ಭಾರತದಲ್ಲಿ ಸ್ಯಾಮ್‌ಸಂಗ್‌ ಫೋಲ್ಡ್ ಮತ್ತು ಫ್ಲಿಪ್ ಸ್ಮಾರ್ಟ್‌ಫೋನ್‌ ಬಿಡುಗಡೆ

Samsung Galaxy Z Fold 4, Galaxy Z Flip 4 Image
  • ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಜೆಡ್ ಫ್ಲಿಪ್ 4 ಮೊತ್ತ ₹79,546
  • ಗ್ಯಾಲಕ್ಸಿ ಜೆಡ್ ಫೋಲ್ಡ್ 4ನ ಬೆಲೆ ₹1,43,347 ಆಗಿದೆ

ಹಲವು ದೇಶಗಳಲ್ಲಿ ಬಿಡುಗಡೆಯಾದ ಫೋಲ್ಡಿಂಗ್‌ ಸ್ಮಾರ್ಟ್‌ಫೋನನ್ನು ಈಗ ಭಾರತದಲ್ಲಿ ಕೂಡ ಪರಿಚಯಿಸಲು ಸ್ಯಾಮ್‌ಸಂಗ್‌ ಸಂಸ್ಥೆ ಮುಂದಾಗಿದೆ. ಇದಕ್ಕೆ ಗ್ಯಾಲಕ್ಸಿ ಜೆಡ್ ಫ್ಲಿಪ್ 4 ಮತ್ತು ಗ್ಯಾಲಕ್ಸಿ ಜೆಡ್ ಫೋಲ್ಡ್ 4 ಎಂದು ಹೆಸರಿಸಲಾಗಿದೆ. 

ಈ ಸ್ಮಾರ್ಟ್‌ಫೋನ್‌ ವಿಶೇಷ ಏನೆಂದರೆ, ಇದನ್ನು ಫೋಲ್ಡ್ ಮತ್ತು ಫ್ಲಿಪ್ ಕೂಡ ಮಾಡಬಹುದು. ಬಹಳ ವಿಭಿನ್ನ ವಿನ್ಯಾಸವಿರುವ ಸ್ಮಾರ್ಟ್‌ಫೋನ್‌ ಇದಾಗಿದೆ ಮತ್ತು ಇದು ಸ್ಯಾಮ್‌ಸಂಗ್‌ ಸಂಸ್ಥೆಯ ಮೊದಲ ಪ್ರಯತ್ನ ಕೂಡ.

ಗ್ಯಾಲಕ್ಸಿ ಜೆಡ್ ಫೋಲ್ಡ್ 4ನಲ್ಲಿ ಹೊಸದೇನಿದೆ?

ಗ್ಯಾಲಕ್ಸಿ ಜೆಡ್ ಫೋಲ್ಡ್ 4, 7.6-ಇಂಚಿನ ಪರದೆಯ ಜೊತೆಗೆ(ಕ್ಯೂಎಕ್ಸ್ಏ) ಡೈನಾಮಿಕ್ 2ಎಕ್ಸ್ ಡಿಸ್ಪ್ಲೇ ಪ್ಯಾನೆಲ್‌ನೊಂದಿಗೆ ಬರುತ್ತದೆ. ಇದರ ಮುಖ್ಯವಾದ ವೈಶಿಷ್ಟ್ಯವೆಂದರೆ ಇದು ಮಡಚುವ ಪರದೆಯಾಗಿದೆ ಮತ್ತು 120 ಎಚ್‌ಡಿ ರಿಫ್ರೆಶ್ ದರ ಸಹ ಬೆಂಬಲಿಸುತ್ತದೆ. 

ಇದು 4,400 ಎಂಎಎಚ್‌ ಬ್ಯಾಟರಿಯೊಂದಿಗೆ ಬರುತ್ತದೆ ಮತ್ತು 25 ಡಬ್ಲ್ಯೂ ಚಾರ್ಜಿಂಗ್ ಜೊತೆಗೆ ವೈರ್‌ಲೆಸ್‌ ಚಾರ್ಜಿಂಗ್‌ಗೆ ಕೂಡ ಬೆಂಬಲ ನೀಡುತ್ತದೆ. ಫಿಂಗರ್‌ಪ್ರಿಂಟ್‌ ಸಂವೇದಕ ಹಾಗೂ ಬ್ಲೂಟೂತ್‌ಗೆ ಕೂಡ ಬೆಂಬಲ ನೀಡಲಿದೆ. ಇದು 263 ಗ್ರಾಂ ತೂಕ ಹೊಂದಿದೆ. 

ಈ ಸುದ್ದಿ ಓದಿದ್ದೀರಾ? ಭಾರತದಲ್ಲಿ ಐಫೋನ್ ಒಳಗೊಂಡಂತೆ ಎಲ್ಲ ಸ್ಮಾರ್ಟ್‌ಪೋನ್‌ಗಳಿಗೂ ಒಂದೇ ಚಾರ್ಜರ್ 

ಹಾಗಾದರೆ ಗ್ಯಾಲಕ್ಸಿ ಜೆಡ್ ಫ್ಲಿಪ್ 4ನಲ್ಲಿ ಏನಿದೆ?

ಗ್ಯಾಲಕ್ಸಿ ಜೆಡ್ ಫ್ಲಿಪ್ 4 ಸ್ಮಾರ್ಟ್‌ಫೋನ್‌ 6.7 ಇಂಚಿನ ಡೈನಾಮಿಕ್ ಪರದೆಯ ಜೊತೆಗೆ 2ಎಕ್ಸ್‌ ಹೊರ ಪರದೆಯೊಂದಿಗೆ ಬರಲಿದೆ. ಇದು ಆಂತರಿಕವಾಗಿ ಮಡಚಿಕೊಳ್ಳುವ ಮುಖ್ಯ ಪರದೆ. ಫೋನ್ ತನ್ನ ಕ್ಲಾಮ್ಶೆಲ್ ಫಾರ್ಮ್ ಫ್ಯಾಕ್ಟರ್‌ನಲ್ಲಿ ಮಡಿಸಿದಾಗ ಸಣ್ಣ ಸೆಕೆಂಡರಿ 1.9 ಇಂಚಿನ ಸೂಪರ್ ಪಿಕ್ಸೆಲ್‌ಗಳ ಹೊರ ಡಿಸ್‌ಪ್ಲೇ ನೀಡಲಿದೆ. ಇದು 3,700 ಎಂಎಎಚ್‌ ಬ್ಯಾಟರಿಯೊಂದಿಗೆ ಬರುತ್ತದೆ. ಈ ಸ್ಮಾರ್ಟ್‌ಫೋನ್‌ 187 ಗ್ರಾಂ ತೂಗುತ್ತದೆ.

ಇನ್ನೂ ಈ ಎರಡು ಸ್ಮಾರ್ಟ್‌ಫೋನ್‌ ಬೆಲೆಯನ್ನು ನೋಡುವುದಾದರೆ ಗ್ಯಾಲಕ್ಸಿ ಜೆಡ್ ಫ್ಲಿಪ್ 4 ಮೊತ್ತ ₹79,546 ಮತ್ತು ಗ್ಯಾಲಕ್ಸಿ ಜೆಡ್ ಫೋಲ್ಡ್ 4ನ ಬೆಲೆ ₹1,43,347 ಆಗಿದೆ ಎಂದು ಭಾರತದಲ್ಲಿ ಅಂದಾಜಿಸಲಾಗಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್