ಸೋಶಿಯಲ್ ಮೀಡಿಯಾ ಸ್ಟಾರ್ | ಜಗಲಿಯಿಂದ ಜಗತ್ತಿನೆಡೆಗೆ ಡಾ. ಬ್ರೋ

22ನೇ ವಯಸ್ಸಿಗೆ ದೇಶವಿಡೀ ಸುತ್ತಿದವರು ಗಗನ್‌. ಆದರೆ ಇದಕ್ಕಾಗಿ ಅವರು ಒಂದು ರೂಪಾಯಿ ಸಾಲವನ್ನೂ ಮಾಡಿಲ್ಲ. ಸ್ವತಃ ಕಷ್ಟಪಟ್ಟು ದುಡಿದ ಹಣದಲ್ಲಿ ವಿದೇಶ ಪ್ರವಾಸವನ್ನೂ ಮಾಡಿ ಕನ್ನಡಿಗರಿಗೆ ವಿಶ್ವ ಪರ್ಯಟನೆ ಮಾಡಿಸುತ್ತಿರುವುದು ಖುಷಿ ಪಡುವ ವಿಚಾರ.
Dr Bro Image

"ʻನಮಸ್ಕಾರ ದೇವ್ರು" ಎಂದು ಮಾತು ಆರಂಭಿಸುತ್ತಾ ಯೂಟ್ಯೂಬ್ ವೀಕ್ಷಕರ ಗಮನಸೆಳೆದ ಪ್ರವಾಸಿಗ ಗಗನ್‌. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮದ ಹಲವಾರು ಯೂಟ್ಯೂಬರ್‌ಗಳು ಹೊಸ ವಿಚಾರಗಳ ಮೇಲೆ ಬೆಳಲು ಚೆಲ್ಲುತ್ತಿರುವುದು ಕಂಡಿದ್ದೇವೆ. ಪ್ರತಿಯೊಬ್ಬರ ಕತೆಯೂ ವಿಶಿಷ್ಟವಾಗಿರುತ್ತದೆ.

ಹೀಗೆ, ನಮ್ಮ ಕರುನಾಡಿನ ಡಾ. ಬ್ರೋ ಹೆಸರಿನ ಖ್ಯಾತ ಯೂಟ್ಯೂಬ್ ಪ್ರವಾಸಿಗ ಅತಿ ಕಡಿಮೆ ಖರ್ಚಿನಲ್ಲಿ ದೇಶ- ವಿದೇಶ ಸುತ್ತುವುದು ಹೇಗೆ ಎಂದು ತಮ್ಮ ವೀಕ್ಷಕರಿಗೆ ತೋರಿಸುತ್ತಿದ್ದಾರೆ. ಅಂಗೈನಲ್ಲೇ ಪ್ರಪಂಚದ ಮೂಲೆ– ಮೂಲೆ ತೋರಿಸುತ್ತ, ಎಲ್ಲೆಡೆ ಕನ್ನಡ ಭಾಷೆ ಹರಡುತ್ತಿದ್ದಾರೆ.

ಯಾರು ಈ ಡಾಕ್ಟರ್ ಬ್ರೋ?

