬ್ರೆಜಿಲ್ ಸರ್ಕಾರ ಆದೇಶಿಸಿದೆ. 

ಈ ಹಿಂದೆ ಆ್ಯಪಲ್ ಕಂಪನಿ ನೀಡುವ ಎಲ್ಲ ಉತ್ಪನ್ನಗಳಿಗೆ ಚಾರ್ಜರ್ ನೀಡುವುದಾಗಿ ಹೇಳಿ ಈಗ ಮಾತು ತಪ್ಪಿದೆ. ಎಲ್ಲ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಿಗೆ ಕಂಪನಿಗಳು ಚಾರ್ಜರ್ ನೀಡುತ್ತಿದೆ ಆದರೆ ಆ್ಯಪಲ್ ಮಾತ್ರ ಅದನ್ನು ಬೇರೆಯೇ ಖರೀದಿಸಬೇಕು ಎಂದಿದೆ. ಇದನ್ನು ಅಧಿಕೃತವಾಗಿ ಬ್ರೆಜಿಲ್ ಸರ್ಕಾರ ನಿಷೇಧಿಸಿದೆ. ಚಾರ್ಜರ್ ನೀಡುವ ತನಕ ಮಾರಾಟಕ್ಕೆ ಅನುಮತಿಸುವುದಿಲ್ಲ ಎಂದು ಸರ್ಕಾರ ತಿಳಿಸಿದೆ. 

Eedina App

ಈ ಸುದ್ದಿ ಓದಿದ್ದೀರಾ? ನವೆಂಬರ್ 1 ರಿಂದ ಅಗ್ಗದ ಜಾಹೀರಾತಿಗೆ ನೆಟ್‌ಫ್ಲಿಕ್ಸ್‌ ಚಾಲನೆ?

ನ್ಯಾಯ ಸಚಿವಾಲಯವು ಆ್ಯಪಲ್ ಮೇಲೆ  2.38 ಕೋಟಿ ಅಮೆರಿಕನ್‌ ಡಾಲರ್‍‌ ದಂಡವನ್ನು ವಿಧಿಸಿದೆ.  ಪವರ್ ಚಾರ್ಜರ್‌ನೊಂದಿಗೆ ಬರದ ಯಾವುದೇ ಐಫೋನ್ ಮಾದರಿಯ ಮಾರಾಟವನ್ನು ಅಮಾನತುಗೊಳಿಸುವುದರ ಜತೆಗೆ, ಐಫೋನ್ 12 ಮತ್ತು ಹೊಸ ಮಾದರಿಗಳ ಮಾರಾಟವನ್ನು ರದ್ದುಗೊಳಿಸುವಂತೆ ಆದೇಶಿಸಿದೆ. 

AV Eye Hospital ad

ಇದಕ್ಕೆ ಸಂಬಂಧಿಸಿದಂತೆ ಆ್ಯಪಲ್ ಕಂಪೆನಿಯು ಮಾಡಿದ ಎಲ್ಲ ವಾದಗಳನ್ನು ಬ್ರೆಜಿಲ್ ನ್ಯಾಯ ಸಚಿವಾಲಯ ತಿರಸ್ಕರಿಸಿದೆ. ಇದರಿಂದ ಮುಂದಿನ ದಿನಗಳಲ್ಲಿ ಉಳಿದ ಎಲ್ಲ ದೇಶಗಳು ಕೂಡ ಸ್ಥಗಿತ ಮಾಡುವ ಸಾಧ್ಯತೆಗಳಿವೆ ಎಂದು ತಿಳಿಸಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app