ಬಾಹ್ಯಾಕಾಶ ವಿಸ್ಮಯ | ಚಂದ್ರನ ಬಳಿ ತಲುಪಿದ ನಾಸಾದ ಬಾಹ್ಯಾಕಾಶ ನೌಕೆ

NASA's Artemis Spacecraft Reaches The Moon, Sends Back Image Of 'Pale Blue Dot' Earth
  • ಇದೇ ಮೊದಲ ಬಾರಿಗೆ ಚಂದ್ರನ ಬಳಿಗೆ ತಲುಪಿದ ನೌಕೆ
  • ಮತ್ತೊಂದು ಎಂಜಿನ್‌ ಶುಕ್ರವಾರ ಚಂದ್ರನ ಕಕ್ಷೆಗೆ ಸೇರಲಿದೆ

ನಾಸಾವು ಚಂದ್ರಯಾನದ ಅಂಗವಾಗಿ ಕಳೆದ ವಾರ ಪರೀಕ್ಷಾರ್ಥವಾಗಿ ಉಡಾವಣೆ ಮಾಡಿದ್ದ ಬಾಹ್ಯಾಕಾಶ ನೌಕೆ ಸೋಮವಾರ ಚಂದ್ರನಲ್ಲಿಗೆ ತಲುಪಿದೆ.

ನಾಸಾ 50 ವರ್ಷಗಳ ಹಿಂದೆ ಅಪೋಲೊ ಕಾರ್ಯಕ್ರಮದ ಭಾಗವಾಗಿ ತನ್ನ ನೌಕೆಯನ್ನು ಚಂದ್ರನಲ್ಲಿಗೆ ಕಳುಹಿಸಿತ್ತು. ಇದಾದ ಬಳಿಕ ನೌಕೆಯೊಂದು ಚಂದ್ರ ಗ್ರಹ ತಲುಪಿರುವುದು ಇದೇ ಮೊದಲು.

ನೌಕೆಯು ಸೋಮವಾರ ಬೆಳಿಗ್ಗೆ ರವಾನಿಸಿದ್ದ ವಿಡಿಯೋದಲ್ಲಿ ಚಂದ್ರನು ಹಿಂದೆಂದಿಗಿಂತಲೂ ಹೆಚ್ಚು ದೊಡ್ಡದಾಗಿ ಕಾಣುತ್ತಿದ್ದ. ನೌಕೆಯು ಚಂದ್ರನ ಹಿಂದಿನಿಂದ ಸಾಗುವಾಗ ನೌಕೆಯಲ್ಲಿನ ಕ್ಯಾಮೆರಾದಲ್ಲಿ ಭೂಮಿಯ ಚಿತ್ರ ಸೆರೆಯಾಗಿದೆ. ನೀಲಿ ಚುಕ್ಕೆಯ ಸುತ್ತಲೂ ಕಪ್ಪು ಬಣ್ಣ ಆವರಿಸಿರುವ ಚಿತ್ರ ಅದಾಗಿದೆ.

ಈ ಸುದ್ದಿ ಓದಿದ್ದೀರಾ? ಟೆಕ್‌ ಲೋಕದಲ್ಲಿ ಬೀಸುತ್ತಿರುವ ಉದ್ಯೋಗ ಕಡಿತದ ಬಿರುಗಾಳಿ; ಕಾರಣಗಳೇನು?

ನೌಕೆಯು ಚಂದ್ರನ ಕಕ್ಷೆಯ ಎಡಬದಿ ಪ‍್ರವೇಶಿಸಲು ಅಗತ್ಯವಿರುವ ವೇಗ ಪಡೆಯಬೇಕಾದರೆ ಚಂದ್ರನ ಸುತ್ತಲೂ ಜೋಲಿ ಹೊಡೆಯಬೇಕಾಗುತ್ತದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ನೌಕೆಯು ತಾನು ಹೊತ್ತೊಯ್ದಿರುವ ಮತ್ತೊಂದು ಎಂಜಿನ್‌ ಅನ್ನು ಶುಕ್ರವಾರ ಚಂದ್ರನ ಕಕ್ಷೆಗೆ ಸೇರಿಸಲಿದೆ. ಮುಂದಿನ ಸೋಮವಾರದ ವೇಳೆಗೆ ಈ ನೌಕೆಯು ಭೂಮಿಯಿಂದ ಗರಿಷ್ಠ 4 ಲಕ್ಷದ 33 ಸಾವಿರ ಕಿಮೀ ದೂರ ಕ್ರಮಿಸಲಿದೆ.

ಚಂದ್ರನ ಕಕ್ಷೆಯಲ್ಲಿ ಸುಮಾರು ಒಂದು ವಾರ ಇರಲಿರುವ ನೌಕೆಯು ಡಿಸೆಂಬರ್‌ 11ರಂದು ಭೂ ಕಕ್ಷೆಗೆ ಮರಳುವ ಸಾಧ್ಯತೆಯಿದೆ. 

ಮುಂದಿನ ವರ್ಷ ನಾಸಾ, ನಾಲ್ಕು ಗಗನಯಾತ್ರಿಗಳನ್ನೊಳಗೊಂಡ ನೌಕೆಯನ್ನು ಚಂದ್ರನ ಕಕ್ಷೆಗೆ ಕಳುಹಿಸಲಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್
Image
av 930X180