ವಾರದ ಟೆಕ್ ನೋಟ | ಮೆಟಾವರ್ಸ್‌ನಲ್ಲಿ ಹಾರಲಿದೆ ಭಾರತದ ತಿರಂಗ

Meta NFTs of Indian Flag Image
  • ಚೀನೀ ಸ್ಮಾರ್ಟ್‌ಫೋನ್‌ಗಳನ್ನು ನಿರ್ಬಂಧಿಸಿದ ಕೇಂದ್ರ ಸರ್ಕಾರ 
  • ಉದ್ಯೋಗಿಗಳಿಗೆ ವಜಾ ಮಾಡುವ ಎಚ್ಚರಿಕೆ ನೀಡಿದ ಗೂಗಲ್ ಸಂಸ್ಥೆ

ಮೆಟಾವರ್ಸ್‌ನಲ್ಲಿ ಎನ್ಎಫ್‌ಟಿ ರಾಷ್ಟ್ರ ಧ್ವಜಾರೋಹಣ

Image
Meta NFTs of Indian Flag Image

ಎಲ್ಲೆಡೆ ಭಾರಿ ಪ್ರಚಾರ ಪಡೆದುಕೊಂಡಿರುವ ಮೈ ಮ್ಯಾಪ್‌ ಇಂಡಿಯಾ ಸಂಸ್ಥೆ ಮೆಟಾವರ್ಸ್‌ನಲ್ಲಿ ಡಿಜಿಟಲ್ ಎನ್ಎಫ್‌ಟಿ ಮೂಲಕ ಧ್ವಜಾರೋಹಣ ಮಾಡಲು ಮುಂದಾಗಿದೆ.  ಇದನ್ನು ಸ್ವಾತಂತ್ರ್ಯ ದಿನದ ಅಂಗವಾಗಿ ಪ್ರಪಂಚದಾದ್ಯಂತ ಬಿಡುಗಡೆ ಮಾಡಲು ನಿರ್ಧರಿಸಿದೆ. ಮೈ ಮ್ಯಾಪ್ ಇಂಡಿಯಾ, ಭಾರತದ 2ಡಿ ಮತ್ತು 3ಡಿ ಮೆಟಾವರ್ಸ್ ಸಹಾಯದಿಂದ ʻಹರ್ ಘರ್ ತಿರಂಗಾʼ ಅಭಿಯಾನವನ್ನು ಪ್ರಾರಂಭಿಸಿದೆ.

“ಪ್ರತಿಯೊಬ್ಬ ಭಾರತೀಯನೂ ಸ್ವಾತಂತ್ರ್ಯ ದಿನವನ್ನು ಮೆಟಾವರ್ಸ್‌ನಲ್ಲಿ ಆಚರಿಸಬೇಕೆಂದು ಬಯಸಿದ್ದೇವೆ. ಎನ್ಎಫ್‌ಟಿ ರಾಷ್ಟ್ರ ಧ್ವಜಾರೋಹಣ ಮಾಡುವ ಮೂಲಕ ತಮ್ಮ ಸಂತಸವನ್ನು ವ್ಯಕ್ತಪಡಿಸಬಹುದು” ಎಂದು ಸಂಸ್ಥೆಯ ಮುಖ್ಯಸ್ಥ ರೋಹನ್ ವರ್ಮಾ ತಿಳಿಸಿದರು. 

ಸ್ಯಾಮ್‌ಸಂಗ್‌ ನಂತರ ಶಿಯೋಮಿ ಕೂಡ ಪ್ಲಿಫ್ ಫೋನ್‌ಗೆ ಚಾಲನೆ 

Image
Xiaomi Fold 2 Image

ಕಳೆದ ಮೂರು ದಿನಗಳ ಹಿಂದೆ ಸ್ಯಾಮ್‌ಸಂಗ್‌ ತನ್ನ ಮೊದಲ ಫೋಲ್ಡ್ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿತ್ತು. ಅದಾದ ಬಳಿಕ ಇದೀಗ ಶಿಯೋಮಿ ಕೂಡ ತನ್ನದೇಯಾದ ನೂತನ ಫೋಲ್ಡಿಂಗ್ ಸ್ಮಾರ್ಟ್‌ಫೋನ್‌ಗೆ ಚಾಲನೆ ನೀಡಲಿದೆ. 
ಮಿಕ್ಸ್ ಫೋಲ್ಡ್ 2 ಹೆಸರಿನ ಸ್ಮಾರ್ಟ್‌ಫೋನ್‌ ಸ್ನಾಪ್‌ಡ್ರಾಗನ್‌ 8+ ಜತೆಗೆ 8.02 ಇಂಚಿನ ಪರದೆಯನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್‌ ಬೆಲೆ ಚೀನಾ ಕರೆನ್ಸಿಯಲ್ಲಿ ₹8,999 ಆಗಿದೆ ಮತ್ತು ಭಾರತದಲ್ಲಿ ಸುಮಾರು ₹104,423 ಇರಬಹುದು. ಹೊಸ ಫೋಲ್ಡಬಲ್ ಫೋನ್ ಮೂರು ಶೇಖರಣಾ ಆಯ್ಕೆಗಳಲ್ಲಿ ಬರಲಿದೆ ಹಾಗೂ 256ಜಿಬಿ ರಾಮ್ ಸಂಗ್ರಹಣೆ ಕೂಡ ಇದು ಒಳಗೊಂಡಿದೆ. 

