ಲಾರಿ ಚಾಲಕರ ಜೀವನ ಸುಧಾರಿಸಲು ಬೇಕಿದೆ ತಂತ್ರಜ್ಞಾನ

ಸಾರಿಗೆ ಉದ್ಯಮವು ಭಾರತದ ಆರ್ಥಿಕತೆಯ ಬೆನ್ನೆಲುಬಾಗಿದೆ. ಶೇಕಡ 90ರಷ್ಟು ಪ್ರಯಾಣಿಕರು 67% ರಷ್ಟು ಸರಕುಗಳು ರಸ್ತೆಗಳ ಲಾರಿಗಳ ಮೂಲಕ ಸರಾಬರಾಜು ಆಗುತ್ತೇವೆ ಎಂದು ಇತ್ತೀಚಿಗೆ ಬಿಡುಗಡೆಯಾದ ವರದಿಯೊಂದು ತಿಳಿಸಿದೆ. ಭಾರತೀಯ ಲಾರಿ ಸಾರಿಗೆ ಮಾರುಕಟ್ಟೆಯು 2020ರಲ್ಲಿ 10,850 ದಶಲಕ್ಷ ಡಾಲರ್‌ ಮೌಲ್ಯ ಹೊಂದಿತ್ತು. 2026ರ ವೇಳೆಗೆ ಸುಮಾರು ಶೇಖಡ 12%ರಷ್ಟು ಲಾಭ ಗಳಿಸುವ ನಿರೀಕ್ಷೆಯಿದೆ.
Truck Image

ತಂತ್ರಜ್ಞಾನ ಬಂದ ಮೇಲೆ ಎಲ್ಲ ಉದ್ಯಮ ವಲಯದಲ್ಲಿಯೂ ನವೀಕರಣ ಶುರುವಾಗಿದೆ. ಅದೇ ರೀತಿ ಲಾರಿ ಸಾರಿಗೆ ವಲಯದಲ್ಲೂ ಕೂಡ ತಂತ್ರಜ್ಞಾನ ಬೇಕಿದೆ ಎಂದು ಲಾರಿ ಉದ್ಯಮದವರು ಹಾಗೂ ಚಾಲಕರು ಬಯಸುತ್ತಿದ್ದಾರೆ. 

ಸಾರಿಗೆ ಉದ್ಯಮವು ಭಾರತದ ಆರ್ಥಿಕತೆಯ ಬೆನ್ನೆಲುಬಾಗಿದೆ. ಶೇಕಡ 90ರಷ್ಟು ಪ್ರಮಾಣದಲ್ಲಿ ಬಳಕೆಯಾಗುತ್ತಿದ್ದು, ಅದರಲ್ಲಿ 67% ರಷ್ಟು ಪಾಲು ಸರಕುಗಳು ರಸ್ತೆಗಳ ಲಾರಿಗಳ ಮೂಲಕವೇ ಸರಾಬರಾಜು ಆಗುತ್ತಿವೆ ಎಂದು ಇತ್ತೀಚೆಗೆ ಬಿಡುಗಡೆಯಾದ ವರದಿಯೊಂದು ತಿಳಿಸಿದೆ.

ಸರಕು ಸಾಗಣೆಗೆ ಲಾರಿಗಳು ಸಾಮಾನ್ಯವಾಗಿ ಬಳಸುವ ಸಾರಿಗೆ ವಿಧಾನ. ಇಲ್ಲಿ ಲಾರಿ ಚಾಲಕರು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಹೆಚ್ಚಿನ ವಾಹನಗಳು ವೈಯಕ್ತಿಕ ಮಾಲೀಕರ ಒಡೆತನದಲ್ಲಿದ್ದರೆ, ಇನ್ನೂ ಕೆಲವು ಲಾರಿ ಗುತ್ತಿಗೆದಾರರ ಅಡಿಯಲ್ಲಿ ಚಲಿಸಲು ಚಾಲಕರನ್ನು ನೇಮಿಸಿಕೊಳ್ಳುವ ಕಂಪನಿಗಳಾಗಿವೆ.