ಡಾಕ್ಟರ್ ಬ್ರೋ ಹೆಸರು ಗಗನ್, ಮೂಲತಃ ಬೆಂಗಳೂರಿನ ಹೊರವಲಯದವರು. ಹುಟ್ಟಿದ್ದು ಮಧ್ಯಮ ವರ್ಗದ ಕುಟುಂಬದಲ್ಲಿ. ತಂದೆಯ ಹೆಸರು ಶ್ರೀನಿವಾಸ್ ಮತ್ತು ತಾಯಿ ಪದ್ಮಾ. ಗಗನ್‌ಗೆ ಓದಿನಲ್ಲಿ ಆಸಕ್ತಿ ಇರಲಿಲ್ಲ. ಹಾಡು, ಡ್ಯಾನ್ಸ್ ನಿರೂಪಣೆಯಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದ ಕಾರಣ ತನ್ನದೇ ಯೂಟ್ಯೂಬ್ ಖಾತೆಯನ್ನು 2016ರಲ್ಲಿ ರಚಿಸಿದ್ದರು. ಆರಂಭದಲ್ಲಿ ತಮಾಷೆ ಮತ್ತು ಹಲವು ಸಾಂಸ್ಕೃತಿಕ ಚಟುವಟಿಕೆಗಳ ವಿಡಿಯೋ ಹಾಕುವ ಮೂಲಕ ಸಮಯವಾದಾಗ ರಾಜ್ಯದ ಬೇರೆ ಬೇರೆ ಕಡೆ ಸುತ್ತಾಡಿ ವಿವರ ಕೊಡಲು ಆರಂಭಿಸಿದ್ದರು. ರಾಜ್ಯವಿಡೀ ಸುತ್ತಿದ ನಂತರ ದೇಶ- ವಿದೇಶ ತಿರುಗುತ್ತಿದ್ದಾರೆ.

22ನೇ ವಯಸ್ಸಿಗೆ ದೇಶವಿಡೀ ಸುತ್ತಿದ ಖ್ಯಾತಿ ಗಗನ್ ಅವರದ್ದು. ಆದರೆ ಇದಕ್ಕಾಗಿ ಅವರು ಒಂದು ರೂಪಾಯಿ ಸಾಲವನ್ನೂ ಮಾಡಿಲ್ಲ. ಸ್ವತಃ ಕಷ್ಟಪಟ್ಟು ದುಡಿದ ಹಣದಲ್ಲಿ ವಿದೇಶ ಪ್ರವಾಸವನ್ನೂ ಮಾಡಿ ಕನ್ನಡಿಗರಿಗೆ ವಿಶ್ವ ಪರ್ಯಟನೆ ಮಾಡಿಸುತ್ತಿರುವುದು ಖುಷಿ ಪಡುವ ವಿಚಾರ.

Image
Dr Bro Image

ಯೂಟ್ಯೂಬ್‌ ಸಂಪಾದನೆ ಎಷ್ಟು?

ಇವರ ಯೂಟ್ಯೂಬ್ ಚಾನೆಲ್ ಸಬ್‌ಸ್ಕ್ರೈಬ್‌ ಮಾಡಿದವರ ಸಂಖ್ಯೆ 7.8 ಲಕ್ಷ ಮಂದಿ! ಫೇಸ್‌ಬುಕ್‌ನಲ್ಲಿ ಇವರನ್ನು ಹಿಂಬಾಲಿಸುತ್ತಿರುವವರ ಸಂಖ್ಯೆ 7 ಲಕ್ಷ ದಾಟಿದೆ. ವಿಡಿಯೋಗಳಿಂದಲೇ ತಿಂಗಳಿಗೆ 800 ಡಾಲರ್ ಅಂದರೆ, ಒಂದೂವರೆ ಲಕ್ಷಕ್ಕೂ ಹೆಚ್ಚಿನ ಹಣ ಸಂಪಾದಿಸುತ್ತಿದ್ದಾರೆ ಎಂದು ಅಂದಾಜಿಸಲಾಗಿದೆ. ಆದರೆ, ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ.

ತಾವು ಒಬ್ಬರೇ ಕಷ್ಟಪಟ್ಟು ಕ್ಯಾಮೆರಾ ಮತ್ತು ಮೊಬೈಲ್‌ನ ಸಹಾಯದಿಂದ ವಿಡಿಯೋ ನಿರ್ಮಿಸುತ್ತ, ಸಾಮಾಜಿಕ ಮಾಧ್ಯಮಗಳ ಮೂಲಕ ಹಲವು ದೇಶಗಳಲ್ಲಿ ಮಿತ್ರರನ್ನು ಪರಿಚಯಿಸಿಕೊಂಡು ಅವರ ಸಹಾಯದಿಂದ ದೇಶಗಳನ್ನು ಸುತ್ತುತ್ತಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್