ವಾಟ್ಸಪ್ ಗ್ರೂಪ್‌ನಿಂದ ಈಗ ಯಾರಿಗೂ ತಿಳಿಯದೆ ನಿರ್ಗಮಿಸಬಹುದು

  • ವಾಟ್ಸಪ್‌ನಲ್ಲಿ 500ಕ್ಕೂ ಅಧಿಕ ಸದಸ್ಯರಿಗೆ ಆಹ್ವಾನ 
  • ಈ ಫೀಚರ್ ಐಪೋನ್ ಮತ್ತು ಆಂಡ್ರಾಯ್ಡ್‌ನಲ್ಲಿ ಮಾತ್ರ ಲಭ್ಯ

ವಾಟ್ಸಪ್‌ ಗ್ರೂಪ್ ಕಿರಿಕಿರಿ ಅನಿಸುತ್ತಿದೆಯೇ? ಯಾರಿಗೂ ತಿಳಿಯದೆ ಗ್ರೂಪ್‌ನಿಂದ ನಿರ್ಗಮಿಸಬೇಕೆ ? ಗ್ರೂಪ್‌ಗಳಿಗೆ ಸೇರಿಸುವುದು, ನಮಗೆ ತಿಳಿಯದೆ ಗ್ರೂಪಿನ ಸದಸ್ಯರಾಗುವುದರಿಂದ ಬೇರ್ಪಡಿಸಲು ಮತ್ತು ಸಂಬಂಧಿಸಿದ ಗ್ರೂಪ್‌ನಿಂದ ನೋಟಿಫಿಕೇಶನ್ ಇಲ್ಲದೆ ಹೊರಗೆ ಬರಲು ಅಸಾಧ್ಯ.

ಈ ಹಿನ್ನೆಲೆಯಲ್ಲಿ ವಾಟ್ಸಪ್ ಈಗ ಹೊಸ 'ಫೀಚರ'ನ್ನು ಪರಿಚಯಿಸಲು ಮುಂದಾಗಿದೆ. ಇದರಿಂದಾಗಿ ನೀವು ಗ್ರೂಪ್‌ನಿಂದ ಯಾರಿಗೂ ತಿಳಿಯದಂತೆ ನಿರ್ಗಮಿಸಬಹುದು. 

ಡಬ್ಲ್ಯೂ.ಎ.ಬೀಟಾ (WABETA) ಸಂಸ್ಥೆಯ ಪ್ರಕಾರ, ನೀವು ಗ್ರೂಪ್‌ನಿಂದ ನಿರ್ಗಮಿಸಿದರೆ ಆ ಗ್ರೂಪಿನ ನಿರ್ವಾಹಕರಿಗೆ ಮಾತ್ರ ತಿಳಿಯುವಂತೆ ಫೀಚರನ್ನು ಅಭಿವೃದ್ಧಿ ಮಾಡಲು ಮುಂದಾಗಿದ್ದು, ಇನ್ನೂ ಪರೀಕ್ಷೆಯ ಹಂತದಲ್ಲಿದೆ ಎಂದು ತಿಳಿಸಿದ್ದಾರೆ.

ಈ ಫೀಚರ್ ಐಪೋನ್ ಮತ್ತು ಆಂಡ್ರಾಯ್ಡ್ ನಲ್ಲಿ ಲಭ್ಯವಿರುತ್ತದೆ ಹಾಗೂ ಬಳಕೆದಾರರ ಸ್ನೇಹಿಯಾಗಿ ಕೂಡ ಕಾರ್ಯ ನಿರ್ವಹಿಸುತ್ತದೆ. ಇತ್ತೀಚೆಗೆ ಎಮೋಜಿ ಪ್ರತಿಕ್ರಿಯೆಗಳನ್ನು ಪರಿಚಯಿಸಿದ ವಾಟ್ಸಪ್, ಇದನ್ನೆಲ್ಲಾ ಒಳಗೊಂಡಂತೆ ಹೊಸ ಫೀಚರ್‌ಗಳನ್ನು ತರುವ ಮೂಲಕ ಬಳಕೆದಾರರ ಆಸಕ್ತಿಯನ್ನು ಹೆಚ್ಚಿಸುತ್ತಿದೆ.