Image
truck drivers

ಭಾರತೀಯ ಲಾರಿ ಸಾರಿಗೆ ಮಾರುಕಟ್ಟೆಯು 2020ರಲ್ಲಿ 10,850 ದಶಲಕ್ಷ ಡಾಲರ್‌ ಮೌಲ್ಯ ಹೊಂದಿತ್ತು. 2026ರ ವೇಳೆಗೆ ಸುಮಾರು ಶೇಕಡ 12%ರಷ್ಟು ಲಾಭ ಗಳಿಸುವ ನಿರೀಕ್ಷೆಯಿದೆ. ಇದಾಗ್ಯೂ, ಲಾರಿ ಸಾರಿಗೆ ಉದ್ಯಮ ದೊಡ್ಡದಾಗಿದೆ. ಆದರೆ ಅಸಂಘಟಿತವಾಗಿದೆ ಎಂದು ಮಾಹಿತಿ ನೀಡಿದೆ.

ತಂತ್ರಜ್ಞಾನದಿಂದ ಎಷ್ಟು ಬದಲಾವಣೆ ಕಾಣಬಹುದು?

ಹಣಕಾಸು ವಹಿವಾಟಿನ ಮೇಲೆ ನಿಗಾವಹಿಸಬೇಕು 
ತಂತ್ರಜ್ಞಾನವನ್ನು ಮೊಬೈಲ್‌ಗಳಲ್ಲಿ ಅಪ್ಲಿಕೇಶನ್ ಮೂಲಕ ಅಳವಡಿಸುವುದರಿಂದ ಲಾರಿ ಚಾಲಕರಿಗೆ, ಗುತ್ತಿಗೆದಾರರಿಗೆ ಲಾರಿಯ ಪ್ರತಿ ಚಲನವನ್ನು ಗಮನಿಸಲು ಸಹಾಯ ಮಾಡಿಕೊಡುತ್ತದೆ. ಇದರಿಂದ ಹಣಕಾಸು ವಹಿವಾಟುಗಳಾದ ʼಜಿಎಸ್‌ಟಿ, ಇ-ವೇ ಬಿಲ್, ಫಾಸ್ಟ್ ಟ್ಯಾಗ್ ಹಾಗೂ ಯುಪಿಐʼ ಸೇರಿದಂತೆ ಹಲವು ವಹಿವಾಟು ಮಾಡುವುದರಲ್ಲಿ ಮಾಲೀಕರಿಗೆ ಅಥವಾ ಚಾಲಕರಿಗೆ ಹೆಚ್ಚು ಸಹಾಯ ಮಾಡುತ್ತದೆ. ಆದರೆ, ಇದರಲ್ಲಿ ಪ್ರಮುಖ ಸಮಸ್ಯೆ ಎಂದರೆ ಲಾರಿ ಚಾಲಕರು ತಂತ್ರಜ್ಞಾನವನ್ನು ಕಡಿಮೆ ಬಳಕೆ ಮಾಡುವುದು. ಹಾಗಾಗಿ ಇದರಿಂದ ಇಂಧನ, ಆಹಾರ, ಟೋಲ್ ತೆರಿಗೆ ಪಾವತಿಸುವುದು ಮತ್ತು ಇನ್ನೂ ಹಲವು ವಾಹನಕ್ಕೆ ಸಂಬಂಧಿಸಿದ ತೊಂದರೆಗಳನ್ನು ಚಾಲಕರಿಗೆ ನಿಭಾಯಿಸಲು ಸಾಧ್ಯವಾಗುತ್ತಿಲ್ಲ.

ಈ ಸುದ್ದಿ ಓದಿದ್ದೀರಾ? ಸರ್ಕಾರಿ ಬಸ್ ಚಾಲಕನ ಮಗನಿಗೆ ಐಪಿಎಸ್‌ ಹುದ್ದೆ: ಯುಪಿಎಸ್‌ಸಿ ಪರೀಕ್ಷೆಯಲ್ಲಿ 569ನೇ ರ್‍ಯಾಂಕ್

