ವಾರದ ಟೆಕ್ ನೋಟ | ಭಾರತದ ರೈಲ್ವೆ ನಿಲ್ದಾಣದಲ್ಲಿ ಇ-ಚಾರ್ಜಿಂಗ್ ವ್ಯವಸ್ಥೆ

E Charging Image
  • ಭಾರತಕ್ಕೆ ಲಗ್ಗೆಯಿಡಲಿದೆ ʻಒನ್ ಪ್ಲಸ್ ನಾರ್ಡ್ ಟಿ20ʼ
  • ಭಾರತದ ರೈಲ್ವೆ ನಿಲ್ದಾಣದಲ್ಲಿ ಇ- ಚಾರ್ಜಿಂಗ್ ವ್ಯವಸ್ಥೆ

ಟೆಕ್ ಲೋಕ ನವೀಕರಣವಾಗುತ್ತಲೇ ಇರುತ್ತದೆ. ಸಾಮಾಜಿಕ ಮಾಧ್ಯಮ ಅಷ್ಟೇ ಅಲ್ಲದೆ, ಸ್ಮಾರ್ಟ್‌ಪೋನ್‌ಗಳಲ್ಲಿ ಹೆಚ್ಚೆಚ್ಚು ವೈಶಿಷ್ಟ್ಯಗಳನ್ನು ಪರಿಚಯಿಸಲಾಗಿದೆ. ಹೀಗೆ ಯಾವ ಯಾವ ತಂತ್ರಜ್ಞಾನದಲ್ಲಿ ಎಷ್ಟೆಷ್ಟು ಬದಲಾವಣೆ ಆಗಿದೆ ಅನ್ನೋದನ್ನ ನೋಡೋಣ ಬನ್ನಿ.

ರೀಲ್ಸ್‌ಗಳನ್ನು 90 ಸೆಕೆಂಡ್‌ಗೆ ವಿಸ್ತರಿಸಿದ ಇನ್‌ಸ್ಟಾಗ್ರಾಂ

ಇನ್‌ಸ್ಟಾಗ್ರಾಂನಲ್ಲಿ ರೀಲ್ಸ್ ಆರಂಭವಾದಾಗ ಕೇವಲ 3೦ ಸೆಕೆಂಡ್‌ಗಳು ಮಾತ್ರ ಇತ್ತು. ಬಳಿಕ 60 ಸೆಕೆಂಡ್‌ಗೆ ಏರಿಸಲಾಗಿತ್ತು. ಇದೀಗ ರೀಲ್ಸ್‌ನ್ನು 90 ಸೆಕೆಂಡ್‌ಗಳಿಗೆ ಹೆಚ್ಚಿಸಿದೆ. 
ಮುಂಬರುವ ದಿನಗಳಲ್ಲಿ ಕಳೆದು ಹೋದ ಮಕ್ಕಳನ್ನು ಪತ್ತೆ ಹಚ್ಚುವ ʻಆ್ಯಂಬರ್ʼ ಎನ್ನುವ ವೈಶಿಷ್ಟ್ಯವನ್ನು ಕೂಡ ಪರಿಚಯಿಸಲಿದ್ದೇವೆ ಎಂದು ಇನ್‌ಸ್ಟಾಗ್ರಾಂ ಸಂಸ್ಥೆ ಟ್ವೀಟ್ ಮಾಡಿದೆ.

ಕಳುಹಿಸಿದ ಸಂದೇಶ ಎಡಿಟ್ ಮಾಡಬಹುದು

ವಾಟ್ಸಪ್‌ನಲ್ಲಿ ಬಳಕೆದಾರರು ಕಳಿಸಿದ ಸಂದೇಶಗಳನ್ನು ಅಳಿಸಿ ಹಾಕುವ ಅವಕಾಶ ಮಾತ್ರ ಇತ್ತು. ಆದರೆ, ಈಗ ತಾವು ಕಳಿಸಿದ ಸಂದೇಶಗಳನ್ನು ಎಡಿಟ್ ಮಾಡುವ ಅವಕಾಶವನ್ನೂ ನೀಡಲು ವಾಟ್ಸಪ್ ಸಂಸ್ಥೆ ಮುಂದಾಗಿದೆ. ಇದರಿಂದ ನೀವೂ ಆಕಸ್ಮಿಕವಾಗಿ ಸಂದೇಶಗಳನ್ನು ಕಳುಹಿಸಿದಲ್ಲಿ ಅದನ್ನು ಪುನಃ ಎಡಿಟ್ ಮಾಡುವ ವೈಶಿಷ್ಟ್ಯವನ್ನು ವಾಟ್ಸಪ್ ಹೊಂದಿರಲಿದೆ. ಈ ಪ್ರಯತ್ನ ಕಾರ್ಯ ನಿರ್ವಹಿಸಲು ಪ್ರಾರಂಭಿಸಿದೆ ಎಂದು ವಾಟ್ಸಪ್ ಸಂಸ್ಥೆ ತಿಳಿಸಿದೆ.