ಚೀನೀ ಸ್ಮಾರ್ಟ್‌ಫೋನ್‌ಗಳನ್ನು ನಿರ್ಬಂಧಿಸಿದ ಕೇಂದ್ರ ಸರ್ಕಾರ 

Image
Chinese Smartphones Image

ಕೇಂದ್ರದ ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ ಭಾರತ, ಚೀನಾ ದೇಶದ ಎಲ್ಲ ಉತ್ಪನ್ನಗಳನ್ನು ನಿಷೇಧ ಮಾಡಲು ತೀರ್ಮಾನಿಸಿದೆ, ಇತ್ತೀಚೆಗೆ ಕೇಂದ್ರ ಪಬ್‌ಜಿ ನಂತಹ ಗೇಮಿಂಗ್ ಅಫ್ಲಿಕೇಶನ್‌ನ್ನು ನಿರ್ಬಂಧಿಸಿತ್ತು, ಈಗ ಸರ್ಕಾರ ಚೀನಾದ 12000ದೊಳಗಿನ ಎಲ್ಲ ಸ್ಮಾರ್ಟ್‌ಫೋನ್‌ಗಳನ್ನು ಭಾರತದಲ್ಲಿ ಮಾರಾಟ ಮಾಡುವುದನ್ನು ನಿಲ್ಲಿಸಿದೆ. 

ಅಂದಹಾಗೆ, ಭಾರತ ಮತ್ತು ಚೀನಾ ನಡುವೆ ಕೆಲ ದಿನಗಳಿಂದ ಶೀತಲ ಸಮರ ನಡೆಯುತ್ತಿದೆ. ಕೆಲವು ಚೀನೀ ಸ್ಮಾರ್ಟ್‌ಫೋನ್‌ ಕಂಪನಿಗಳು ಭಾರತದಲ್ಲಿ ಇತ್ತೀಚೆಗೆ ಪರಿಶೀಲನೆಗೆ ಒಳಪಟ್ಟಿವೆ. ಕಳೆದ ಕೆಲವು ತಿಂಗಳುಗಳಲ್ಲಿ ಶಿಯೋಮಿ, ವಿವೋ, ಮತ್ತು ಓಪೋ ಸೇರಿದಂತೆ ಚೀನಾದ ಸ್ಮಾರ್ಟ್‌ಫೋನ್‌ ಸಂಸ್ಥೆಗಳ ಮೇಲೆ ತೆರಿಗೆ ವಂಚನೆ ಆರೋಪ ಕೂಡ ಹೊರಿಸಲಾಗಿದೆ.

ಈ ಸುದ್ದಿ ಓದಿದ್ದೀರಾ? ಆರ್‌ಸಿಬಿ ಯೂಟ್ಯೂಬ್ ಖಾತೆಗೆ ಖನ್ನ; ವಿಡಿಯೋಗಳೆಲ್ಲವೂ ಡಿಲೀಟ್

ಉದ್ಯೋಗಿಗಳಿಗೆ ವಜಾಗೊಳಿಸುವ ಎಚ್ಚರಿಕೆ ನೀಡಿದ ಗೂಗಲ್ ಸಂಸ್ಥೆ

Image
Google Image

ಪ್ರಪಂಚದ ಎಲ್ಲ ದೊಡ್ಡ ಟೆಕ್ ಕಂಪನಿಗಳು ಆರ್ಥಿಕ ನಷ್ಟ ಕಾರಣದಿಂದ ಉದ್ಯೋಗಿಗಳನ್ನು ವಜಾಗೊಳಿಸಿವೆ, ಅದೇ ರೀತಿ ಗೂಗಲ್ ಕೂಡ ಉದ್ಯೋಗಿಗಳು ಮಾಡುವ ಕೆಲಸದಲ್ಲಿ ಯಾವುದೇ ಶ್ರದ್ಧೆಯಿಲ್ಲ ಮತ್ತು ಆಸಕ್ತಿಯಿಲ್ಲ ಎಂಬ ಕಾರಣ ನೀಡುವ ಮೂಲಕ ಎಚ್ಚರ ಸಂದೇಶವನ್ನು ನೀಡಿದೆ.  ಅಲ್ಲದೆ ಈ ಎಚ್ಚರದ ಬಳಿಕವು ಕೆಲಸದಲ್ಲಿ ಯಾವುದೇ ಪ್ರಗತಿ ಇಲ್ಲವಾದಲ್ಲಿ ವಜಾ ಮಾಡುವುದಾಗಿ ಗೂಗಲ್ ಮುಖ್ಯಸ್ಥ ಸುಂದರ್ ಪಿಚೈ ತಿಳಿಸಿದ್ದಾರೆ. 

ನಿಮಗೆ ಏನು ಅನ್ನಿಸ್ತು?
0 ವೋಟ್