ಲಾರಿ ನಿರ್ವಹಣೆಗೆ ತಂತ್ರಜ್ಞಾನ 
ಲಾರಿ ನಿರ್ವಹಣೆಗೆ ತಂತ್ರಜ್ಞಾನ ಬಳಸುವುದರಿಂದ ಮಾಲೀಕರಿಗೆ ಮತ್ತು ಚಾಲಕರಿಗೆ ವಾಹನದ ಸಂಪೂರ್ಣ ಮಾಹಿತಿ ಲಭ್ಯವಾಗುತ್ತದೆ. ಕಂಪನಿಗಳು ಈ ತಂತ್ರಜ್ಞಾನದ ಮೂಲಕ ಲಾರಿ ಮತ್ತು ಚಾಲಕರ ಸುರಕ್ಷತೆ, ಎಂಜಿನ್ ಸಮಯ, ಮಾರ್ಗದ ಕಾರ್ಯಕ್ಷಮತೆ, ಇಂಧನ ನಿರ್ವಹಣೆ ಮತ್ತು ಹೆಚ್ಚಿನ ನಿಗಾವಹಿಸಲು ಸಾಧ್ಯವಾಗುತ್ತದೆ. ಸಮಸ್ಯೆಗಳು ಕಂಡುಬಂದಲ್ಲಿ ತುರ್ತು ಕ್ರಮಕೈಗೊಳ್ಳಲು ತಂತ್ರಜ್ಞಾನ ಸಹಾಯ ಮಾಡುತ್ತದೆ.

ಲಾರಿಯ ಡೇಟಾ ವಿಶ್ಲೇಷಣೆಗಳನ್ನು ಪಡೆಯಬಹುದು
ದೊಡ್ಡ ಪ್ರಮಾಣದಲ್ಲಿ ಡೇಟಾಗಳನ್ನು ಮಾಲೀಕರು ಲಾರಿಗಳ ನಿರ್ವಹಣೆ ಸಹಾಯದಿಂದ ಪಡೆಯಬಹುದು. ಉದಾಹರಣೆಗೆ ಅಡಚಣೆಗಳನ್ನು ಗುರುತಿಸುವುದು, ದಾಖಲೆಗಳನ್ನು ನಿರ್ವಹಣೆ ಮಾಡುವುದು, ವಹಿವಾಟಿನ ಹಿಸ್ಟರಿ ನೋಡುವುದು ಮತ್ತು ಪ್ರತಿನಿತ್ಯದ ರಶೀದಿಗಳು ಇತ್ಯಾದಿ ಸೇರಿ ಹಲವು ದಾಖಲೆಗಳನ್ನು ತಂತ್ರಜ್ಞಾನ ಬಳಸಿ ಪ್ರಪಂಚದ ಯಾವ ಮೂಲೆಯಿಂದ ಕೂಡ ಮಾಲೀಕರು ನೋಡಿ ಸಮಸ್ಯೆಗಳನ್ನು ಸರಿಮಾಡುವ ಸಾಮರ್ಥ್ಯವನ್ನು ಹಾಗೂ ಪ್ರಯಾಣದ ಮಾರ್ಗಗಳನ್ನು ವ್ಯಾಖ್ಯಾನಿಸಿ ಅನುಮಾನಾಸ್ಪದ ಮೂಲಸೌಕರ್ಯದೊಂದಿಗೆ ನೆಟ್‌ವರ್ಕನ್ನು ಪತ್ತೆ ಮಾಡಬಹುದು. ಜೊತೆಗೆ ಪ್ರಯಾಣದ ದಿನಗಳು ಮತ್ತು ಸಮಯದ ಅಂದಾಜು ಸಹ ಲೆಕ್ಕ ಹಾಕಬಹುದಂತಹ ಸೌಲಭ್ಯ ತಂತ್ರಜ್ಞಾನ ನೀಡಲಿದೆ.