ಈ ಸುದ್ದಿ ಓದಿದ್ದೀರಾ? ಇನ್‌ಸ್ಟಾಗ್ರಾಂನಲ್ಲಿ ಡಿಜಿಟಲ್ ಎನ್‌ಎಫ್‌ಟಿ ಪ್ರಾರಂಭಿಸಲಿದ್ದೇವೆ: ಮಾರ್ಕ್ ಜುಕರ್‌ಬರ್ಗ್

ಭಾರತಕ್ಕೆ ಶೀಘ್ರದಲ್ಲೇ ಲಗ್ಗೆಯಿಡಲಿದೆ ʻಒನ್ ಪ್ಲಸ್ ನಾರ್ಡ್ ಟಿ20ʼ

ಜೂನ್ ಅಂತ್ಯದ ವೇಳೆಗೆ ಭಾರತದಲ್ಲಿ ʻಒನ್ ಪ್ಲಸ್ ನಾರ್ಡ್ ಟಿ20ʼ ಸ್ಮಾರ್ಟ್‌ಪೋನ್‌ ಬಿಡುಗಡೆಯಾಗುವ ನಿರೀಕ್ಷೆಯಿದೆ. ಈ ಸ್ಮಾರ್ಟ್‌ಪೋನ್‌ ಎರಡು ವೃತ್ತಾಕಾರದ ಕ್ಯಾಮೆರಾ ಹೊಂದಿದ್ದು, ಎಲ್ಇಡಿ ಸೌಲಭ್ಯದ ಜೊತೆಗೆ 6.43 ಇಂಚಿನ ಡಿಸ್‌ಪ್ಲೇ ಹಾಗೂ 2400*1080 ಪಿಕ್ಸೆಲ್‌ಗಳನ್ನು ಹೊಂದಿರಲಿದೆ. ಇನ್ನೂ ಅನೇಕ ವೈಶಿಷ್ಟ್ಯವನ್ನು ಈ ಸ್ಮಾರ್ಟ್‌ಪೋನ್‌ ಹೊಂದಿದೆ. ಇದರ ಮೊತ್ತ ಭಾರತದಲ್ಲಿ ₹38,000 ಎಂದು ಅಂದಾಜಿಸಲಾಗಿದೆ.

ಭಾರತದ ರೈಲ್ವೆ ನಿಲ್ಡಾಣದಲ್ಲಿ ಇ-ಚಾರ್ಜಿಂಗ್ ವ್ಯವಸ್ಥೆ

ಕರ್ನಾಟಕ ಸೇರಿದಂತೆ ದೇಶದ 32 ರೈಲು ನಿಲ್ದಾಣಗಳಲ್ಲಿ ವಿದ್ಯುತ್ ವಾಹನಗಳ ಇ-ಚಾರ್ಜಿಂಗ್ ಸೌಲಭ್ಯ ಕಲ್ಪಿಸಲಾಗುವುದೆಂದು ದಕ್ಷಿಣ ರೈಲ್ವೆ ಕೇಂದ್ರ ಸಿಕೆಂದರಾಬಾದ್ ವಿಭಾಗ ಪ್ರಕಟಿಸಿದೆ. ಕರ್ನಾಟಕದ ಬೀದರ್ ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ಈ ವ್ಯವಸ್ಥೆ ಸ್ಥಾಪಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿವೆ.

ಇದಿಷ್ಟು ಈ ವಾರದ ಟೆಕ್ ನೋಟ್, ಮುಂದಿನ ವಾರ ಮತ್ತಷ್ಟು ಸುದ್ದಿಗಳೊಂದಿಗೆ ಬರಲಿದ್ದೇವೆ.

ನಿಮಗೆ ಏನು ಅನ್ನಿಸ್ತು?
1 ವೋಟ್