ಅಷ್ಟೇ ಅಲ್ಲದೇ,  "ವಿವಿಧ ಗ್ರೂಪ್‌ನಲ್ಲಿ ಕಾರ್ಯನಿರ್ವಹಿಸುವ ಗ್ರೂಪಿನ ನಿರ್ವಾಹಕರಿಗೆ ಎಲ್ಲ ಗ್ರೂಪ್‌ಗಳನ್ನು ಒಂದೇ ಕಡೆ ಸೇರಿಸಲು 'ಸಮುದಾಯಗಳು' (ಕಮ್ಯುನಿಟಿ) ಎಂಬ ಫೀಚರ್ ಕೂಡ ಪರಿಚಯಿಸಲ್ಲಿದ್ದೇವೆ. ಇದರಿಂದ ಗ್ರೂಪ್‌ನಲ್ಲಿರುವ ನಿರ್ವಾಹಕರಿಗೆ ಬಹಳಷ್ಟು ವಿಷಯಗಳು ಸುಲಭವಾಗಲಿದೆ"ಎಂದು ವಾಟ್ಸಪ್ ಸಂಸ್ಥೆ ತಿಳಿಸಿದೆ.

ವಾಟ್ಸಪ್‌ನಲ್ಲಿ ಮುಂದಿನ ದಿನಗಳಲ್ಲಿ ಬರಲಿರುವ ಫೀಚರ್‌ನಲ್ಲಿ 500ಕ್ಕೂ ಅಧಿಕ ಸದಸ್ಯರನ್ನು ಕೂಡ ಆಹ್ವಾನ ಮಾಡುವಂತೆ ಇರುವ ಫೀಚರನ್ನು ಸೇರಿಸಲು ಯೋಚಿಸುತ್ತಿದೆ. ಇದರಿಂದಾಗಿ ನೀವು ಹೆಚ್ಚಿನ ಸಮುದಾಯಗಳ ಭಾಗವಾಗಲು ತುಂಬಾ ಸುಲಭವಾಗಲಿದೆ.

Image

ಈ ಮೇಲ್ಕಂಡ ಐಪೋನ್ ನಲ್ಲಿ ಕಾಣುವ ವಾಟ್ಸಪ್ ಛಾಯಾಚಿತ್ರ 'ಡಬ್ಲ್ಯೂ.ಎ.ಬೀಟಾ' ಸಂಸ್ಥೆ ಬಿಡುಗಡೆ ಮಾಡಿದೆ. ಈ ಚಿತ್ರದ ಪ್ರಕಾರ ಮುಂಬರುವ ಫೀಚರ್ ಇದಾಗಿದೆ. ಮುಂದಿನ ದಿನಗಳಲ್ಲಿ ಬರುವ ವಾಟ್ಸಪ್ ಹೊಸ ಲಿಂಕ್‌ಗಳು ಹಳೆಯ ಲಿಂಕ್‌ಗಳಿಗಿಂತ ಹೆಚ್ಚು ಆಕರ್ಷಕವಾಗಿಯೂ ಮತ್ತು ವಿವರಪೂರ್ಣವಾಗಿರುತ್ತದೆ ಎಂದಿದ್ದಾರೆ.

ಬಿಸಿನೆಸ್ ವಾಟ್ಸಪ್‌ನಲ್ಲಿರುವ ಫೀಚರ್‌ಗಳನ್ನು ಸಾಮಾನ್ಯ ವಾಟ್ಸಪ್‌ಗೆ ತರಲು ಸಂಸ್ಥೆ ಮುಂದಾಗಿದೆ. ಓದದೆ ಇರುವ ಸಂದೇಶಗಳನ್ನು ಫಿಲ್ಟರ್ ಮಾಡಿ ಉಳಿದ ಗ್ರೂಪ್‌ಗಳಿಗೆ ಪ್ರತ್ಯೇಕ ವಿಭಾಗದ ಜೊತೆಗೆ ದೂರವಾಣಿ ಸಂಪರ್ಕ 'ಸಿಂಕ್' ಮಾಡಲು ವಾಟ್ಸಪ್ ಸಂಸ್ಥೆ ಪ್ರಯತ್ನಿಸುತ್ತಿದೆ.

ನಿಮಗೆ ಏನು ಅನ್ನಿಸ್ತು?
6 ವೋಟ್