ಮೊಬೈಲ್ ಅಪ್ಲಿಕೇಶನ್‌ಗಳಲ್ಲಿ ತಂತ್ರಜ್ಞಾನ ಬಳಕೆ
ಇತ್ತೀಚಿನ ದಿನಗಳಲ್ಲಿ ಮೊಬೈಲ್ ನೆಟ್‌ವರ್ಕಿಂಗ್‌ ಮೂಲಕ ಹಲವು ದೊಡ್ಡ ಕಂಪನಿಗಳು ತಂತ್ರಜ್ಞಾನ ಬಳಸಿ ಕೆಲವು ಅಪ್ಲಿಕೇಶನ್‌ಗಳನ್ನು ಅಭಿವೃದ್ಧಿಪಡಿಸಿವೆ. ಇದರಿಂದ ಆನ್‌ಲೈನ್‌ ಸಾರಿಗೆ ಮೂಲಕ ಚಾಲಕರೊಂದಿಗೆ ಉತ್ತಮ ಸಂಪರ್ಕ ಮಾಡಿ ಅವರಿಗಾಗುವ ಸಮಸ್ಯೆಯನ್ನು ಬಗೆಹರಿಸಬಹುದು. ಹೀಗೆ ಮಾಡುವುದರಿಂದ ಲಾರಿ ಚಾಲಕರಿಗೆ ಸುರಕ್ಷಿತ ಪ್ರಯಾಣ ಮಾಡುವುದಕ್ಕೆ ತಂತ್ರಜ್ಞಾನ ಪ್ರಮುಖ ಪಾತ್ರ ನಿರ್ವಹಿಸುತ್ತದೆ. 

ಚಾಲಕರು ಮತ್ತು ವಾಹನದ ಸುರಕ್ಷತೆ
ಎಲ್ಲ ಲಾರಿ ಮಾಲೀಕರಿಗೆ ಅವರ ಚಾಲಕರ ಸುರಕ್ಷತೆಯೆ ಮೊದಲ ಆದ್ಯತೆ. ಆದ್ದರಿಂದ ಸುರಕ್ಷತೆ ವಹಿಸಲು ಮಾಲೀಕರು ಮತ್ತು ಲಾರಿ ಸಂಸ್ಥೆಗಳು ತಮ್ಮ ವಾಹನಗಳಿಗೆ ಉತ್ತಮ ತಂತ್ರಜ್ಞಾನದ 'ಬ್ಲೈಂಡ್ ಸ್ಪಾಟ್ ಮಿರರ್‌'ಗಳು, ಲೇನ್ ನಿರ್ಗಮನ ಎಚ್ಚರಿಕೆಗಳು, ಸ್ವಯಂಚಾಲಿತ ತುರ್ತು ಬ್ರೇಕಿಂಗ್ ಸಿಸ್ಟಮ್‌ಗಳು, ಟ್ರಕ್ ಡ್ಯಾಶ್ ಕ್ಯಾಮರಾಗಳು ಮತ್ತು ಹೆಚ್ಚಿನ ಸುರಕ್ಷತಾ ಉಪಕರಣಗಳನ್ನು ನೀಡುವ ಮೂಲಕ ಚಾಲಕರ ಪ್ರಯಾಣವನ್ನು ಸುಖಕರ ಮಾಡಬಹುದು.

ಪ್ರಸ್ತುತ ಈ ಎಲ್ಲ ತಂತ್ರಜ್ಞಾನಗಳು ಲಾರಿ ಉದ್ಯಮಕ್ಕೆ ತುಂಬ ಅವಶ್ಯಕವಾಗಿದೆ. ಇದರಿಂದ ಇನ್ನೂ ಹೆಚ್ಚು ಲಾಭವನ್ನು ಪಡೆಯುವ ಜೊತೆಗೆ ಚಾಲಕರ ಸುರಕ್ಷತೆಗೂ ಆದ್ಯತೆ ನೀಡಬಹುದಾಗಿದೆ. ಅಷ್ಟೇ ಅಲ್ಲದೆ ತಂತ್ರಜ್ಞಾನವು ಮುಂದುವರೆದಂತೆ, ಲಾರಿ ಉದ್ಯಮವು ಮತ್ತಷ್ಟು ಅಭಿವೃದ್ಧಿಯಾಗುತ್ತದೆ ಮತ್ತು ಉದ್ಯಮಕ್ಕೆ ಪ್ರಯೋಜನಗಳನ್ನು ವಿಸ್ತರಿಸುತ್ತವೆ.

ನಿಮಗೆ ಏನು ಅನ್ನಿಸ್ತು?
2 ವೋಟ್